ಕರ್ನಾಟಕ

karnataka

ಗ್ರಾಹಕರ ಜೇಬಿಗೆ ಕತ್ತರಿ: ಇಂದೂ ಸಹ ಗಗನಕ್ಕೇರಿದ ತರಕಾರಿ ಬೆಲೆ

By

Published : Nov 25, 2021, 9:57 AM IST

vegetables, vegetables

Bangalore vegetables price : ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಸೊಪ್ಪು, ತರಕಾರಿ ರೈತರ ಜಮೀನಿನಲ್ಲೇ ಹಾಳಾಗಿವೆ. ಅಲ್ಲದೇ, ನಿರಂತರ ಮಳೆಯಿಂದ ನಗರದ ಮಾರುಕಟ್ಟೆಗಳಿಗೆ ತರಕಾರಿಗಳು ಸಮರ್ಪಕ ಪೂರೈಕೆ ಆಗದ ಹಿನ್ನೆಲೆ ಬೆಲೆ ದುಪ್ಪಟ್ಟಾಗಿದೆ. ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ.

ಬೆಂಗಳೂರು: ಅಕಾಲಿಕವಾಗಿ ಸುರಿದ ಭಾರಿ ಮಳೆ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ವರುಣಾರ್ಭಟಕ್ಕೆ ಬೆಳೆ ಹಾನಿಯಾಗಿದ್ದು, ತರಕಾರಿ ಬೆಲೆ ಗಗನಕ್ಕೇರಿದೆ. ನಿರಂತರ ಮಳೆಯಿಂದ ನಗರದ ಮಾರುಕಟ್ಟೆಗಳಿಗೆ ತರಕಾರಿಗಳು ಸಮರ್ಪಕ ಪೂರೈಕೆ ಆಗದ ಹಿನ್ನೆಲೆಯಲ್ಲಿ ಟೊಮೇಟೊ, ಕ್ಯಾಪ್ಸಿಕಂ ಸೇರಿದಂತೆ ಎಲ್ಲ ತರಕಾರಿಗಳ ಸಗಟು ಮತ್ತು ಚಿಲ್ಲರೆ ಬೆಲೆ ದುಪ್ಪಟ್ಟಾಗಿದೆ.

ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ:

ತರಕಾರಿದರ
ಬೆಳ್ಳುಳ್ಳಿ132 ರೂ.
ಟೊಮೇಟೊ103 ರೂ.
ದಪ್ಪ ಮೆಣಸಿನಕಾಯಿ128ರೂ
ಹಸಿ ಮೆಣಸಿನಕಾಯಿ60 ರೂ
ಕ್ಯಾರೆಟ್94 ರೂ
ಹುರಳೀಕಾಯಿ(ಬೀನ್ಸ್)94 ರೂ
ಬದನೆಕಾಯಿ108 ರೂ
ಸೌತೆಕಾಯಿ24 ರೂ
ನುಗ್ಗೆ ಕಾಯಿ 270 ರೂ
ಶುಂಠಿ 84 ರೂ
ಈರುಳ್ಳಿ ( ಮಧ್ಯಮ) 53 ರೂ
ಸಾಂಬರ್ ಈರುಳ್ಳಿ 56 ರೂ
ಆಲೂಗಡ್ಡೆ 44 ರೂ.
ಮೂಲಂಗಿ 70 ರೂ
ಕೊತ್ತಂಬರಿ ಸೊಪ್ಪು 86 ರೂ
ಮೆಂತ್ಯ ಸೊಪ್ಪು 128 ರೂ.
ಪಾಲಕ್ ಸೊಪ್ಪು 107 ರೂ.
ಸಬ್ಬಕ್ಕಿ ಸೊಪ್ಪು 70 ರೂ.
ಕರಿಬೇವು 67 ರೂ.
ದಂಟಿನ ಸೊಪ್ಪು 114 ರೂ.
ತೆಂಗಿನ ಕಾಯಿ ( ದಪ್ಪ) 32 ರೂ
ತೆಂಗಿನ ಕಾಯಿ ( ಮಧ್ಯಮ) 28 ರೂ
ತೆಂಗಿನ ಕಾಯಿ ( ಸಣ್ಣ) 22 ರೂ

ABOUT THE AUTHOR

...view details