ಕರ್ನಾಟಕ

karnataka

Karnataka Covid : ರಾಜ್ಯದಲ್ಲಿಂದು 263 ಮಂದಿಗೆ ಕೋವಿಡ್, 7 ಸೋಂಕಿತರ ಸಾವು

By

Published : Dec 14, 2021, 7:32 PM IST

Karnataka Covid : ಇಂದು ರಾಜ್ಯದಲ್ಲಿ 263 ಕೊರೊನಾ ಕೇಸ್​ಗಳು ಪತ್ತೆಯಾಗಿವೆ. 7 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ..

Karnataka Covid,ಕರ್ನಾಟಕ ಕೋವಿಡ್ ವರದಿ
Karnataka Covid

ಬೆಂಗಳೂರು: ರಾಜ್ಯದಲ್ಲಿಂದು 71,308 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 263 ಮಂದಿಗೆ ಸೋಂಕು ದೃಢಪಟ್ಟಿದೆ‌. ಈ ಮೂಲಕ ಸೋಂಕಿತರ ಸಂಖ್ಯೆ 30,00,934ಕ್ಕೆ ಏರಿಕೆ ಆಗಿದೆ‌.

ಇನ್ನು 327 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 29,55,465 ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿಗೆ ಇಂದು 7 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 38,275ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 7165ಕ್ಕೆ ಏರಿಕೆ ಕಂಡಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ‌.0.36ರಷ್ಟಿದೆ. ಸಾವಿನ ಪ್ರಮಾಣ ಶೇ.2.66 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿಂದು 158 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 12,59,183ಕ್ಕೆ ಏರಿದೆ. 182 ಜನರು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 12,37,306 ಗುಣಮುಖರಾಗಿದ್ದಾರೆ. ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 16,370ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 5,506 ರಷ್ಟಿದೆ.

ರೂಪಾಂತರಿ ಅಪಡೇಟ್ಸ್
ಅಲ್ಪಾ - 155
ಬೇಟಾ - 08
ಡೆಲ್ಟಾ - 2095
ಡೆಲ್ಟಾ ಸಬ್ ಲೈನ್ ಏಜ್ - 558
ಕಪ್ಪಾ -160
ಈಟಾ - 01

ಒಮಿಕ್ರಾನ್ - 03

(ಇದನ್ನೂ ಓದಿ: ಪರಿಷತ್​ ಚುನಾವಣೆ: ಗೆದ್ದ ಅಭ್ಯರ್ಥಿಗಳು ಯಾರ‌್ಯಾರು? ಇಲ್ಲಿದೆ ಫುಲ್​ ಡೀಟೇಲ್ಸ್​​!)

ABOUT THE AUTHOR

...view details