ಕರ್ನಾಟಕ

karnataka

ಅಸಿಸ್ಟೆಂಟ್ ಪ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದೇಗೆ? ಚಾರ್ಜ್​ ಶೀಟ್​ನಲ್ಲಿ ಪಿನ್​ ಟು ಪಿನ್​ ಮಾಹಿತಿ

By

Published : Aug 8, 2022, 2:12 PM IST

Etv Bharat

ಅಸಿಸ್ಟೆಂಟ್ ಪ್ರೊಫೆಸರ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸಿಸಿಬಿ ಚಾರ್ಜ್​ ಶೀಟ್ ಸಲ್ಲಿಕೆ ಮಾಡಿದೆ. ಭೂಗೋಳಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಹೇಗಾಯಿತು ಎಂಬ ಮಾಹಿತಿ ಚಾರ್ಜ್ ಶೀಟ್​ನಲ್ಲಿ ಉಲ್ಲೇಖವಾಗಿದೆ.

ಬೆಂಗಳೂರು: ಅಸಿಸ್ಟೆಂಟ್ ಪ್ರೊಫೆಸರ್ ಭೂಗೋಳಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಕೋರ್ಟ್​ಗೆ ಸಿಸಿಬಿ ಅಧಿಕಾರಿಗಳು ಜಾರ್ಜ್‌ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್​ನ‌ ಇಂಟ್ರೆಸ್ಟಿಂಗ್ ಮಾಹಿತಿ ಲಭ್ಯವಾಗಿದ್ದು, ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಜಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಸೌಮ್ಯ, ಡಾಕ್ಟರ್ ನಾಗರಾಜ್ ಸೇರಿ ನಾಲ್ವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿದೆ‌. ದೋಷಾರೋಪಣ ಪಟ್ಟಿಯಲ್ಲಿ ಪ್ರಶ್ನೆಪತ್ರಿಕೆ ಹೇಗೆ ಸೋರಿಕೆ ಆಯ್ತು ಎಂಬ ಮಾಹಿತಿ ಚಾರ್ಜ್ ಶೀಟ್​​ನಲ್ಲಿ ಉಲ್ಲೇಖವಾಗಿದೆ. ಆರೋಪಿ ಸೌಮ್ಯ ಅವರು ಪ್ರಾಧ್ಯಾಪಕ ಡಾ.ನಾಗರಾಜ್ ಬಳಿ ಪಿಹೆಚ್​​ಡಿ ವಿದ್ಯಾರ್ಥಿಯಾಗಿದ್ದರು.

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ತಯಾರಾಗಿದ್ದ ಪ್ರಶ್ನೆ ಪತ್ರಿಕೆಯ ಬಂಡಲ್​​ಗಳನ್ನ ಡಾ.ನಾಗರಾಜ್ ತಮ್ಮ ಮನೆಯಲ್ಲಿ ಇಟ್ಟಿದ್ದರು. ಸೌಮ್ಯ ಮನೆಯಲ್ಲಿದ್ದ ಪ್ರಶ್ನೆ ಪತ್ರಿಕೆಗಳ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ತಾವು ಓದಿಕೊಂಡಿದ್ದಲ್ಲದೇ ಗೆಳೆತಿಗೆಯರಿಗೆ ಕಳುಹಿಸಿದ್ದರು. ಬಳಿಕ ಸೌಮ್ಯ ಗೆಳತಿ ತಮ್ಮ ಗೆಳೆಯನಿಗೆ ಕಳುಹಿಸಿದ್ದು, ಆತ ಆ ಪ್ರಶ್ನೆಪತ್ರಿಕೆ ಕಡೆ ಗಮನಕೊಟ್ಟಿರಲಿಲ್ಲ. ಪರೀಕ್ಷೆಯ ನಂತರ ಆತ ಪರಿಶೀಲಿಸಿದಾಗ ಸ್ನೇಹಿತೆ ಕಳಿಸಿದ್ದ ಪತ್ರಿಕೆಯಲ್ಲಿನ 17 ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದಿದ್ದವು. ಆಗ ಅಸಮಾಧಾನಗೊಂಡ ಆ ವ್ಯಕ್ತಿ, ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ತಕರಾರು ಎತ್ತಿದ್ದರಂತೆ.

ಆ ಬಳಿಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಮಾಹಿತಿ ಬಹಿರಂಗವಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಆರೋಪಿ ಡಾ.ನಾಗರಾಜ್ ಅವರನ್ನು ಸಿಸಿಬಿ ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ‌ನಡೆಸ್ತಿದೆ‌.

(ಓದಿ: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಹಾರ ; ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ದಾಖಲಾಯ್ತು ದೂರು..‌)

ABOUT THE AUTHOR

...view details