ETV Bharat / bharat

₹15 ಸಾವಿರ ದುಡಿಯುವ ಕಾರ್ಮಿಕನಿಗೆ ₹14 ಕೋಟಿ ತೆರಿಗೆ ಕಟ್ಟಲು ಐಟಿ ನೋಟಿಸ್​!

author img

By

Published : Dec 20, 2022, 7:35 AM IST

ಬಿಹಾರದ ಕಟ್ಟಡ ಕಾರ್ಮಿಕನ ಮನೆಯ ಮೇಲೆ ದಾಳಿ ಮಾಡಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ತೆರಿಗೆ ವಂಚನೆ ಆರೋಪದ ಮೇಲೆ 14 ಕೋಟಿ ರೂಪಾಯಿ ಪಾವತಿಸುವಂತೆ ಸೂಚಿಸಿ ನೋಟಿಸ್​ ನೀಡಿದ್ದಾರೆ.

income-tax-department
ಬಿಹಾರದ ಕಾರ್ಮಿಕನಿಗೆ ಐಟಿ ನೋಟಿಸ್

ರೋಹ್ಟಾಸ್ (ಬಿಹಾರ): ಒಬ್ಬ ಸಾಮಾನ್ಯ ಕಾರ್ಮಿಕನಿಗೆ ಅಬ್ಬಬ್ಬಾ ಅಂದ್ರೂ ತಿಂಗಳಿಗೆ 15 ಸಾವಿರ ದುಡಿಮೆಯ ಹಣ ಬಂದೀತು. ಇದಕ್ಕೆ ಆತ ಅದ್ಯಾವ ತೆರಿಗೆ ತಾನೇ ಕಟ್ಟಿಯಾನು. ಇಷ್ಟೇ ಪ್ರಮಾಣದಲ್ಲಿ ದುಡಿಯುವ ಬಿಹಾರದ ಕಾರ್ಮಿಕನಿಗೆ ಆದಾಯ ತೆರಿಗೆ ಇಲಾಖೆ (ಐಟಿ) ಶಾಕ್​ ನೀಡಿದೆ. ತೆರಿಗೆ ವಂಚಿಸಿದ ಆರೋಪದ ಮೇಲೆ 14 ಕೋಟಿ ರೂಪಾಯಿ ಕಟ್ಟಲು ನೋಟಿಸ್​ ನೀಡಿದೆ. ನೋಟಿಸ್​ ನೋಡಿದ ಕಾರ್ಮಿಕನಿಗೆ ಬರಸಿಡಿಲು ಬಡಿದಂತಾಗಿದೆ.

ನಿಜ, ಬಿಹಾರದ ಕಟ್ಟಡ ಕಾರ್ಮಿಕ ಮನೋಜ್​ ಕುಮಾರ್​ ಎಂಬಾತನಿಗೆ ಐಟಿ ಇಲಾಖೆ ತೆರಿಗೆ ವಂಚನೆ ಆರೋಪದ ಮೇಲೆ 14 ಕೋಟಿ ರೂಪಾಯಿ ಪಾವತಿಸಲು ಸೂಚಿಸಿ ನೋಟಿಸ್​ ನೀಡಿದೆ. ಇದನ್ನು ಕಂಡ ಕಾರ್ಮಿಕ ಅವಾಕ್ಕಾಗಿದ್ದಾನೆ. ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಿದ ಕಾರಣ ಕಾರ್ಮಿಕನ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾರ್ಮಿಕ ತಾನು ಕಟ್ಟಡ ಕಾರ್ಮಿಕನಾಗಿದ್ದು, ಮಾಸಿಕ 12 ರಿಂದ 15 ಸಾವಿರ ದುಡಿಯುತ್ತೇನೆ ಎಂದು ತಿಳಿಸಿದ್ದಾನೆ.

ಆದರೆ, ಅಧಿಕಾರಿಗಳು ಕಾರ್ಮಿಕನ ದಾಖಲೆಗಳ ಮೇಲೆ ಕೋಟ್ಯಂತರ ರೂಪಾಯಿ ವ್ಯವಹಾರವಾಗಿದ್ದರ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ 14 ಕೋಟಿ ರೂಪಾಯಿ ತೆರಿಗೆ ಕಟ್ಟಲು ಸೂಚಿಸಿದ್ದಾರೆ. ಇಲ್ಲವಾದಲ್ಲಿ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ಈಟಿವಿ ಭಾರತ್ ಜೊತೆ ಮಾತನಾಡಿದ ಕಾರ್ಮಿಕ ಮನೋಜ್, ತಾನು ಹರಿಯಾಣ ಅಥವಾ ದೆಹಲಿಗೆ ಕೆಲಸಕ್ಕೆ ಹೋದಾಗ ತನ್ನ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಗುತ್ತಿಗೆದಾರರಿಗೆ ನೀಡಿದ್ದೆ. ಆಗ ಏನೋ ನಡೆದಿರಬಹುದು. ಹೀಗಾಗಿ ಅಧಿಕಾರಿಗಳು ನನ್ನ ಮೇಲೆ ರೇಡ್​ ನಡೆಸಿ, ಕೋಟ್ಯಂತರ ರೂಪಾಯಿ ತೆರಿಗೆ ಹಣ ಕಟ್ಟಲು ಸೂಚಿಸಿದ್ದಾರೆ ಎಂದು ತಿಳಿಸಿದರು.

ಓದಿ: ಗಂಗಾವತಿ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸುವೆ: ಜನಾರ್ದ‌ನ ರೆಡ್ಡಿ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.