ಬೆಂಗಳೂರು :ಬಿಬಿಎಂಪಿಯು ತನ್ನ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡದೇ ಬದಲಿಗೆ ತನ್ನ ವೆಬ್ಸೈಟ್ನಲ್ಲಿ ಬಜೆಟ್ ಪ್ರಕಟಣೆ ಮಾಡುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಯಿತು. ಪಾಲಿಕೆ ಬಜೆಟ್ ತರಾತುರಿಯಲ್ಲಿ ಮಂಡನೆ ವಿಚಾರವಾಗಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಪ್ರತಿಕ್ರಿಯಿಸಿದ್ದು, ಮಾರ್ಚ್ನಲ್ಲಿ ಬಜೆಟ್ ಮಂಡಿಸುವುದು ನಮ್ಮ ಉದ್ದೇಶ ಆಗಿತ್ತು ಎಂದು ತಿಳಿಸಿದ್ದಾರೆ.
ಅಧಿವೇಶನ ಇದ್ದ ಹಿನ್ನೆಲೆ ನಾವು ಬೇರೆ ಕೆಲಸದಲ್ಲಿ ತೊಡಗಿದೆವು. ಜನಪ್ರತಿನಿಧಿಗಳು ಹಾಗೂ ಇತರರ ಜೊತೆ ಕೋಆರ್ಡಿನೇಟ್ ಮಾಡಿ ಮಂಡಿಸೋದು ವಿಳಂಬವಾಗಿತ್ತು. ಯುಗಾದಿ ರಜೆಯು ಇದ್ದ ಕಾರಣ ಮಾರ್ಚ್ ಅಂತ್ಯದೊಳಗೆ ಬಜೆಟ್ ಮಂಡಿಸಲೇಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ, ನಿನ್ನೆ ಬಜೆಟ್ ಮಂಡಿಸಲಾಗಿದೆ. ಇದು ಸಂಪೂರ್ಣ ಪಾರದರ್ಶಕವಾಗಿ ನಡೆದಿದೆ ಅಂತಾ ತಿಳಿಸಿದರು.
ಬಜೆಟ್ ಅಧಿವೇಶನ ನಡೆಯುತ್ತಿತ್ತು. ನಿನ್ನೆ ಸಂಜೆವರೆಗೂ ಬಜೆಟ್ ಬಗ್ಗೆ ಚರ್ಚೆ ಆಯ್ತು. ಸಿಎಂ ಜೊತೆ ಚರ್ಚಿಸಿ ಫೈನಲ್ ಮಾಡಲಾಯ್ತು. ಫೈನಾಷಿಯಲ್ ಇಯರ್ ಎಂಡ್ ಒಳಗೆ ಮಂಡಿಸಲೇಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ, ರಾತ್ರಿ ಬಜೆಟ್ ಅಪ್ಡೇಟ್ ಮಾಡಲಾಯಿತು ಎಂದು ತಿಳಿಸಿದರು.