ಕರ್ನಾಟಕ

karnataka

ಬಿಟ್ಟು ಹೋದ ಪತ್ನಿ, ಕೈ ಕೊಡುವ ಕರೆಂಟ್‌; ಕುಡಿದ ಮತ್ತಲ್ಲಿ ಟ್ರಾನ್ಸ್​ಫಾರ್ಮ್ ಕಂಬ ಏರಿದ ವ್ಯಕ್ತಿ!

By

Published : May 5, 2022, 10:34 AM IST

ಗ್ರಾಮದಲ್ಲಿ ನಿರಂತರವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಮತ್ತು ಪತ್ನಿ ಬಿಟ್ಟು ಹೋಗಿದ್ದರಿಂದ ಕೋಪಗೊಂಡ ವ್ಯಕ್ತಿಯೊಬ್ಬ ಮದ್ಯ ಸೇವಿಸಿದ ಮತ್ತಿನಲ್ಲಿ ಟ್ರಾನ್ಸ್​ಫಾರ್ಮ್ ಕಂಬ ಏರಿ ನಿಂತುಬಿಟ್ಟ.

Alcoholic man climbed transform pole over power cut issue, Alcoholic man climbed transform pole in Doddaballapur, Power cut issue in ujjani village, Doddaballapur news, ಪವರ್ ಕಟ್ ವಿಚಾರವಾಗಿ ಟ್ರಾನ್ಸ್ ಫಾರ್ಮ್ ಕಂಬ ಹತ್ತಿದ ಮದ್ಯವ್ಯಸನಿ, ದೊಡ್ಡಬಳ್ಳಾಪುರದಲ್ಲಿ ಟ್ರಾನ್ಸ್ ಫಾರ್ಮ್ ಕಂಬ ಹತ್ತಿದ ಮದ್ಯವ್ಯಸನಿ, ಉಜ್ಜನಿ ಗ್ರಾಮದಲ್ಲಿ ಪವರ್ ಕಟ್ ಸಮಸ್ಯೆ, ದೊಡ್ಡಬಳ್ಳಾಪುರ ಸುದ್ದಿ,
ಟ್ರಾನ್ಸ್ ಫಾರ್ಮ್ ಕಂಬ ಏರಿದ ಮದ್ಯವ್ಯಸನಿ.

ದೊಡ್ಡಬಳ್ಳಾಪುರ: ಗ್ರಾಮದಲ್ಲಿ ಆಗಾಗ್ಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿತ್ತು. ಜೊತೆಗೆ, ಇತ್ತೀಚೆಗೆ ಪತ್ನಿಯೂ ಬಿಟ್ಟಿ ಹೋಗಿದ್ದಳಂತೆ. ಇದರಿಂದ ಕಂಗಾಲಾಗಿ ಕೋಪಗೊಂಡ ಗ್ರಾಮದ ವ್ಯಕ್ತಿಯೊಬ್ಬ ಕಂಠಪೂರ್ತಿ ಮದ್ಯ ಸೇವಿಸಿ, ಟ್ರಾನ್ಸ್​ಫಾರ್ಮ್ ಕಂಬವೇರಿ ಹೈಡ್ರಾಮ ನಡೆಸಿದ್ದಾನೆ. ದೊಡ್ಡಬಳ್ಳಾಪುರ ತಾಲೂಕಿನ ಉಜ್ಜನಿ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆಯಿತು.


45 ವರ್ಷ ಪ್ರಾಯದ ಈ ವ್ಯಕ್ತಿ 11 ಕೆವಿ ವಿದ್ಯುತ್ ಟ್ರಾನ್ಸ್‌ಫಾರ್ಮ್ ಕಂಬ ಏರಿದ್ದಾನೆ. ಇದನ್ನು ಕಂಡ ಗ್ರಾಮಸ್ಥರು ಕೂಡಲೇ ಲೈನ್​ಮ್ಯಾನ್​ಗೆ ವಿಷಯ ತಿಳಿಸಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಇದರಿಂದಾಗಿ ಪ್ರಾಣಾಪಾಯ ತಪ್ಪಿದೆ.

ಇದನ್ನೂ ಓದಿ:ಇವ್ನು 'ಟವರ್‌'ಪ್ರೇಮಿ ಅಂದ್ಕೋಬೇಡಿ.. ಮಂಗಳೂರಿನ ಭಗ್ನ ಮಜ್ನುವಿನ ಮಂಗನಾಟ..

ಗ್ರಾಮದಲ್ಲಿ ನಿರಂತರ ಲೋಡ್‌ ಶೆಡ್ಡಿಂಗ್‌ ಅಷ್ಟೇ ಅಲ್ಲದೇ, ಹೆಂಡತಿ ಬಿಟ್ಟು ಹೋಗಿದ್ದರಿಂದಲೂ ಸಾಂಸಾರಿಕ ಜೀವನದಲ್ಲಿ ವ್ಯಕ್ತಿ ಬೇಸತ್ತಿದ್ದನಂತೆ. ಈ ಎರಡು ಘಟನೆಗಳಿಂದಾಗಿ ಕುಡಿದ ಮತ್ತಿನಲ್ಲಿ ಈ ಕೃತ್ಯಕ್ಕೆ ಮುಂದಾಗಿದ್ದ ಎಂದು ತಿಳಿದುಬಂದಿದೆ. ನಂತರ ಆತನನ್ನು ಗ್ರಾಮದ ಜನರೆಲ್ಲಾ ಸೇರಿ ಮನವೊಲಿಸಿ ಟ್ರಾನ್ಸ್​ಫಾರ್ಮ್ ಕಂಬದಿಂದ ಕೆಳಗಿಳಿಸಿದ್ದಾರೆ.

ABOUT THE AUTHOR

...view details