ಕರ್ನಾಟಕ

karnataka

ಸವಾರಿ ತೊಟ್ಟಿಯಲ್ಲಿ ಯದುವೀರ್​ರಿಂದ ಸಾಂಪ್ರದಾಯಿಕ ಆಯುಧ ಪೂಜೆ

By

Published : Oct 14, 2021, 2:08 PM IST

Updated : Oct 14, 2021, 2:36 PM IST

ಸವಾರಿ ತೊಟ್ಟಿಯಲ್ಲಿ ಯದುವೀರ್​ರಿಂದ ಸಾಂಪ್ರದಾಯಿಕ ಆಯುಧ ಪೂಜೆ

ಮೈಸೂರು ರಾಜಮನೆತನದ ಪೂರ್ವಿಕ ರಾಜರು ಬಳಸುತ್ತಿದ್ದ ಕತ್ತಿ, ಗುರಾಣಿ, ಈಟಿ ಸೇರಿದಂತೆ ಎಲ್ಲಾ ಆಯುಧಗಳಿಗೆ ಸವಾರಿ ತೊಟ್ಟಿಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿದರು.

ಮೈಸೂರು:ಇಂದು ನಾಡಿ‌ನೆಲ್ಲೆಡೆ ಆಯುಧ ಪೂಜೆ ಸಂಭ್ರಮ ಕಳೆಗಟ್ಟಿದ್ದು, ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿಯೂ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನೆರವೇರಿತು.

ಇಂದು ಬೆಳಗ್ಗೆ5.30 ರಿಂದ ಆಯುಧ ಪೂಜಾ ವಿಧಿ ವಿಧಾನಗಳು ಆರಂಭವಾಗಿದ್ದು, 7.45ಕ್ಕೆ ರಾಜಪರಿವಾರದ ಪಟ್ಟದ ಆನೆ, ಕುದುರೆ, ಹಸು, ಒಂಟೆ, ಕತ್ತಿ, ಪಲ್ಲಕ್ಕಿ ಸೇರಿದಂತೆ ರಾಜರ ಎಲ್ಲಾ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಾಲಯಕ್ಕೆ ರವಾನಿಸಲಾಯಿತು.

ಸವಾರಿ ತೊಟ್ಟಿಯಲ್ಲಿ ಯದುವೀರ್​ರಿಂದ ಸಾಂಪ್ರದಾಯಿಕ ಆಯುಧ ಪೂಜೆ

ಇದನ್ನೂ ಓದಿ: ಯದುವೀರ್‌ ಆಯುಧ ಪೂಜಾ ಕೈಂಕರ್ಯವನ್ನು ತದೇಕಚಿತ್ತದಿಂದ ವೀಕ್ಷಿಸಿದ ಪುತ್ರ ಆದ್ಯವೀರ್

ಕೋಡಿ ಸೋಮೇಶ್ವರ ದೇವಾಲಯದಲ್ಲಿ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ದೇಗುಲದಿಂದ ಅರಮನೆಯ ಕಲ್ಯಾಣ ಮಂಟಪಕ್ಕೆ ಕೊಂಡೊಯ್ಯಲಾಯಿತು. ಬೆಳಗ್ಗೆ 11.02 ರಿಂದ 11.22ರ ವೇಳೆಗೆ ರಾಜಮನೆತನದ ಪೂರ್ವಿಕ ರಾಜರು ಬಳಸುತ್ತಿದ್ದ ಕತ್ತಿ, ಗುರಾಣಿ, ಈಟಿ ಸೇರಿದಂತೆ ಎಲ್ಲಾ ಆಯುಧಗಳಿಗೆ ಸವಾರಿ ತೊಟ್ಟಿಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿದರು. ಹಾಗೆಯೇ ರಾಜಮನೆತನದ ಕಾರುಗಳಿಗೆ ಕೂಡ ಪೂಜೆ ಸಲ್ಲಿಸಿದರು.

Last Updated :Oct 14, 2021, 2:36 PM IST

ABOUT THE AUTHOR

...view details