ಕರ್ನಾಟಕ

karnataka

4.9 ಕೆ.ಜಿ ಚಿನ್ನ ಎಗರಿಸಿದ್ದ ಖಾಕಿ: ಖೆಡ್ಡಾಕ್ಕೆ ಬಿದ್ದ ಆರೋಪಿ, 14 ದಿನ ಸಿಐಡಿ ಕಸ್ಟಡಿ

By

Published : Jun 7, 2021, 8:11 PM IST

ಮಂಗಳೂರು ಮೂಲದ ತಿಲಕ ಪೂಜಾರಿಗೆ ಸೇರಿದ 4.9 ಕೆ.ಜಿ ಚಿನ್ನವನ್ನು ಮುಂಬೈಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಯಮಕನಮರಡಿ ‌ಪೊಲೀಸರು ವಾಹನ ಸೀಜ್ ಮಾಡಿದ್ದರು. ಏರ್ ಬ್ಯಾಗಿನಲ್ಲಿದ್ದ ಚಿನ್ನವನ್ನು ಕಿರಣ್ ಸೇರಿ ಹಲವು ಪೊಲೀಸ್ ಅಧಿಕಾರಿಗಳು ಕದ್ದು ಮಾರಾಟ ಮಾಡಿದ್ದರು.

police-gold-theft-case-cid-arrested-a-accused-in-hubli
ಸ್ಮಗ್ಲಿಂಗ್ ‌ಚಿನ್ನ ಕಳ್ಳತನ ಪ್ರಕರಣ

ಬೆಳಗಾವಿ: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಸ್ಮಗ್ಲಿಂಗ್ ‌ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಕಿರಣ್ ವೀರನಗೌಡನನ್ನು ನಿನ್ನೆ ತಡರಾತ್ರಿ ಸಿಐಡಿ ಕಸ್ಟಡಿಗೆ ನೀಡಿ ಬೆಳಗಾವಿ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.

ಸಿಐಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯನವರು ಆರೋಪಿಯನ್ನು 14 ದಿನ ಸಿಐಡಿ ‌ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನಿನ್ನೆ ತಡರಾತ್ರಿ ಕಿರಣ್ ವೀರನಗೌಡರನನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ನ್ಯಾಯಾಲಯದ ಆದೇಶದ ಹಿನ್ನೆಲೆ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಸ್ಮಗ್ಲಿಂಗ್ ‌ಚಿನ್ನ ಕಳ್ಳತನ ಪ್ರಕರಣ

ಪ್ರಕರಣದ ಹಿನ್ನೆಲೆ

ಮಂಗಳೂರು ಮೂಲದ ತಿಲಕ ಪೂಜಾರಿಗೆ ಸೇರಿದ 4.9 ಕೆ.ಜಿ ಚಿನ್ನವನ್ನು ಮುಂಬೈಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಯಮಕನಮರಡಿ ‌ಪೊಲೀಸರು ವಾಹನ ಸೀಜ್ ಮಾಡಿದ್ದರು. ಏರ್ ಬ್ಯಾಗಿನಲ್ಲಿದ್ದ ಚಿನ್ನವನ್ನು ಕಿರಣ್ ಸೇರಿ ಹಲವು ಪೊಲೀಸ್ ಅಧಿಕಾರಿಗಳು ಕದ್ದು ಮಾರಾಟ ಮಾಡಿದ್ದರು. ಪ್ರಕರಣ ಸಂಬಂಧ ಐಜಿಪಿ ಸೇರಿ ಹಲವು ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ.

ABOUT THE AUTHOR

...view details