ಕರ್ನಾಟಕ

karnataka

ರಾಜ್ಯಸಭೆ ಮೂರನೇ ಸ್ಥಾನಕ್ಕೆ ಹೊಂದಾಣಿಕೆ ಇಲ್ಲ, ಒಪ್ಪಂದವೂ ಮಾಡಿಕೊಳ್ಳಲ್ಲ: ಕಟೀಲ್

By

Published : May 31, 2022, 12:40 PM IST

Updated : May 31, 2022, 1:07 PM IST

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಮೂರು ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗಿದೆ. ಅಭ್ಯರ್ಥಿಗಳ ವಿಜಯಕ್ಕೆ ನಾವು ಯಾವುದೇ ಯಾವ ಪಕ್ಷಗಳ ಜೊತೆಯೂ ಹೊಂದಾಣಿಕೆ, ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ ಎಂದು ನಳಿನ್​ ಕುಮಾರ್​ ಕಟೀಲ್​ ಸ್ಪಷ್ಟನೆ ನೀಡಿದ್ದಾರೆ..

Nalin Kumar kateel talked to Press
ಪತ್ರಕರ್ತರೊಂದಿಗೆ ಮಾತನಾಡಿದ ನಳಿನ್​ ಕುಮಾರ್​ ಕಟೀಲ್​

ಬೆಂಗಳೂರು :ರಾಜ್ಯಸಭೆಯ ಮೂರನೇ ಸ್ಥಾನಕ್ಕಾಗಿ ಯಾರ ಜೊತೆಯೂ ಹೊಂದಾಣಿಕೆ, ಒಪ್ಪಂದ ಮಾಡಿಕೊಳ್ಳುವುದಿಲ್ಲ. ನಮಗೆ ನಮ್ಮದೇ ಆದ ಮತಗಳಿವೆ. ಮೂರನೇ ಅಭ್ಯರ್ಥಿ ಗೆಲುವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಅದರಲ್ಲಿ ನಾವು ಮೂರನೇ ಸ್ಥಾನಕ್ಕೂ ಅಭ್ಯರ್ಥಿ ಹಾಕಿದ್ದೇವೆ.

ಮೊದಲ ಅಭ್ಯರ್ಥಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಎರಡನೇ ಅಭ್ಯರ್ಥಿಯಾಗಿ ಚಿತ್ರ ನಟ, ವಕ್ತಾರ ಜಗ್ಗೇಶ್ ಹಾಗೂ ಮೂರನೇ ಅಭ್ಯರ್ಥಿ ಆಗಿ ಮಾಜಿ ಎಂಎಲ್ಸಿ ಹಾಗೂ ಖಜಾಂಚಿ ಲೇಹರ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ರಾಜ್ಯಸಭೆ ಚುನಾವಣೆ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್ ಪ್ರತಿಕ್ರಿಯೆ ನೀಡಿರುವುದು..

ಬಿಜೆಪಿಗೆ ಬಿಜೆಪಿಯದ್ದೇ ಮತ ಇದೆ‌ :ಮೂರನೇ ಅಭ್ಯರ್ಥಿ ಗೆಲ್ಲಲು ಮತಗಳ ಕೊರತೆ ನಿವಾರಣೆಗೆ ಅನುಸರಿಸುವ ಕಾರ್ಯತಂತ್ರದ ಕುರಿತು ಪ್ರತಿಕ್ರಿಯೆ ನೀಡಿದ ಕಟೀಲ್, ಜೆಡಿಎಸ್ ಸೇರಿದಂತೆ ಯಾರ ಜೊತೆಯೂ ಹೊಂದಾಣಿಕೆ ಇಲ್ಲ, ಒಪ್ಪಂದ ಇಲ್ಲ. ಬಿಜೆಪಿಗೆ ಬಿಜೆಯದ್ದೇ ಮತ ಇದೆ. ನಾವು ಗೆಲ್ಲುತ್ತೇವೆ ಎಂದರು.

ಇದನ್ನೂ ಓದಿ:ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಕೇಂದ್ರ ಸಚಿವೆ ನಿರ್ಮಲಾ‌ ಸೀತಾರಾಮನ್

Last Updated : May 31, 2022, 1:07 PM IST

ABOUT THE AUTHOR

...view details