ಕರ್ನಾಟಕ

karnataka

ಜಿಂದಾಲ್​ನಿಂದ ಮಹಾರಾಷ್ಟ್ರಕ್ಕೆ ಆಕ್ಸಿಜನ್ ಸರಬರಾಜು: ಎಂಬಿಪಿ ಅಸಮಾಧಾನ

By

Published : Apr 22, 2021, 3:10 PM IST

ಮಹಾರಾಷ್ಟ್ರಕ್ಕೆ ಆಕ್ಷಿಜನ್ ಕೊಡಬಾರದು ಎಂದು ಅಲ್ಲಾ, ಅವರು ನಮ್ಮ ಸಹೋದರರೇ. ಆದ್ರೆ, ನಮ್ಮ ರಾಜ್ಯದ ಬೇಡಿಕೆ ಮೊದಲು ಪುರೈಸಲಿ ಎಂದು ಎಂಬಿಪಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

mb patil reaction
mb patil reaction

ವಿಜಯಪುರ: ಜಿಂದಾಲ್​ನಲ್ಲಿ ತಯಾರಾಗುವ ಆಕ್ಸಿಜನ್‌ನ ಶೇ 50 ರಷ್ಟು ಮಹಾರಾಷ್ಟ್ರಕ್ಕೆ ಪೂರೈಕೆಯಾಗುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಆರೋಪ ಮಾಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, ಮೊದಲು ನಮ್ಮ ರಾಜ್ಯದ ಜನತೆಗೆ ಅವಶ್ಯಕತೆ ತಕ್ಕಂತೆ ಸೇವೆ ಪೂರ್ಣಗೊಳಿಸಿ. ಹೆಚ್ಚುವರಿ ಆಕ್ಸಿಜನ್ ಬೇಕಾದ್ರೇ ಮಹಾರಾಷ್ಟ್ರಕ್ಕೆ ನೀಡಿ ಎಂದಿದ್ದಾರೆ.

ನಮ್ಮ ಕೊರತೆ ಮೊದಲು ನೀಗಿಸಿ. ನಮಗೆ ಕೊರತೆ ಇದ್ದಾಗ ಬೇರೆಯವರಿಗೆ ಕೊಡೊದು ಎಷ್ಟು ಸೂಕ್ತ. ಮಹಾರಾಷ್ಟ್ರಕ್ಕೆ ಕೊಡಬಾರದು ಅಂತಾ ಅಲ್ಲ, ಅವರು ನಮ್ಮ ಸಹೋದರರೇ. ಆದ್ರೆ, ನಮ್ಮ ರಾಜ್ಯದ ಬೇಡಿಕೆ ಮೊದಲು ಪುರೈಸಲಿ ಎಂದರು.

ಕೊವಿಡ್ ಎರಡನೇ ಅಲೆ ಅಬ್ಬರಿಸುತ್ತಿದ್ದರೂ ಜನ ಕೊರೊನಾ ನಿಯಮ ಸರಿಯಾಗಿ ಪಾಲಿಸುತ್ತಿಲ್ಲ. ಕೊರೊನಾ ಆರ್ಭಟಿಸಿದ ತಕ್ಷಣ ಹೆದರುವುದು, ಸ್ವಲ್ಪ ಕಡಿಮೆಯಾದರೆ ಸಾಕು ಮತ್ತೆ ಮಾಸ್ಕ್, ಸಾಮಾಜಿಕ ಅಂತರ ಮರೆತು ಬಿಡುವುದು ಸರಿಯಲ್ಲ ಎಂದು ಜನರಿಗೆ ಮನವರಿಕೆ ಮಾಡಿದರು.

ABOUT THE AUTHOR

...view details