ಕರ್ನಾಟಕ

karnataka

ಜ.1 ರಿಂದ ಜೋಳ, ಭತ್ತ, ರಾಗಿ ಖರೀದಿ ಕೇಂದ್ರ ಆರಂಭ : ಸಚಿವ ಉಮೇಶ ಕತ್ತಿ

By

Published : Dec 15, 2021, 7:49 PM IST

ಅಗತ್ಯಬಿದ್ರೆ ಈ ಸಂಬಂಧ ಕೇಂದ್ರ ಆಹಾರ ಇಲಾಖೆಯ ಸಚಿವರೊಂದಿಗೆ ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಕೃಷ್ಣ ಭೈರೆಗೌಡ, ಜಿ.ಟಿ ದೇವೇಗೌಡ ಸೇರಿದಂತೆ ಹಲವರು ಸಚಿವರನ್ನು ಆಗ್ರಹಿಸಿದರು..

minister umesh katti
ಸಚಿವ ಉಮೇಶ ಕತ್ತಿ

ಬೆಳಗಾವಿ :ರಾಜ್ಯದಲ್ಲಿ ಜನವರಿ 1ರಿಂದ ಜೋಳ, ಭತ್ತ, ರಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ ಕತ್ತಿ ಸದನಕ್ಕೆ ಮಾಹಿತಿ ನೀಡಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ಅಕಾಲಿಕ ಮಳೆಯಿಂದ ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ. ಜನವರಿ 1ರಿಂದ ಜೋಳ, ಭತ್ತ, ರಾಗಿ ಖರೀದಿ ಕೇಂದ್ರ ಆರಂಭಿಸುವ ಚಿಂತನೆ ಸರ್ಕಾರದ ಮುಂದಿದೆ. ಇದಕ್ಕಾಗಿ ಇಲಾಖೆ ಈಗಾಗಲೇ ಸಿದ್ಧತೆಯಲ್ಲಿ ತೊಡಗಿದೆ ಎಂದರು.

ಈಗಾಗಲೇ ನೆರೆಯ ರಾಜ್ಯಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು, ರಾಜ್ಯ ಹಿಂದೆ ಬಿದ್ದಿದೆ. ಇದರಿಂದ ಜೋಳ, ಭತ್ತ, ರಾಗಿ ಬೆಳೆಗಾರರಿಗೆ ತೊಂದರೆ ಆಗಲಿದೆ. ತಕ್ಷಣವೇ ಖರೀದಿ ಕೇಂದ್ರ ಆರಂಭಿಸಬೇಕು.

ಅಗತ್ಯಬಿದ್ರೆ ಈ ಸಂಬಂಧ ಕೇಂದ್ರ ಆಹಾರ ಇಲಾಖೆಯ ಸಚಿವರೊಂದಿಗೆ ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಕೃಷ್ಣ ಭೈರೆಗೌಡ, ಜಿ.ಟಿ ದೇವೇಗೌಡ ಸೇರಿದಂತೆ ಹಲವರು ಸಚಿವರನ್ನು ಆಗ್ರಹಿಸಿದರು.

ಇದನ್ನೂ ಓದಿ: ಅತಿಕ್ರಮಿಸಿದ 16,420 ಎಕರೆ ಜಮೀನು ಸರ್ಕಾರದ ವಶಕ್ಕೆ : ಸಚಿವ ಆರ್‌ ಅಶೋಕ್

ಜ.1ಕ್ಕೆ ಖರೀದಿ ಕೇಂದ್ರ ತೆರೆಯುತ್ತೇವೆ. ರೈತರ ಜೊತೆಗೆ ಸರ್ಕಾರ ಇದೆ. ಜನವರಿಯಿಂದ ಖರೀದಿ ಕೇಂದ್ರ ತೆರೆದರೆ ಯಾವುದೇ ನಷ್ಟವಿಲ್ಲ ಎಂದು ಸಚಿವ ಕತ್ತಿ ಸದನಕ್ಕೆ ಮಾಹಿತಿ ನೀಡಿದರು.

ABOUT THE AUTHOR

...view details