ಕರ್ನಾಟಕ

karnataka

ಸರಣಿ ಹತ್ಯೆ; ಸಂಘಟನೆಗಳ ಪಾತ್ರವಿದ್ದರೆ ಚಾರ್ಜ್ ಶೀಟ್​​ನಲ್ಲಿ ಅದನ್ನೂ ದಾಖಲಿಸುತ್ತೇವೆ: ಡಿಜಿಪಿ ಸೂದ್

By

Published : Aug 1, 2022, 2:32 PM IST

ಮೂರು ಕೇಸ್​​ಗಳಲ್ಲೂ ನ್ಯಾಯಯುತವಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವರು ನೀಡಿರುವ ಸಲಹೆಯಂತೆ ಗಡಿ ಭಾಗದಲ್ಲಿ ಹ್ಯೂಮನ್ ಮತ್ತು ಟೆಕ್ನಿಕಲ್ ಕೆಲಸಗಳನ್ನು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪೊಲೀಸ್ ಬಲ ಜಾಸ್ತಿ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದರು

DGP Praveen Sood
ಡಿಜಿಪಿ ಪ್ರವೀಣ್ ಸೂದ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣದಲ್ಲಿ ಯಾವುದೇ ಸಂಘಟನೆಗಳ ಪಾತ್ರವಿದ್ದರೆ ತನಿಖೆ ಪೂರ್ಣಗೊಂಡ ಬಳಿಕ ಚಾರ್ಜ್ ಶೀಟ್​​ನಲ್ಲಿ ದಾಖಲು ಮಾಡುತ್ತೇವೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಐಜಿಪಿ, ಕಮಿಷನರ್, ಎಸ್​ಪಿ ಮತ್ತು ಜಿಲ್ಲಾಧಿಕಾರಿಗಳ ಜೊತೆಗೆ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಯಾವುದೇ ಅಪರಾಧಗಳ ತನಿಖೆ ನಾಲ್ಕು ಹಂತದಲ್ಲಿ ನಡೆಸುತ್ತೇವೆ. ತನಿಖೆ ಪೂರ್ಣಗೊಂಡಾಗ ಸಂಘಟನೆಯ ಪಾತ್ರವಿದ್ದರೆ, ಅದನ್ನುಅದನ್ನು ಚಾರ್ಜ್ ಶೀಟ್​​ನಲ್ಲಿ ದಾಖಲಿಸಿ ಕೋರ್ಟ್​ಗೆ ನೀಡುತ್ತೇವೆ ಎಂದರು.

ಡಿಜಿಪಿ ಪ್ರವೀಣ್ ಸೂದ್ ಪ್ರತಿಕ್ರಿಯೆ

ಖಾಕಿ ಬಟ್ಟೆ ಹಾಕಿಕೊಂಡ ಮೇಲೆ ಯಾವುದೇ ಮರ್ಡರ್ ಆದರೂ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮೃತದೇಹ ಅಂತಾ ನೋಡುವುದಿಲ್ಲ. ಸತ್ತವರು ಯಾವುದೇ ಧರ್ಮ ಇದ್ದರೂ ಒಂದೇ ರೀತಿಯಲ್ಲಿ ನೋಡುತ್ತೇವೆ. ನಮಗೆ ಪ್ರತಿ ಪ್ರಕರಣವು ಮುಖ್ಯ. ಯಾವುದೇ ಪ್ರಕರಣ ಪತ್ತೆ ಮಾಡಲು ಸುಲಭವಲ್ಲ. ಪ್ರತಿ ಪ್ರಕರಣವನ್ನು ಪತ್ತೆ ಮಾಡಲು ಕಷ್ಟವಿದೆ.

ಪತ್ತೆ ಮಾಡುವ ಕಷ್ಟದ ಬಗ್ಗೆ ಭಯ ಇಲ್ಲ. ನಾವು ತನಿಖೆಯನ್ನು ಸರಿಯಾದ ಸಾಕ್ಷಿ ಸಮೇತ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಹತ್ಯೆ ಪ್ರಕರಣ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಇಂತಹ ಘಟನೆ ಮುಂದೆ ಆಗದಂತೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸಲಹೆ ನೀಡಿದ್ದೇನೆ ಎಂದರು.

ಮೂರು ಕೇಸ್​​ಗಳಲ್ಲೂ ನ್ಯಾಯಯುತವಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವರು ನೀಡಿರುವ ಸಲಹೆಯಂತೆ ಗಡಿ ಭಾಗದಲ್ಲಿ ಹ್ಯೂಮನ್ ಮತ್ತು ಟೆಕ್ನಿಕಲ್ ಕೆಲಸಗಳನ್ನು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪೊಲೀಸ್ ಬಲ ಜಾಸ್ತಿ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದರು.

ಹತ್ಯೆ ಬಳಿಕ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣಾ ಪೊಲೀಸರ ವರ್ಗಾವಣೆಯಿಂದ ತನಿಖೆಗೆ ಹಿನ್ನೆಡೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಕೇಸ್​​ನಲ್ಲಿ ಆಯಾ ಪೊಲೀಸ್ ಠಾಣೆಯವರು ಮಾತ್ರವಲ್ಲದೇ, ಬೇರೆ ಬೇರೆ ಕಡೆಯಿಂದ ಪೊಲೀಸರು ಕೆಲಸ ಮಾಡುತ್ತಾರೆ. ಕಾನ್ಸ್​​ಟೇಬಲ್​ನಿಂದ ಹಿಡಿದು ಡಿಜಿ ತನಕ ತನಿಖೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಪ್ರವೀಣ್​ ಸೂದ್​ ಹೇಳಿದರು.
ಇದನ್ನೂ ಓದಿ: ಗೃಹ ಸಚಿವ ನಿವಾಸ ಮುತ್ತಿಗೆ: ಪ್ರವೀಣ್ ಕೊಲೆ ಪ್ರಕರಣದ ಪ್ರಗತಿ ಬಗ್ಗೆ ಡಿಜಿಪಿ ಸೂದ್​ಗೆ ಸಿಎಂ ತರಾಟೆ

ABOUT THE AUTHOR

...view details