ಕರ್ನಾಟಕ

karnataka

ಕರ್ನಾಟಕದ ಹೈಕೋರ್ಟ್ ಪೀಠ ಐತಿಹಾಸಿಕ ತೀರ್ಪು ಕೊಟ್ಟಿದೆ.. ಹಿರೇಮಠ

By

Published : Aug 14, 2022, 4:25 PM IST

ಸಿಎಂ ಹೈಕೋರ್ಟ್ ತೀರ್ಪು ಜಾರಿ ಮಾಡುತ್ತೇವೆ ಎಂದಿದ್ದಾರೆ, ಅದನ್ನು ನಾವು ಸ್ವಾಗತಿಸುತ್ತೇವೆ. ವಿಪಕ್ಷದಲ್ಲಿ ಇದ್ದಾಗ ರಾಜಕಾರಣಿಗಳು ಲೋಕಾಯುಕ್ತ ಬೆಂಬಲಿಸ್ತಾರೆ. ಅಧಿಕಾರಕ್ಕೆ ಬಂದ ಬಳಿಕ ದುರ್ಬಲಗೊಳಿಸ್ತಾರೆ ಎಂದು ಎಸ್ ಆರ್ ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು.

s-r-hiremath
ಹಿರೇಮಠ

ಧಾರವಾಡ : ಕರ್ನಾಟಕದ ಹೈಕೋರ್ಟ್ ಪೀಠ ಐತಿಹಾಸಿಕ ತೀರ್ಪು ಕೊಟ್ಟಿದೆ. 2016 ರಲ್ಲಿ ಆಗಿನ ಸಿಎಂ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಮಾಡಬಾರದ ಮಹಾಪರಾಧ ಮಾಡಿದ್ದರು. ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಲೋಕಾಯುಕ್ತದ ಅಧಿಕಾರ ತೆಗೆದಿದ್ದರು. ರಾಜ್ಯದ ಜನತೆಗೆ ವಿಶ್ವಾಸಘಾತ ಮಾಡಿ ಎಸಿಬಿ ರಚಿಸಿದ್ದರು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ವಾಗ್ದಾಳಿ ನಡೆಸಿದರು.

ತಮ್ಮ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದ್ದರು. ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಸಿದ್ದರಾಮಯ್ಯ ಸಿಎಂ ಆದಾಗ ಅವರನ್ನು ಭೇಟಿಯಾಗಿದ್ದೆವು. ಗಣಿಗಾರಿಕೆಯಲ್ಲಿ ಒಂದು ಲಕ್ಷ ಕೋಟಿ ಲೂಟಿ ಮಾಡಿದ್ದನ್ನು ಅವರಿಗೆ ತಿಳಿಸಿದ್ದೆವು. ಆಗ ಎಚ್ ಕೆ ಪಾಟೀಲ ನೇತೃತ್ವದಲ್ಲಿ ಸಮಿತಿ ಮಾಡಿದ್ದರು. ಆದರೂ ಏನೂ ಪ್ರಯೋಜನ ಆಗಲಿಲ್ಲ. ಲೋಕಾಯುಕ್ತರು ಮಾಜಿ ಸಿಎಂ ಯಡಿಯೂರಪ್ಪ ಸೇರಿ ಅನೇಕರನ್ನು ಜೈಲಿಗೆ ಕಳುಹಿಸಿದ್ದರು. ಅಕ್ರಮ‌ ಗಣಿಗಾರಿಕೆಯಲ್ಲಿ ನಾಲ್ಕು ಜನ ಕುರ್ಚಿ ಬಿಟ್ಟು ಇಳಿಬೇಕಾಗಿತ್ತು ಎಂದರು.

ಸಿಎಂ ಹೈಕೋರ್ಟ್ ತೀರ್ಪು ಜಾರಿ ಮಾಡುತ್ತೇವೆ ಎಂದಿದ್ದಾರೆ, ಅದನ್ನು ನಾವು ಸ್ವಾಗತಿಸುತ್ತೇವೆ. ವಿಪಕ್ಷದಲ್ಲಿ ಇದ್ದಾಗ ರಾಜಕಾರಣಿಗಳು ಲೋಕಾಯುಕ್ತ ಬೆಂಬಲಿಸ್ತಾರೆ. ಅಧಿಕಾರಕ್ಕೆ ಬಂದ ಬಳಿಕ ದುರ್ಬಲಗೊಳಿಸ್ತಾರೆ. ಸಿಎಂ, ಸಚಿವರು ಇವರೆಲ್ಲ ಜನರ ಸೇವಕರು. ಜನರೇ ಮಾಲೀಕರು. ಆದರೆ ಇವರೆಲ್ಲ ಲಂಚದ ಜೊತೆಗೆ ಅಧಿಕಾರ ದುರುಪಯೋಗ ಮಾಡುತ್ತಾರೆ ಎಂದು ಹಿರೇಮಠ ಕಿಡಿಕಾರಿದರು.

ಕರ್ನಾಟಕದ ಹೈಕೋರ್ಟ್ ಪೀಠ ಐತಿಹಾಸಿಕ ತೀರ್ಪು ಕೊಟ್ಟಿದೆ

ಲೋಕಾಯುಕ್ತಕ್ಕಾಗಿ ಒಂದು ಆಂದೋಲನ ಮಾಡಬೇಕಿದೆ. ಡಿಕೆಶಿ ಸರ್ಕಾರ ಸ್ವಾಧೀನಪಡಿಸಿಕೊಂಡ ಭೂಮಿಯನ್ನೇ ಖರೀದಿ ಮಾಡಿದ್ದರು. ಸಚಿವರಿದ್ದಾಗ ಖರೀದಿ ಮಾಡಿದ್ದರು. ಅದೇ ರೀತಿ ಈಗ ಶ್ರೀರಾಮಲು ಮೊನ್ನೆ ಮಾಡಿದ್ದಾರೆ. ಎಸಿಬಿಯ ಎಲ್ಲ ಕೇಸ್‌ಗಳನ್ನು ಶೀಘ್ರ ಲೋಕಾಯುಕ್ತಕ್ಕೆ ಕಳುಹಿಸಿಕೊಡಬೇಕು ಎಂದು ಹಿರೇಮಠ್ ಆಗ್ರಹಿಸಿದರು.

ಇದನ್ನೂ ಓದಿ :ಭ್ರಷ್ಟಾಚಾರ ನಿಗ್ರಹ ದಳದ ಎಲ್ಲ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ

ABOUT THE AUTHOR

...view details