ಕರ್ನಾಟಕ

karnataka

ಪಾರ್ಕಿಂಗ್ ಶುಲ್ಕ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ವಿನೂತನ ಪ್ರತಿಭಟನೆ

By

Published : Feb 12, 2021, 4:53 PM IST

ಬಿಜೆಪಿ ಸರ್ಕಾರ ಪಾರ್ಕಿಂಗ್ ಶುಲ್ಕದ ಹೆಸರಿನಲ್ಲಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಪ್ರಯತ್ನಕ್ಕೆ ಮುಂದಾಗಿರುವುದು ಅತ್ಯಂತ ಖಂಡನೀಯ. ಕೂಡಲೇ ಪೇ & ಪಾರ್ಕಿಂಗ್ ಶುಲ್ಕದ ಹೊಸ ನೀತಿಯನ್ನು ಕೈಬಿಡಬೇಕೆಂದು ಆಗ್ರಹಿಸಿ, ಕಾಂಗ್ರೆಸ್​ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.

congress-protests-against-parking-fee-collection
ಪಾರ್ಕಿಂಗ್ ಶುಲ್ಕ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ವಿನೂತನ ಪ್ರತಿಭಟನೆ

ಬೆಂಗಳೂರು: ಸಿಎಂ ಯಡಿಯೂರಪ್ಪ ಮುಖವಾಡ ಧರಿಸಿದ ಕಾಂಗ್ರೆಸ್ ಕಾರ್ಯಕರ್ತರು, ಪಾರ್ಕಿಂಗ್ ಹೆಸರಿನಲ್ಲಿ ಹಗಲು ದರೋಡೆ ಮಾಡುವ ಪ್ರಹಸನ ಮಾಡಿ, ಕಾಂಗ್ರೆಸ್ ಕಚೇರಿ ಆವರಣದ ಗಾಂಧೀಜಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.

ಪಾರ್ಕಿಂಗ್ ಶುಲ್ಕ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ವಿನೂತನ ಪ್ರತಿಭಟನೆ

ಬಿಜೆಪಿ ಸರ್ಕಾರ ಪ್ರತಿನಿತ್ಯ ಜನರ ಮೇಲೆ ತೆರಿಗೆ ಹೊರೆಯನ್ನು ವಿವಿಧ ರೀತಿಯಲ್ಲಿ ಹೊರಿಸುವ ಕಾರ್ಯತಂತ್ರ ರೂಪಿಸುತ್ತಿದೆ. ಪಾರ್ಕಿಂಗ್ ಶುಲ್ಕದ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಪ್ರಯತ್ನಕ್ಕೆ ಮುಂದಾಗಿರುವುದು ಅತ್ಯಂತ ಖಂಡನೀಯ. ಕೂಡಲೇ ಪೇ & ಪಾರ್ಕಿಂಗ್ ಶುಲ್ಕದ ಹೊಸ ನೀತಿಯನ್ನು ಕೈಬಿಡಬೇಕೆಂದು ಆಗ್ರಹಿಸಿ ಕಾಂಗ್ರೆಸ್​ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.

ಕೊರೊನಾ ಸಂಕಷ್ಟದಿಂದ ಜನ ಚೇತರಿಸಿಕೊಳ್ಳುವ ಸಂದರ್ಭದಲ್ಲಿ ಇಂಥ ತೆರಿಗೆ ನೀತಿಯನ್ನು ಜಾರಿಗೊಳಿಸುವುದು ಅತ್ಯಂತ ಬೇಜವಾಬ್ದಾರಿತನ. ಬಿಬಿಎಂಪಿಯಲ್ಲಿ ಈಗ ಆಡಳಿತಾಧಿಕಾರಿಗಳ ಆಡಳಿತವಿದೆ. ಬಿಬಿಎಂಪಿಗೆ ಚುನಾವಣೆ ನಡೆದು ಜನರ ಅಭಿಪ್ರಾಯ ಪಡೆದು, ಸಭೆಯಲ್ಲಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಕಾನೂನು ಜಾರಿಗೊಳಿಸಬೇಕು. ಏಕಾಏಕಿ ಜನವಿರೋಧಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಬಿಜೆಪಿ ಸರ್ಕಾರ ಜನರಿಗೆ ಆರ್ಥಿಕ ಹೊರೆಯನ್ನು ಹಾಕಿ, ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಓದಿ:ಶಾಸಕ ಯತ್ನಾಳ್​ಗೆ ಪಕ್ಷದ ಶೋಕಾಸ್ ನೋಟಿಸ್ ಸರ್ಕಾರಕ್ಕೆ ಮುಜುಗರ ತಂದ ಆರೋಪ; ಶಾಸಕ ಯತ್ನಾಳ್​ಗೆ ಪಕ್ಷದ ಶೋಕಾಸ್ ನೋಟಿಸ್

ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್. ಮನೋಹರ್, ಜನರಿಗೆ ಹೊರೆಯಾಗಬಾರದು ಅಂತ ಈ ಹಿಂದೆಯೇ ಕಾಂಗ್ರೆಸ್ ಪಕ್ಷ ಹೋರಾಟ ಮಾಡಿ, ಪಾರ್ಕಿಂಗ್ ಶುಲ್ಕ ರದ್ದು ಮಾಡಿತ್ತು. ಇದು ಪ್ರತಿನಿತ್ಯ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಸಮಸ್ಯೆಯಾಗಲಿದೆ. ಈಗ ಮತ್ತೆ ಬಿಜೆಪಿ ಸರ್ಕಾರ, ಆಡಳಿತಗಾರರ ಮೂಲಕ ಹೊಸ ನಿಯಮ ಜಾರಿಗೆ ತಂದಿದೆ. ಈಗಾಗಲೇ ಬಿಜೆಪಿ ಸರ್ಕಾರ ವಿದ್ಯುತ್, ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ಮಾಡಿದೆ. ಮಾರ್ಷಲ್​ಗಳ ಮೂಲಕ ಮಾಸ್ಕ್ ವಿಚಾರಕ್ಕೆ ದಂಡ ಹಾಕುತ್ತಿದೆ.

ಪಾರ್ಕಿಂಗ್ ಶುಲ್ಕದ ಬಗ್ಗೆ ಎಲ್ಲಿಯೂ ಚರ್ಚೆಯಾಗಿಲ್ಲ. ಏಕಾಏಕಿ ಹಗಲು ದರೋಡೆ ಮಾಡುವ ನಿಯಮ ಜಾರಿಗೆ ಬಂದಿದೆ. ಕೂಡಲೇ ಯಡಿಯೂರಪ್ಪ ಸರ್ಕಾರ ಈ ನೀತಿ ವಾಪಸ್ ಪಡೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details