ಕರ್ನಾಟಕ

karnataka

ಮಂಜೂರಾಗಿದ್ದ ಅನುದಾನದಲ್ಲಿ ₹20 ಕೋಟಿ ಕಡಿತ​: ಬಿಜೆಪಿ ವಿರುದ್ಧ ಪ್ರಿಯಾಂಕ್​ ಖರ್ಗೆ ಗರಂ

By

Published : Jan 2, 2020, 12:11 PM IST

ಉಪಮುಖ್ಯಮಂತ್ರಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ, ಕಡಿತಗೊಳಿಸಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

Priyank M. Kharge
ಪ್ರಿಯಾಂಕ್ ಖರ್ಗೆ

ಕಲಬುರಗಿ: ಮೈತ್ರಿ ಸರ್ಕಾರದಲ್ಲಿ ಚಿಂಚೋಳಿ ಕ್ಷೇತ್ರದ ಅಭಿವೃದ್ಧಿಗಾಗಿ ಎಸ್​​ಸಿಸಿ‌ಪಿ ಹಾಗೂ ಟಿಎಸ್​ಪಿ ಯೋಜನೆಯಡಿ ಮಂಜೂರು ಮಾಡಲಾಗಿದ್ದ ₹ 30 ಕೋಟಿ ಅನುದಾನದಲ್ಲಿ ಬಿಜೆಪಿ ಸರ್ಕಾರ ₹ 20 ಕೋಟಿ ಕಡಿತಗೊಳಿಸಿರುವ ಕಾರಣ ಶಾಸಕ ಪ್ರಿಯಾಂಕ್ ಖರ್ಗೆ ಅವರು ಟ್ವಿಟರ್​ನಲ್ಲಿ ಫುಲ್​ ಗರಂ ಆಗಿದ್ದಾರೆ.

ಮೈತ್ರಿ ಸರ್ಕಾರ ಅನುದಾನ ಬಿಡುಗಡೆ ಮಾಡದ ಕಾರಣ ಕಾಂಗ್ರೆಸ್ ಬಿಟ್ಟು ಬಿಜೆಪಿ‌ ಸೇರಿರುವುದಾಗಿ ಜಾಧವ್ ಹೇಳಿದ್ದರು. ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಬಿಡುಗಡೆಗೆ ಮಂಜೂರು ಮಾಡಿದ್ದ ₹ 30 ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ₹ 10 ಕೋಟಿಗೆ ಇಳಿಸಿದೆ. ಅದನ್ನು ಮತ್ತೆ ರೂ 30 ಕೋಟಿ ಮಾಡಲು ಪತ್ರ ಬರೆದು ಆಗ್ರಹಿಸಿದ್ದೇನೆ. ಇದು ಜಾಧವ್ ಅವರಿಗೆ ಅನುಕೂಲವಾಗುತ್ತದೆ ಎನ್ನುವ ಭರವಸೆ ನನಗಿದೆ ಅಥವಾ ಅವರು ಮತ್ತೊಮ್ಮೆ ಪಕ್ಷ ತೊರೆಯಬೇಕಾಗುತ್ತದೆ ಎಂದು ಟ್ವಿಟರ್​​ನಲ್ಲಿ ಪ್ರಿಯಾಂಕ್​ ಖರ್ಗೆ ಕುಟುಕಿದ್ದಾರೆ.

ಉಪಮುಖ್ಯಮಂತ್ರಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದಿದ್ದಾರೆ. ಅನುದಾನದ ಬಳಕೆಗಾಗಿ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ಪ್ರಾರಂಭಿಸುವ ಹಂತದಲ್ಲಿರುವಾಗಲೇ ರಾಜ್ಯ ಸರ್ಕಾರ ಅನುದಾನ ಕಡಿತಗೊಳಿಸಿ ಉಳಿದ ಮೊತ್ತಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಲ್ಲಿಸಲು ಆದೇಶಿಸಿದೆ. ತಡೆ ಹಿಡಿದಿರುವ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಿ ಎಂದು ಆಗ್ರಹಿಸಿದ್ದಾರೆ.

Intro:ಕಲಬುರಗಿ: ಹಿಂದಿನ ಮೈತ್ರಿ ಸರ್ಕಾರದಲ್ಲಿ ಬಿಡುಗಡೆ ಮಾಡಿದ ರೂ 30 ಕೋಟಿ ಅನುದಾನದಲ್ಲಿ‌ ಈಗಿನ ಬಿಜೆಪಿ ಸರಕಾರ ರೂ 20 ಕೋಟಿ ಕಡಿತಗೊಳಿಸಿದೆ ಎಂದು ಉಲ್ಲೇಖಿಸಿ ಶಾಸಕ ಪ್ರಿಯಾಂಕ್ ಖರ್ಗೆ ಕಲಬುರಗಿ ಎಂಪಿ ಉಮೇಶ್ ಜಾಧವ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.Body:ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ " ನಮ್ಮ ಸರಕಾರ ಅನುದಾನ ಬಿಡುಗಡೆ ಮಾಡಲಿಲ್ಲ ಹಾಗಾಗಿ ಕಾಂಗ್ರೆಸ್ ಬಿಟ್ಟು ಬಿಜೆಪಿ‌ ಸೇರಿದ್ದಾಗಿ ಜಾಧವ್ ಅವರು ಹೇಳಿಕೊಂಡಿದ್ದರು. ನಾನು ಸಮಾಜಕಲ್ಯಾಣ ಸಚಿವನಾಗಿದ್ದಾಗ ಬಿಡುಗಡೆ ಮಾಡಿದ್ದ ರೂ 30 ಕೋಟಿ ಅನುದಾನವನ್ನು ಬಿಜೆಪಿ ಸರಕಾರ ರೂ 10 ಕೋಟಿಗೆ ಇಳಿಸಿದೆ. ಅದನ್ನು ಮತ್ತೆ ರೂ 30 ಕೋಟಿ ಮಾಡಲು ನಾನು ಪತ್ರ ಬರೆದು ಆಗ್ರಹಿಸಿದ್ದೇನೆ. ಇದು ಜಾಧವ್ ಅವರಿಗೆ ಅನುಕೂಲವಾಗುತ್ತದೆ ಎನ್ನುವ ಭರವಸೆ ನನಗಿದೆ ಅಥವಾ ಅವರು ಮತ್ತೊಮ್ಮೆ ಪಕ್ಷ ತೊರೆಯಬೇಕಾಗುತ್ತದೆ" ಎಂದು ಕುಟುಕಿದ್ದಾರೆ.

ಇನ್ನು ಚಿಂಚೋಳಿ ಮತಕ್ಷೇತ್ರಕ್ಕೆ 30 ಕೋಟಿ ಅನುದಾನದಲ್ಲಿ ಕಡಿತಗೊಳಿಸಲಾಗಿರುವ ರೂ 20 ಕೋಟಿ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಶಾಸಕ ಪ್ರಿಯಾಂಕ್ ಖರ್ಗೆ ಸರಕಾರಕ್ಕೆ ಆಗ್ರಹಿಸಿದ್ದಾರೆ. ಉಪಮುಖ್ಯಮಂತ್ರಿಗಳು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ, ನಾನು ಸಚಿವರಾಗಿದ್ದಾಗ ಚಿಂಚೋಳಿ ಮತಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದು, ಎಸ್ ಸಿ ಸಿ‌ಪಿ ಹಾಗೂ ಟಿ ಎಸ್ ಪಿ ಯೋಜನಯಡಿಯಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ರೂ 20 ಕೋಟಿ ಹಾಗೂ ಪಟ್ಟಣ ಪ್ರದೇಶದ ಅಭಿವೃದ್ದಿಗೆ ರೂ 10 ಕೋಟಿ ಹೀಗೆ ಒಟ್ಟು ರೂ 30 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಅನುದಾನದ ಬಳಕೆಗಾಗಿ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ಪ್ರಾರಂಭಿಸುವ ಹಂತದಲ್ಲಿರುವಾಗಲೇ ರಾಜ್ಯ ಸರಕಾರ ರೂ 20 ಕೋಟಿ ಅನುದಾನದಲ್ಲಿ ಕಡಿತಗೊಳಿಸಿ ಕೇವಲ ರೂ 10 ಕೋಟಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಲ್ಲಿಸಲು ಆದೇಶಿಸಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿ ಈ ಕೂಡಲೇ ತಡೆ ಹಿಡಿದಿರುವ ರೂ 20 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ ಒಟ್ಟು ರೂ 30 ಕೋಟಿ ಅನುದಾನದಲ್ಲಿ ಕ್ಷೇತ್ರ ಅಭಿವೃದ್ದಿಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.Conclusion:

ABOUT THE AUTHOR

...view details