ಕರ್ನಾಟಕ

karnataka

ನವೋದ್ಯಮ ವಲಯದಲ್ಲಿ ಬರ್ಲಿನ್ ಪ್ರಾಂತ್ಯದ ಜತೆ ರಾಜ್ಯದ ಒಡಂಬಡಿಕೆ: ಸಚಿವ ಅಶ್ವತ್ಥ ನಾರಾಯಣ

By

Published : Apr 2, 2022, 7:54 AM IST

ಜರ್ಮನಿಯ ಕಂಪನಿಗಳಾದ ಬಾಶ್, ಟಿ-ಸಿಸ್ಟಮ್ಸ್, ಮರ್ಸಿಡಿಸ್ ಮುಂತಾದ ಕಂಪನಿಗಳು ಅತ್ಯಾಧುನಿಕ ಆವಿಷ್ಕಾರಗಳನ್ನು ನಡೆಸುತ್ತಿವೆ. ಈ ಒಡಂಬಡಿಕೆಯು ಕರ್ನಾಟಕ ಮತ್ತು ಬರ್ಲಿನ್ ನಡುವಿನ ಕೈಗಾರಿಕಾ ಬಾಂಧವ್ಯವನ್ನು ಇನ್ನೊಂದು ಮಜಲಿಗೆ ಕೊಂಡೊಯ್ಯಲಿದೆ ಎಂದು ಸಚಿವ ಡಾ. ಸಿ. ಎನ್ ಅಶ್ವತ್ಥ ನಾರಾಯಣ ಬಣ್ಣಿಸಿದ್ದಾರೆ.

State Treaty with the Province of Berlin says Minister Ashwatha Narayana
ನವೋದ್ಯಮ ವಲಯದಲ್ಲಿ ಬರ್ಲಿನ್ ಪ್ರಾಂತ್ಯದ ಜತೆ ರಾಜ್ಯದ ಒಡಂಬಡಿಕೆ: ಸಚಿವ ಅಶ್ವತ್ಥ ನಾರಾಯಣ

ಬೆಂಗಳೂರು:ನವೋದ್ಯಮ ಕ್ಷೇತ್ರದಲ್ಲಿ ಪರಸ್ಪರ ಮಾರುಕಟ್ಟೆ ವಿಸ್ತರಣೆ ಮತ್ತು ಬಲವರ್ಧನೆಯ ಗುರಿಯೊಂದಿಗೆ ಕರ್ನಾಟಕ ಮತ್ತು ಜರ್ಮನಿಯ ಬರ್ಲಿನ್ ಪ್ರಾಂತ್ಯಗಳು ಒಡಂಬಡಿಕೆಗೆ ಸಹಿ ಹಾಕಿವೆ ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ. ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಶುಕ್ರವಾರ ವರ್ಚುವಲ್​​ನಲ್ಲಿ ​ನಡೆದ ಕಾರ್ಯಕ್ರಮದಲ್ಲಿಈ ಬಗ್ಗೆ ಮಾತನಾಡಿದ ಸಚಿವರು, ಬೆಂಗಳೂರು ಮತ್ತು ಬರ್ಲಿನ್ ನಗರಗಳೆರಡೂ ನವೋದ್ಯಮಗಳ ಪಾಲಿಗೆ ಅಚ್ಚುಮೆಚ್ಚಿನ ತಾಣಗಳಾಗಿವೆ. ಈ ಒಡಂಬಡಿಕೆಯು ಮುಖ್ಯವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸ್ಮಾರ್ಟ್ ಸಿಟಿ ಅಭಿವೃದ್ಧಿ, ಇಂಡಸ್ಟ್ರಿ 4.0, ಫಿನ್-ಟೆಕ್, ಹೆಲ್ತ್ ಟೆಕ್ ಮತ್ತು ಮಹಿಳಾ ಉದ್ಯಮಿಗಳಿಗೆ ನೆರವು ನೀಡಲಿದೆ ಎಂದಿದ್ದಾರೆ.

ನವೋದ್ಯಮ ಕ್ಷೇತ್ರದಲ್ಲಿ ಪರಸ್ಪರ ಮಾರುಕಟ್ಟೆ ವಿಸ್ತರಣೆ - ವರ್ಚುವಲ್ ಕಾರ್ಯ ಕ್ರಮ

ಜರ್ಮನಿಯ ಕಂಪನಿಗಳಾದ ಬಾಶ್, ಟಿ-ಸಿಸ್ಟಮ್ಸ್, ಮರ್ಸಿಡಿಸ್ ಮುಂತಾದ ಕಂಪನಿಗಳು ಅತ್ಯಾಧುನಿಕ ಆವಿಷ್ಕಾರಗಳನ್ನು ನಡೆಸುತ್ತಿವೆ. ಈ ಒಡಂಬಡಿಕೆಯು ಕರ್ನಾಟಕ ಮತ್ತು ಬರ್ಲಿನ್ ನಡುವಿನ ಕೈಗಾರಿಕಾ ಬಾಂಧವ್ಯವನ್ನು ಇನ್ನೊಂದು ಮಜಲಿಗೆ ಕೊಂಡೊಯ್ಯಲಿದೆ ಎಂದು ಅವರು ಬಣ್ಣಿಸಿದ್ದಾರೆ. ರಾಜ್ಯದ ಹಲವು ನವೋದ್ಯಮಗಳು ಜರ್ಮನಿಯಲ್ಲಿ ವಹಿವಾಟು ನಡೆಸಲು ಉತ್ಸುಕವಾಗಿವೆ. ಅವುಗಳ ಈ ಗುರಿಯು ಒಡಂಬಡಿಕೆಯಿಂದಾಗಿ ಸುಗಮವಾಗಿ ಈಡೇರಲಿದೆ ಎಂದು ಸಚಿವರು ಹೇಳಿದ್ದಾರೆ.

ನವೋದ್ಯಮ ಕ್ಷೇತ್ರದಲ್ಲಿ ಪರಸ್ಪರ ಮಾರುಕಟ್ಟೆ ವಿಸ್ತರಣೆ - ವರ್ಚುವಲ್ ಕಾರ್ಯ ಕ್ರಮ

ಕಾರ್ಯಕ್ರಮದಲ್ಲಿ ರಾಜ್ಯ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಜರ್ಮನಿಯಲ್ಲಿನ ಭಾರತೀಯ ರಾಯಭಾರಿ ಹರೀಶ್ ಪರ್ವತನೇನಿ, ಬರ್ಲಿನ್ ಪ್ರಾಂತ್ಯದ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಮೈಕೆಲ್ ಬೀಲ್ ಮತ್ತು ಬೆಂಗಳೂರಿನಲ್ಲಿ ಇರುವ ಜರ್ಮನಿಯ ಡೆಪ್ಯುಟಿ ಕಾನ್ಸುಲ್ ಜನರಲ್ ಫ್ರೆಡರಿಕ್ ಬರ್ಗಿಲಿನ್ ಭಾಗಿಯಾಗಿದ್ದರು.

ಇದನ್ನೂ ಓದಿ:ಥಾಯ್ಲೆಂಡ್ ಜೊತೆ ಶಿಕ್ಷಣ, ಐಟಿ, ಬಿಟಿ ಸಹಕಾರಕ್ಕೆ ರಾಜ್ಯ ಉತ್ಸುಕ : ಸಚಿವ ಡಾ. ಅಶ್ವತ್ಥ​ ನಾರಾಯಣ್​

TAGGED:

ABOUT THE AUTHOR

...view details