ಕರ್ನಾಟಕ

karnataka

ಘಾಟಿ ಸುಬ್ರಮಣ್ಯನ ದರ್ಶನಕ್ಕೆ ಬಂದ ಭಕ್ತರು: ದೇವಾಲಯದ ಬಾಗಿಲು ಬಂದ್, ನಾಗರ ಕಲ್ಲುಗಳಿಗೆ ಪೂಜೆ

By

Published : Aug 13, 2021, 9:44 AM IST

ನಾಗರ ಪಂಚಮಿ ಹಿನ್ನೆಲೆಯಲ್ಲಿ ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಭಕ್ತರು ಭೇಟಿ ನೀಡಿ, ದೇವಸ್ಥಾನದ ಹೊರಗಡೆಯಲ್ಲಿರುವ ನಾಗರ ಕಲ್ಲುಗಳಿಗೆ ಹಾಲಿನ ಅಭಿಷೇಕ ಮಾಡಿ ಪೂಜೆ ಮಾಡುತ್ತಿದ್ದಾರೆ.

Ghati
Ghati

ದೊಡ್ಡಬಳ್ಳಾಪುರ: ನಾಗರ ಪಂಚಮಿಯ ದಿನ ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ದೇಗುಲದ ಬಾಗಿಲು ಬಂದ್ ಮಾಡಲಾಗಿದೆ. ದೇವಸ್ಥಾನದ ಹೊರಗಡೆಯ ನಾಗರ ಕಲ್ಲುಗಳಿಗೆ ಭಕ್ತರು ಪೂಜೆ ಮಾಡುತ್ತಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರ ನಾಗಾರಾಧನೆಯ ಪ್ರಮುಖ ಧಾರ್ಮಿಕ ಕ್ಷೇತ್ರ. ನಾಗರ ಪಂಚಮಿ ದಿನ ಘಾಟಿ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಕೊರೊನಾ ಮೂರನೇ ಅಲೆಯ ಆತಂಕವಿದ್ದು ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಇದ್ದು, ದೈನಂದಿನ ಪೂಜಾ ಕಾರ್ಯಗಳನ್ನು ಹೊರತುಪಡಿಸಿ, ವಿಶೇಷ ದಿನಗಳಾದ ಶ್ರಾವಣ ಮಾಸದ ಶನಿವಾರ, ಭಾನುವಾರ, ರಜಾ ದಿನಗಳಲ್ಲಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧಿಸಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.

ಘಾಟಿ ಸುಬ್ರಮಣ್ಯನ ದರ್ಶನಕ್ಕೆ ಬಂದ ಭಕ್ತರು

ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ದೇವಾಲಯದ ಬಾಗಿಲು ಬಂದ್ ಮಾಡಿದ್ದರೂ ಕೂಡ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ, ದೇವಸ್ಥಾನದ ಹೊರಗಡೆಯಲ್ಲಿರುವ ನಾಗರ ಕಲ್ಲುಗಳಿಗೆ ಹಾಲಿನ ಅಭಿಷೇಕ ಮಾಡಿ ಪೂಜೆ ಮಾಡುತ್ತಿದ್ದಾರೆ. ಇನ್ನು ರಾಜ್ಯ ಕೆಲವೆಡೆ ಇಂದು ಹಬ್ಬ ಆಚರಿಸುತ್ತಿದ್ದರೆ, ಇನ್ನೂ ಕೆಲವೆಡೆ ನಿನ್ನೆನೇ ಹಬ್ಬ ಆಚರಿಸಿದ್ದಾರೆ.

ಇದನ್ನೂ ಓದಿ: ನಾಗರ ಪಂಚಮಿ ಆಚರಣೆ: ಗ್ರಾಮೀಣ ಸೊಗಡಿನಲ್ಲಿ ಮಿಂಚಿದ ಮಹಿಳೆಯರು

ABOUT THE AUTHOR

...view details