ಕರ್ನಾಟಕ

karnataka

ಯೋಗೀಶಗೌಡ ಹತ್ಯೆ ಪ್ರಕರಣ: ಒಂದು ದಿನ ಕೆಎಎಸ್ ಅಧಿಕಾರಿ ಸಿಬಿಐ ವಶಕ್ಕೆ

By

Published : Jul 9, 2021, 2:49 AM IST

ನಿನ್ನೆ ಬೆಳಗ್ಗೆ ಗದಗದಲ್ಲಿ ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಸಿಬಿಐ ಬಂಧನಕ್ಕೊಳಗಾಗಿದ್ದರು. ಇವರು ಮಾಜಿ ಸಚಿವ ವಿನಯ್​ ಕುಲಕರ್ಣಿ ಆಪ್ತ ಕಾರ್ಯದರ್ಶಿಯಾಗಿದ್ದರು.

 Yogesh gowda murder case: KAS officer detained by CBI
Yogesh gowda murder case: KAS officer detained by CBI

ಧಾರವಾಡ: ಜಿಪಂ ಸದಸ್ಯ ಯೋಗಿಶ್​ಗೌಡ ಕೊಲೆ ಪ್ರಕರಣದಲ್ಲಿ‌ ಸಿಬಿಐನಿಂದ ಬಂಧನಕ್ಕೊಳಗಾಗಿರುವ ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಅವರನ್ನು ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಒಂದು ದಿನ ಸಿಬಿಐ ವಶಕ್ಕೆ ನೀಡಿದೆ.

ನಿನ್ನೆ ಬೆಳಗ್ಗೆ ಗದಗದಲ್ಲಿ ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಸಿಬಿಐ ಬಂಧನಕ್ಕೊಳಗಾಗಿದ್ದರು. ಇವರು ಮಾಜಿ ಸಚಿವ ವಿನಯ್​ ಕುಲಕರ್ಣಿ ಆಪ್ತ ಕಾರ್ಯದರ್ಶಿಯಾಗಿದ್ದರು. ಸೋಮು ನ್ಯಾಮಗೌಡಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜನ ಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ನ್ಯಾಯಾಲಯಕ್ಕೆ ಹಾಜರುಪಡಿಸಿ‌ ಸಿಬಿಐ ಒಂದು ದಿನ ಕಸ್ಟಡಿ‌ಗೆ ಕೇಳಿತ್ತು. ಸಿಬಿಐ ಕೋರಿಕೆ ಮಾನ್ಯ ಮಾಡಿ ನ್ಯಾಯಾಲಯ ಸಮ್ಮತಿಸಿದೆ.

ABOUT THE AUTHOR

...view details