ಕರ್ನಾಟಕ

karnataka

ಆಕ್ಸಿಜನ್ ದುರಂತ: ಚಾಮರಾಜನಗರ ಡಿಸಿ ಡಾ.ಎಂ.ಆರ್‌.ರವಿ ಎತ್ತಂಗಡಿ?

By

Published : May 20, 2021, 10:50 AM IST

ಚಾಮರಾಜನಗರದಲ್ಲಿ ಸಂಭವಿಸಿದ ಆಕ್ಸಿಜನ್ ದುರಂತಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳು ಕೇಳಿ ಬಂದಿತ್ತು. ಈ ಬೆನ್ನಲ್ಲೇ ಅವರನ್ನು ಸ್ಥಳ ನೀಡದೇ ಸರ್ಕಾರ ಎತ್ತಂಗಡಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

Chamarajanagar
Chamarajanagar

ಚಾಮರಾಜನಗರ: ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ಹೊಣೆಯಾಗಿಸಿ ಸ್ಥಳ ನೀಡದೇ ಸರ್ಕಾರ ಅವರನ್ನು ಎತ್ತಂಗಡಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಫೆ‌.13ರಂದೇ ಚಾಮರಾಜನಗರ ಡಿಸಿ ರವಿ ಅವರನ್ನು ವರ್ಗಾವಣೆಗೊಳಿಸಿ ಅವರ ಸ್ಥಾನಕ್ಕೆ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಡಾ.ಬಿ‌.ಸಿ.ಸತೀಶ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಬಳಿಕ ಕೆಲವು ಬೆಳವಣಿಗೆಗಳು ನಡೆದು ರವಿ ಗಡಿಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಮುಂದುವರೆದಿದ್ದರು.

ಇದನ್ನೂ ಓದಿ: ಲಾಕ್​ಡೌನ್ ನಡುವೆಯೂ ಹೋಟೆಲ್​ನಲ್ಲಿ ಜೂಜಾಟ: 27 ಜನರ ಬಂಧನ

ದುರಂತ ನಡೆದ ಬಳಿಕ ನಡೆದ ನ್ಯಾಯಾಂಗ ತನಿಖೆಯಲ್ಲಿ ರವಿ ಅವರ ವೈಫಲ್ಯ, ನಾಯಕತ್ವ ಪ್ರದರ್ಶಿಸುವಲ್ಲಿ ವಿಫಲರಾಗಿರುವುದರ ಕುರಿತು, ಜೊತೆಗೆ ಕೆಲ ಕಡತಗಳನ್ನು ತಿದ್ದಿರುವ ಬಗ್ಗೆಯೂ ಉಲ್ಲೇಖಿಸಿದ್ದರಿಂದ ಅವರ ವರ್ಗಾವಣೆಗೆ ಒತ್ತಡವಿತ್ತು. ಹೀಗಾಗಿ ಮೂರು ತಿಂಗಳ ಹಿಂದೆ ಮಾಡಿದ್ದ ವರ್ಗಾವಣೆ ಆದೇಶದಂತೆ ಸರ್ಕಾರ ಅವರ ಸ್ಥಾನಕ್ಕೆ ಸತೀಶ್ ನೇಮಕಗೊಳಿಸಿದೆ ಎಂದು ತಿಳಿದುಬಂದಿದೆ.

ಮತ್ತೊಂದು ಮೂಲಗಳ ಪ್ರಕಾರ, ಚಾಮರಾಜನಗರ ಡಿಸಿಯಾಗಿ ರವಿ ಅವರೇ ಮುಂದುವರೆಯಬೇಕೆಂದು ಕೆಲ ಬಿಜೆಪಿ ನಾಯಕರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details