ಕರ್ನಾಟಕ

karnataka

ಕುರಿ ಕಳ್ಳತನಕ್ಕೆ ಯತ್ನ: ಖದೀಮರಿಗೆ ಕೊಡಲಿ ರುಚಿತೋರಿದ ಕುರಿಗಾಹಿ

By

Published : Mar 5, 2020, 1:23 PM IST

ಕುರಿ ಕಳ್ಳತನ ಮಾಡಲು ಹೋದ ಕಳ್ಳರ ಮೇಲೆ ಕುರಿಗಾಹಿಯೊಬ್ಬ ಕೊಡಲಿಯಿಂದ ಹಲ್ಲೆ ನಡೆಸಿರುವ ಘಟನೆ ಕುಂದಗೋಳ ತಾಲೂಕಿನ ದೇವನೂರು ಗ್ರಾಮದಲ್ಲಿ ನಡೆದಿದೆ.

Attempt to Theft sheep: A shepherd onslaught an thieves
ಕುರಿ ಕಳ್ಳತನಕ್ಕೆ ಯತ್ನ: ಕಳ್ಳರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ ಕುರಿಗಾಹಿ

ಹುಬ್ಬಳ್ಳಿ: ಕುರಿ ಕಳ್ಳತನ ಮಾಡಲು ಹೋದ ಕಳ್ಳರ ಮೇಲೆ ಕುರಿಗಾಹಿಯೊಬ್ಬ ಕೊಡಲಿಯಿಂದ ಹಲ್ಲೆ ನಡೆಸಿರುವ ಘಟನೆ ಕುಂದಗೋಳ ತಾಲೂಕಿನ ದೇವನೂರು ಗ್ರಾಮದಲ್ಲಿ ನಡೆದಿದೆ.

ಕುರಿ ಕಳ್ಳತನಕ್ಕೆ ಯತ್ನ: ಕಳ್ಳರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ ಕುರಿಗಾಹಿ

ಕುಂದಗೋಳದ ಅಜೀಜ್ ಸುಂಕದ ಹಾಗೂ ಮಾಬುಸಾಬ ನಲಬಂದ ಎಂಬುವವರು ರಾತ್ರಿ ವೇಳೆ ದೇವನೂರು ಗ್ರಾಮದ ಕುರಿಗಾಹಿ ಬಸವರಾಜ ಬೆನಕನಹಳ್ಳಿ ಎಂಬುವವರ ಕುರಿಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದಾರೆ.

ಈ ವೇಳೆ, ಕುರಿಗಾಹಿ ಬಸವರಾಜ, ಕಳ್ಳತನಕ್ಕೆ ಯತ್ನಿಸಿದ ಈ ಇಬ್ಬರ ಮೇಲೆ ಕೊಡಲಿಯಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಇದರಿಂದ ಕಳ್ಳರಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದರಲ್ಲಿ ಮಾಬುಸಾಬ್ ನಲಬಂದ ಸ್ಥಿತಿ ಗಂಭೀರವಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇನ್ನು,ಈ ಸಂಬಂಧ ಕುಂದಗೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕುರಿಗಾಹಿ ಬಸವರಾಜನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details