ಕರ್ನಾಟಕ

karnataka

ಪೆಟ್ರೋಲ್, ಡೀಸೆಲ್ ದರ: ಬೆಂಗಳೂರು, ಮಂಗಳೂರುಗಿಂತ ದಾವಣಗೆರೆಯಲ್ಲಿ ತೈಲ ದುಬಾರಿ

By

Published : Apr 28, 2022, 10:18 AM IST

Updated : Apr 28, 2022, 12:06 PM IST

ಪೆಟ್ರೋಲ್, ಡೀಸೆಲ್ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ.

Todays Petrol - Diesel Rate
Todays Petrol - Diesel Rate

ಬೆಂಗಳೂರು:ಜನರ ಕೈ ಸುಡುತ್ತಿರುವಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ. ತೈಲ ದರದಲ್ಲಿ ಯಥಾಸ್ಥಿತಿ ಇದೆ. ರಾಜ್ಯ ರಾಜಧಾನಿ ಬೆಂಗಳೂರು ನಗರದ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಒಂದು ಲೀಟರ್​​ಗೆ 111.11 ರೂಪಾಯಿಯಂತೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಬೆಲೆ ಒಂದು ಲೀಟರ್​ಗೆ 94.81 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. ಇದರ ಜತೆಗೆ ಸ್ಪೀಡ್ ಪೆಟ್ರೋಲ್​ಗೆ ರಾಜಧಾನಿಯಲ್ಲಿ 114.06 ರೂಪಾಯಿ ದರ ನಿಗದಿಯಾಗಿದೆ.

ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ನೋಡುವುದಾದರೆ ಮಂಗಳೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್​ಗೆ 111 ರೂಪಾಯಿ ಇದ್ದು, ಡೀಸೆಲ್ ದರ ಒಂದು ಲೀಟರ್​ಗೆ 94.68 ರೂಪಾಯಿಯಿದೆ. ದಾವಣಗೆರೆಯಲ್ಲಿ ಪೆಟ್ರೋಲ್ ದರ 112.86 ರೂ, ಇದ್ದು, ಡಿಸೇಲ್ ದರ 96.54 ರೂ. ಇದೆ. ಮೈಸೂರಲ್ಲಿ ಪೆಟ್ರೋಲ್ ದರ 110.59 ರೂ ಮತ್ತು ಡೀಸೆಲ್‌ ದರ 94.34 ರೂ. ಇದೆ

ಹುಬ್ಬಳ್ಳಿಯಲ್ಲಿ ಪೆಟ್ರೋಲ್, ಡೀಸೆಲ್ ದರಲ್ಲಿ ಯಥಾಸ್ಥಿತಿ ಮುಂದುವರಿದಿದ್ದು, ಪೆಟ್ರೋಲ್ 110.81 ರೂ, ಡೀಸೆಲ್ 94.56 ರೂ ಇದೆ. ಶಿವಮೊಗ್ಗದಲ್ಲಿ 112.54 ರೂ, ಡೀಸೆಲ್ 96.02 ರೂ., ಪವರ್ ಪೆಟ್ರೋಲ್ 116.70 ರೂ, ಟರ್ಬೊಜೆಟ್ 99.10 ರೂ. ಇದೆ.

(ಇದನ್ನೂ ಓದಿ: ತೈಲ ಬೆಲೆಗಳ ಏರಿಕೆಯಿಂದಾಗಿ ಭಾರತದಲ್ಲಿ ಹಣದುಬ್ಬರ ಹೆಚ್ಚಳ, ಕಡಿವಾಣಕ್ಕೆ ಕ್ರಮ ಅಗತ್ಯ : ಐಎಂಎಫ್​)

Last Updated :Apr 28, 2022, 12:06 PM IST

ABOUT THE AUTHOR

...view details