ಕರ್ನಾಟಕ

karnataka

ಕೂಲಿ ಕೆಲಸ ಮಾಡುವ ವೃದ್ಧೆಗೆ ₹8 ಕೋಟಿ ತೆರಿಗೆ ಕಟ್ಟಲು ಸೂಚಿಸಿದ ಆದಾಯ ತೆರಿಗೆ ಇಲಾಖೆ!

By

Published : Dec 22, 2022, 6:39 AM IST

ತಮಿಳುನಾಡಿನ 60 ವರ್ಷದ ವೃದ್ಧ ಮಹಿಳೆಯ ದಾಖಲೆಗಳನ್ನು ನಕಲು ಮಾಡಿ ಕಂಪನಿ ಆರಂಭಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

rs-8-crore-tax-evasion-on-name-of-old-woman
ತೆರಿಗೆ ಕಟ್ಟಲು ಸೂಚಿಸಿದ ಆದಾಯ ತೆರಿಗೆ ಇಲಾಖೆ

ತಿರುಪತ್ತೂರು(ತಮಿಳುನಾಡು):ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಬಿಹಾರದ ಕಟ್ಟಡ ಕಾರ್ಮಿಕನ ದಾಖಲೆಗಳನ್ನು ಬಳಸಿಕೊಂಡು ವಂಚಿಸಿದ ಘಟನೆಯ ಬಳಿಕ ಇದೀಗ ತಮಿಳುನಾಡಿನಲ್ಲಿ ವೃದ್ಧ ಮಹಿಳೆಯ ದಾಖಲೆಗಳಿಂದ 8 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ತಿರುಪತ್ತೂರು ನಿವಾಸಿಯಾದ ಗುಲ್ಜಾರ್​(60) ಎಂಬಾಕೆಯ ಹೆಸರಿನಲ್ಲಿ ಕಂಪನಿ ಆರಂಭಿಸಿ, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಡಲಾಗಿದೆ. ಡಿಸೆಂಬರ್​ 19 ರಂದು ವೃದ್ಧ ಮಹಿಳೆ ಗುಲ್ಜಾರ್​ ನಿವಾಸಕ್ಕೆ ಬಂದ ಅಧಿಕಾರಿಗಳು ನಿಮ್ಮ ಹೆಸರಿನಲ್ಲಿರುವ ಕಂಪನಿ ಸರ್ಕಾರಕ್ಕೆ 8 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಶೀಘ್ರವೇ ಕಟ್ಟಬೇಕು. ಇಲ್ಲವಾದಲ್ಲಿ ದಿನಂಪ್ರತಿ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಸೂಚನೆ ನೀಡಿದ್ದಾರೆ.

ಇದರಿಂದ ಕಂಗಾಲಾದ ಮಹಿಳೆ ತಾವು ಯಾವುದೇ ಕಂಪನಿ ನಡೆಸುತ್ತಿಲ್ಲ. ದುಡಿಮೆಗಾಗಿ ಕೂಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಅಧಿಕಾರಿಗಳು ಆಕೆಯ ಹೆಸರಿನಲ್ಲಿ ನಡೆಯುತ್ತಿರುವ ವ್ಯವಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ಮಹಿಳೆ ಮೋಸ ಹೋಗಿದ್ದು ಗೊತ್ತಾಗಿದೆ. ನೊಂದ ವೃದ್ಧ ಮಹಿಳೆ ಆತ್ಮಹತ್ಯೆಗೆ ಮುಂದಾಗಿದ್ದರು. ಅಲ್ಲಿನ ಜನರು ಆಕೆಯನ್ನು ರಕ್ಷಿಸಿ ಸಮಾಧಾನಿಸಿದ್ದಾರೆ.

ತಮ್ಮ ದಾಖಲೆಗಳನ್ನು ಬಳಸಿಕೊಂಡು ನಕಲಿ ಕಂಪನಿ ನಡೆಯುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಪೊಲೀಸ್​ ಠಾಣೆಗೆ ವೃದ್ಧ ಮಹಿಳೆ ದೂರು ನೀಡಿದ್ದಾರೆ. ಇಷ್ಟಲ್ಲದೇ, ಗ್ರಾಮದ ಹಲವು ಜನರಿಗೆ ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ಅಧಿಕಾರಿಗಳು ಹಣ ಪಾವತಿಗೆ ಸೂಚಿಸಿ ನೋಟಿಸ್​ ಜಾರಿ ಮಾಡಿರುವುದು ಗೊತ್ತಾಗಿದೆ.

ಓದಿ:₹15 ಸಾವಿರ ದುಡಿಯುವ ಕಾರ್ಮಿಕನಿಗೆ ₹14 ಕೋಟಿ ತೆರಿಗೆ ಕಟ್ಟಲು ಐಟಿ ನೋಟಿಸ್​!

ABOUT THE AUTHOR

...view details