ಕರ್ನಾಟಕ

karnataka

ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿ ಬಿದ್ದ ಕಾರು

By

Published : Mar 29, 2021, 1:41 PM IST

ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಟೊಯೋಟಾ ಕಂಪನಿಯ ಇಟಿಯೋಸ್ ಕಾರು ಮರ್ಧಾಳ ಸಮೀಪದ ಚಾಕಟೆಕೆರೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ.

ರಸ್ತೆ ಅಪಘಾತ
ರಸ್ತೆ ಅಪಘಾತ

ಸುಬ್ರಹ್ಮಣ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದ ಘಟನೆ ಧರ್ಮಸ್ಥಳ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳದ ಬಳಿ ನಡೆದಿದೆ.

ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಟೊಯೋಟಾ ಕಂಪನಿಯ ಇಟಿಯೋಸ್ ಕಾರು ಮರ್ಧಾಳ ಸಮೀಪದ ಚಾಕಟೆಕೆರೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟದಲ್ಲಿದ್ದ ರಬ್ಬರ್ ಶೀಟ್ ಮಾಡುವ ಶೆಡ್ ಮೇಲೆ ಉರುಳಿ ಬಿದ್ದಿದೆ.

ಇನ್ನು ಅದೃಷ್ಟವಶಾತ್ ಘಟನೆಯಿಂದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಬ್ಬರ್ ಶೀಟ್ ಮಾಡುವ ಯಂತ್ರಕ್ಕೆ ಹಾಗೂ ಶೆಡ್​ಗೆ ಹಾನಿಯಾಗಿದೆ ಎನ್ನಲಾಗಿದೆ.

ABOUT THE AUTHOR

...view details