ಕರ್ನಾಟಕ

karnataka

10 ನಿಮಿಷ ತಡವಾದ್ರೇ ಲೈನ್‌ಮ್ಯಾನ್‌ಗೆ ಹೀಗೆ ಹೊಡೆಯುವುದಾ..

By

Published : Jun 5, 2019, 9:36 PM IST

ಮಳೆಗಾಲದಲ್ಲಿ ಪವರ್ ಕಟ್ ಆಗುವುದು ಸಾಮಾನ್ಯ. ಆದರೆ, ತಮ್ಮ ಕೋಳಿ ಫಾರಂ ಹಾಗೂ ಗ್ರಾಮಕ್ಕೆ ಸಂಬಂಧಿಸಿದ ಜಂಪ್ ಕಟ್ ಆದ ಹಿನ್ನೆಲೆಯಲ್ಲಿ ಲೈನ್‌ಮ್ಯಾನ್​ಗೆ ಹಿಗ್ಗಾಮುಗ್ಗಾ ಥಳಿಸಿದ‌ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹಿರೇಕಟ್ಟಿಗೆನಹಳ್ಳಿ ಗ್ರಾಮದಲ್ಲಿ‌ ನಡೆದಿದೆ.

10 ನಿಮಿಷ ತಡವಾಗಿದಕ್ಕೆ ಲೈನ್ ಮ್ಯಾನ್ ಗೆ ಹೀಗೆ ಹೊಡೆಯುವುದಾ...?

ಚಿಕ್ಕಬಳ್ಳಾಪುರ : ಮಳೆಗಾಲದಲ್ಲಿ ಪವರ್ ಕಟ್ ಆಗುವುದು ಸಾಮಾನ್ಯ. ಆದರೆ, ತಮ್ಮ ಕೋಳಿ ಫಾರಂ ಹಾಗೂ ಗ್ರಾಮಕ್ಕೆ ಸಂಬಂಧಿಸಿದ ಜಂಪ್ ಕಟ್ ಆದ ಹಿನ್ನೆಲೆ ಲೈನ್‌ಮ್ಯಾನ್​ಗೆ ಹಿಗ್ಗಾಮುಗ್ಗಾ ಥಳಿಸಿದ‌ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹಿರೇಕಟ್ಟಿಗೆನಹಳ್ಳಿ ಗ್ರಾಮದಲ್ಲಿ‌ ನಡೆದಿದೆ.

ಇಂದು ಮುಂಜಾನೆ 9ರ ಸುಮಾರಿಗೆ ಗ್ರಾಮದ ನಿವಾಸಿ ಮಂಜುನಾಥ್ ತಮ್ಮ ಕೋಳಿ ಫಾರಂ ಸೇರಿದಂತೆ ಗ್ರಾಮದಲ್ಲಿ ಕರೆಂಟ್ ಇಲ್ಲದಿರುವ ಕಾರಣ ಕೆಇಬಿ ಕಚೇರಿಗೆ ಕರೆ ಮಾಡಿ ತಿಳಿಸಿದ್ದಾರೆ.‌ ದೂರು ಪಡೆದ ಅಧಿಕಾರಿಗಳು ಲೈನ್‌ಮ್ಯಾನ್‌ಗೆ ತಿಳಿಸಿದ್ದಾರೆ. ಲೈನ್‌ಮ್ಯಾನ್ ಭರತ್ ಸಮಸ್ಯೆ ಸರಿಪಡಿಸಿದ್ದಾರೆ. ನಂತರ‌ ಹೋಟೆಲ್ ಬಳಿ ತಿಂಡಿತಿನ್ನುತ್ತಿದ್ದ ವೇಳೆ ಲೈನ್‌ಮ್ಯಾನ್ ಮಂಜುನಾಥ್ ಭರತ್​ಗೆ ನೀನು 24 ಗಂಟೆ ಸೇವೆ ಸಲ್ಲಿಸಬೇಕು. ತಡ ಯಾಕೆ ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಗಲಾಟೆ ತಾರಕಕ್ಕೇರಿ ಒಬ್ಬರಿಗೊಬ್ಬರು ಕೈ-ಕೈ ಮಿಲಾಯಿಸಿದ್ದಾರೆ. ಈ ವೇಳೆ ಮಂಜುನಾಥ್​ ಲೈನ್​ಮ್ಯಾನ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

10 ನಿಮಿಷ ತಡವಾಗಿದಕ್ಕೆ ಲೈನ್‌ಮ್ಯಾನ್‌ಗೆ ಹೀಗೆ ಹೊಡೆಯುವುದಾ

ಮಂಜುನಾಥ್ ಪೋಸ್ಟ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ 6 ವರ್ಷದ ಹಿಂದೆ ಬೆಸ್ಕಾಂ ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡು ಜೈಲು ಸೇರಿದ್ದ. ಪದೆಪದೇ ಲೈನ್ ಮ್ಯಾನ್‌ಗಳ ಜೊತೆ ಕಿರಿಕ್ ಮಾಡಿಕೊಳ್ಳುತ್ತಿರುವ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸಿದರೂ ಇಂಥ ಘಟನೆ ನಡೆದಿರುವುದು ಬೆಸ್ಕಾಂ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗೆ ಬೇಸರವನ್ನು ತಂದಿದೆ.

ಲೈನ್‌ಮ್ಯಾನ್ ಹಾಗೂ ಬೆಸ್ಕಾಂ ಅಧಿಕಾರಿಗಳು ಮಂಜುನಾಥ್ ವಿರುದ್ಧ ಆರೋಪಿಸಿದ್ರೇ, ಬೆಸ್ಕಾಂ ಅಧಿಕಾರಿಗಳ ವಿರುದ್ದ ಮಂಜುನಾಥ್ ಆಪಾದಿಸಿದ್ದಾರೆ. ಯಾವುದೇ ಕೆಲಸವನ್ನು ಮಾಡಿಕೊಡಬೇಕಾದರೂ ಲೈನ್‌ಮ್ಯಾನ್‌ಗಳು ಲಂಚ ಪಡೆಯುತ್ತಿದ್ದಾರೆ. ಇದೇ ವಿಷಯಕ್ಕಾಗಿ ಹಿಗ್ಗಾಮುಗ್ಗಾ ಥಳಿಸಿರುವುದಾಗಿ ತಿಳಿಸಿದ್ದಾರೆ. ಸದ್ಯ ಇಬ್ಬರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಮ್ಮಗೆ ನ್ಯಾಯ ದೊರಕಿಸಿಕೊಡಿ ಎಂದು ಠಾಣೆಯ ಮೆಟ್ಟಿಲೇರಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TAGGED:

ABOUT THE AUTHOR

...view details