ಕರ್ನಾಟಕ

karnataka

ಬೀದರ್ ಜಿಲ್ಲೆಯಲ್ಲಿ ಮತ್ತೆ 22 ಜನರಲ್ಲಿ ಸೋಂಕು ಪತ್ತೆ : ಇನ್ನೂ 1111 ಜನರ ವರದಿ ಬಾಕಿ

By

Published : Jun 23, 2020, 7:49 PM IST

ರಾಜ್ಯದ ಗಡಿ ಭಾಗದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದ್ವಿಗುಣವಾಗುತ್ತಿದ್ದು, ಬೀದರ್ ಜಿಲ್ಲೆಯಲ್ಲಿ ಇಂದು ಮತ್ತೆ 22 ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ.

Twenty two corona cases found in bidar
Twenty two corona cases found in bidar

ಬೀದರ್: ಜಿಲ್ಲೆಯಲ್ಲಿಂದು ಮತ್ತೆ 22 ಜನರಲ್ಲಿ ಸೋಂಕು ಧೃಡವಾಗಿದ್ದು, 1111 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ.

ಜಿಲ್ಲೆಯ ಕಮಲನಗರ ತಾಲೂಕಿನ ಹಾಲಹಳ್ಳಿ-06, ಹೊಕ್ರಾಣ-01, ಕೊಟಗ್ಯಾಳ-02, ಹಕ್ಯಾಳ-03, ಹೊಳಸಮುದ್ರ-02, ಬಳತ(ಕೆ)-01, ಮುರ್ಕಿ-02, ಕಮಲನಗರ-01, ಔರಾದ್-01, ಬೀದರ್ ನಗರ-03 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಏರಿಕೆಯಾದ ಸೋಂಕಿತರೆಲ್ಲರು ಮಹಾರಾಷ್ಟ್ರ ದಿಂದ ವಾಪಸ್ಸಾದವರೆ ಹೆಚ್ಚಾಗಿದ್ದು ಗಡಿ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 35275 ಜನರ ಗಂಟಲು ಮತ್ತು ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಇಂದು ಒಂದೇ ದಿನ ಬ್ರೀಮ್ಸ್ ಪ್ರಯೋಗಾಲಯದಲ್ಲಿ 348 ಮಾದರಿ ಪರೀಕ್ಷೆ ಮಾಡಲಾಗಿದೆ. ಇನ್ನೂ 1111 ಜನರ ಮಾದರಿ ಪರೀಕ್ಷಾ ವರದಿ ಬಾಕಿ ಇದೆ. 33640 ಜನರ ವರದಿ ನೆಗೆಟಿವ್ ಬಂದಿದ್ದು 524 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಇಂದು 43 ಜನರು ಗುಣಮುಖರಾಗಿ ಮನೆಗೆ ಹೊಗಿದ್ದು ಇಲ್ಲಿಯವರೆಗೆ ಒಟ್ಟು 367 ಜನರನ್ನು ಗುಣಪಡಿಸಲಾಗಿದೆ. ಅಲ್ಲದೆ ಸೋಂಕಿನಿಂದ 15 ಜನರು ಮೃತಪಟ್ಟಿದ್ದಾರೆ. ಸಧ್ಯ ಕೊರೊನಾ ವಾರ್ಡ್ ನಲ್ಲಿ 142 ಜನರಿಗೆ ಚಿಕಿತ್ಸೆ ನೀಡಲಾಗ್ತಿದೆ.

ಜಿಲ್ಲೆಯಾದ್ಯಂತ 159 ಕಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದ್ದು ಈ ಪೈಕಿ 17 ಭಾಗಗಳ ಕಟೈನ್ಮೆಂಟ್ ಝೋನ್ ತೆರವುಗೊಳಿಸಿದ್ದು ಸದ್ಯ ಜಿಲ್ಲೆಯಲ್ಲಿ 142 ಭಾಗದಲ್ಲಿ ಕಟೈನ್ಮೆಂಟ್ ಝೋನ್ ಜಾರಿಯಲ್ಲಿದ್ದು ಈ ಭಾಗವನ್ನು ಸೋಂಕಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.

ABOUT THE AUTHOR

...view details