ಕರ್ನಾಟಕ

karnataka

ಗೃಹ ಸಚಿವರ ಮೇಲೆ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ಡಿಜಿಗೆ ದೂರು

By

Published : Apr 7, 2022, 5:03 PM IST

ಗೋರಿಪಾಳ್ಯದಲ್ಲಿ ನಡೆದ ಯುವಕ‌ನ‌ ಕೊಲೆ ಸಂಬಂಧ ಗೃಹ ಸಚಿವರು ಶಾಂತಿ- ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿ, ಧರ್ಮ-ಧರ್ಮಗಳ ಮಧ್ಯೆ ಒಡಕು ಮೂಡುವ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್​ ಮುಖಂಡ ಮನೋಹರ್ ಆರೋಪಿಸಿದರು.

congress-delegation-complaining-to-the-dg
ಗೃಹ ಸಚಿವರ ಮೇಲೆ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ಡಿಜಿಗೆ ದೂರು ನೀಡಿದ ಕಾಂಗ್ರೆಸ್ ನಿಯೋಗ

ಬೆಂಗಳೂರು: ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ‌‌‌ ಪ್ರಕರಣ‌ ಸಂಬಂಧ ಪ್ರಚೋದನಕಾರಿ ಹೇಳಿಕೆ ಖಂಡಿಸಿ ಗೃಹ ಸಚಿವ ಆರಗ‌ ಜ್ಞಾನೇಂದ್ರ ವಿರುದ್ಧ ಎಫ್ಐಆರ್ ದಾಖಲಿಸಿಬೇಕೆಂದು ಕೋರಿ ಕಾಂಗ್ರೆಸ್ ನಿಯೋಗ ಡಿಜಿ-ಐಜಿಪಿ ಪ್ರವೀಣ್ ಸೂದ್​ಗೆ ದೂರು ನೀಡಿದೆ. ಈ ಸಂಬಂಧ‌ ನಿನ್ನೆ ಸಂಜೆ‌ ಮಲ್ಲೇಶ್ವರ‌‌ ಪೊಲೀಸರಿಗೆ ದೂರು ನೀಡಿದರೂ‌ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ, ‌ಇಂದು ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ತೆರಳಿದ ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದ ನಿಯೋಗ ದೂರು ನೀಡಿತು.


ಮನೋಹರ್‌ ಮಾತನಾಡಿ, ಗೋರಿಪಾಳ್ಯದಲ್ಲಿ ನಡೆದ ಯುವಕ‌ನ‌ ಕೊಲೆ ವಿಚಾರವಾಗಿ ಗೃಹ ಸಚಿವರು ಶಾಂತಿ- ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಎಂಎಲ್ಸಿ ರವಿಕುಮಾರ್ ಇದಕ್ಕೆ ಸಾಥ್ ನೀಡಿದ್ದಾರೆ. ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿನ್ನೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ‌ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಇಂದು ಡಿಜಿಯನ್ನು ಭೇಟಿ ಮಾಡಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಇದನ್ನೂ ಓದಿ:ಮದುವೆ ಭರವಸೆ ನೀಡಿ 200 ಹುಡುಗಿಯರಿಗೆ ವಂಚನೆ, ಲಕ್ಷಾಂತರ ಹಣ ದೋಚಿದ 'ತರುಣ' ಅರೆಸ್ಟ್‌

ABOUT THE AUTHOR

...view details