ಗೃಹ ಸಚಿವ ನಿವಾಸ ಮುತ್ತಿಗೆ: ಪ್ರವೀಣ್ ಕೊಲೆ ಪ್ರಕರಣದ ಪ್ರಗತಿ ಬಗ್ಗೆ ಡಿಜಿಪಿ ಸೂದ್​ಗೆ ಸಿಎಂ ತರಾಟೆ

author img

By

Published : Jul 30, 2022, 2:31 PM IST

cm-bommai-expressed-displeasure-on-senior-officials
ಗೃಹ ಸಚಿವ ನಿವಾಸ ಮುತ್ತಿಗೆ, ಪ್ರವೀಣ್ ಕೊಲೆ ಪ್ರಕರಣದ ಪ್ರಗತಿ ಬಗ್ಗೆ ಡಿಜಿಪಿ ಸೂದ್​ಗೆ ಸಿಎಂ ತರಾಟೆ ()

ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ ಹಾಗೂ ಪ್ರವೀಣ್ ಹತ್ಯೆ ಪ್ರಕರಣ ಪ್ರಗತಿ ಬಗ್ಗೆ ಹಿರಿಯ ಅಧಿಕಾರಿಗಳ ಮೇಲೆ ಸಿಎಂ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ ಹಾಗೂ ಪ್ರವೀಣ್ ಹತ್ಯೆ ಪ್ರಕರಣ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿಜಿಪಿಯನ್ನು ತರಾಟೆಗೆ ತೆಗೆದುಕೊಂಡರು. ಶನಿವಾರ ಬೆಳಗ್ಗೆ ಡಿಜಿಪಿ ಪ್ರವೀಣ್ ಸೂದ್ ಹಾಗೂ ಗುಪ್ತಚರ ಇಲಾಖೆ ಮುಖ್ಯಸ್ಥ ಬಿ. ದಯಾನಂದ್ ರೇಸ್ ವಿವ್ ನಿವಾಸದಲ್ಲಿ ಸಿಎಂ ಬೊಮ್ಮಾಯಿ‌ ಅವರನ್ನು ಭೇಟಿಯಾದರು. ಈ ವೇಳೆ, ಸಿಎಂ ಬೊಮ್ಮಾಯಿ‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸದ ಎದುರು ಎಬಿವಿಪಿ ಪ್ರತಿಭಟನೆಯ ಬಗ್ಗೆ ರಾಜ್ಯ ಗುಪ್ತಚರ ವಿಭಾಗ, ಪೊಲೀಸ್ ವಿಭಾಗಗಳಿಗೆ ಮಾಹಿತಿಯೇ ಗೊತ್ತಿಲ್ಲ. ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕುವ ಮಾಹಿತಿ ಸಿಕ್ಕಿಲ್ಲ ಅಂದರೆ ಹೇಗೆ?. ಈ ಪ್ರತಿಭಟನೆಯಿಂದ ಸರ್ಕಾರಕ್ಕೆ ಭಾರಿ ಮುಜುಗರವಾಗಿದೆ. ಹೀಗಾಗಿ ಇಬ್ಬರೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರವೀಣ್ ಹತ್ಯೆ ಖಂಡಿಸಿ ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ, ಲಘು ಲಾಠಿ ಚಾರ್ಜ್

ಅಲ್ಲದೆ, ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸ್ ತನಿಖೆಯ ವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ನಾಲ್ಕು ದಿನಗಳಾಗಿದರೂ ಆರೋಪಿಗಳನ್ನು ಬಂಧಿಸಿಲ್ಲ. ಯಾವ ರೀತಿ ತನಿಖೆ ಮಾಡುತ್ತಿದ್ದೀರಾ ಎಂದು ಗರಂ ಆಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಎಬಿವಿಪಿ ಪ್ರತಿಭಟನೆ ವಿಚಾರ: ಸಿದ್ದರಾಮಯ್ಯ ಸರ್ಟಿಫಿಕೇಟ್​ ನನಗೆ ಬೇಕಿಲ್ಲ, ತಿರುಗೇಟು ಕೊಟ್ಟ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.