ಕರ್ನಾಟಕ

karnataka

ಬಯಕೆ ಈಡೇರಿಸುವ ಬಂಗಾರದ ಕಾಮಣ್ಣ... ನಾನಾ ಭಾಗ್ಯಗಳ ಸರದಾರನೀತ...!

By

Published : Mar 27, 2019, 1:46 AM IST

ಕನ್ಯೆಯರಿಗೆ ಕಂಕಣ ಭಾಗ್ಯ, ಮಹಿಳೆಯರಿಗೆ ಸಂತಾನಭಾಗ್ಯ, ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ, ಬೇಡಿದವರಿಗೆ ಬಯಸಿದ ಭಾಗ್ಯಗಳೆಲ್ಲವನ್ನೂ ನೀಡುವ ಕಾಮಣ್ಣ ಗದಗನಲ್ಲಿದ್ದಾನೆ.

ಬಯಕೆ ಈಡೇರಿಸುವ ಬಂಗಾರದ ಕಾಮಣ್ಣ

ಗದಗ: ಮದುವೆಯಾಗದವರಿಗೆ ಕಂಕಣ ಭಾಗ್ಯ, ಮಕ್ಕಳಾಗದವರಿಗೆ ಸಂತಾನ ಭಾಗ್ಯ, ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ, ಬಡವರಿಗೆ ಸಿರಿತನ ಭಾಗ್ಯ ಹೀಗೆ ಬೇಡಿದವರಿಗೆ ಬಯಸಿದೆಲ್ಲ ನೀಡುವ ಫವರ್ ಫುಲ್ ರತಿ-ಕಾಮರು ಗದಗನಲ್ಲಿದ್ದಾರೆ.

ಬಯಕೆ ಈಡೇರಿಸುವ ಬಂಗಾರದ ಕಾಮಣ್ಣ

ನಗರದ ಕಿಲ್ಲಾ ಓಣಿಯಲ್ಲಿ ನೂರಾರು ವರ್ಷಗಳಿಂದ ಈ ಕಾಮ-ರತಿರನ್ನ ಪ್ರತಿಷ್ಠಾಪನೆ ಮಾಡುತ್ತಾ ಬರಲಾಗುತ್ತಿದೆ. ಸರ್ಕಾರಿ ರತಿ-ಕಾಮರು,ಬ್ರಿಟಿಷ್​ ಕಾಮಣ್ಣ ಎಂದೆಲ್ಲಾ ಕರೆಯುತ್ತಾರೆ. ಇಲ್ಲಿಯ ರತಿಗೆ ಪ್ರತಿ ವರ್ಷ ಸುಮಾರು 20ಕೆಜಿಗೂ ಅಧಿಕ ಬಂಗಾರದ ಲೇಪನಗಳನ್ನ ಹಾಕಲಾಗುತ್ತದೆ.ಕೆಜಿ ಗಟ್ಟಲೆ ಚಿನ್ನದ ಸರಗಳಿಂದ ಶೃಂಗಾರಗೊಳ್ಳುವ ರತಿ-ಮನ್ಮಥರನ್ನು ಅದ್ದೂರಿಯಾಗಿ ರಾತ್ರಿ ಮೆರವಣಿಗೆ ಮಾಡುತ್ತಾರೆ. 154 ವರ್ಷಗಳಿಂದ ಇಲ್ಲಿ ರತಿ-ಕಾಮರನ್ನ ಪ್ರತಿಷ್ಠಾಪಿಸುತ್ತಾ ಬರಲಾಗುತ್ತಿದೆ. ತಮ್ಮ ಮನೆಯಲ್ಲಿರುವ ಬಂಗಾರ ಈ ರತಿಗೆ ನೀಡಿದರೆ ಮುಂದಿನ ವರ್ಷ ಮತ್ತಷ್ಟು ಬಂಗಾರ ಹೆಚ್ಚಾಗುತ್ತೆದೆಂಬ ನಂಬಿಕೆ ಇಲ್ಲಿಯ ಜನರದ್ದು.

154 ವರ್ಷಗಳ ಇತಿಹಾಸವಿರುವ ಗದಗ ನಗರದ ರತಿ-ಕಾಮರ ಹೋಳಿ ಆಚರಣೆಗೆ ತನ್ನದೇ ಆದ ವೈಶಿಷ್ಟ್ಯ ವಿದೆ. ಐದು ದಿನಗಳವರೆಗೆ ಈ ರತಿ ಮನ್ಮಥರನ್ನ ಪ್ರತಿಷ್ಠಾಪಿಸುತ್ತಾರೆ. ಪ್ರತಿ ನಿತ್ಯ ಎರಡು ಭಾರಿ ಸಿಹಿ ಅಡುಗೆ ಎಡೆಮಾಡುವ ಮೂಲಕ ಪೂಜೆ ಮಾಡುತ್ತಾರೆ. ಈ ರತಿ ಕಾಮರಿಗೆ ನಡೆದುಕೊಂಡರೆ ಮದುವೆಯಾಗದವರಿಗೆ ಕಂಕಣ ಭಾಗ್ಯ, ಮಕ್ಕಳಾಗದವರಿಗೆ ಸಂತಾನ ಭಾಗ್ಯ, ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಹೀಗೆ ಬೇಡಿಬಂದ ಭಕ್ತರಿಗೆ ಬಯಸಿದ್ದನ್ನೆಲ್ಲವನ್ನು ನೀಡುವ ಸರಸ ಭಂಗಿಯ ಕಲ್ಪ ವೃಕ್ಷವಿದ್ದಂತೆ. ನಂಬಿಕೆಯಿಂದ ರತಿಕಾಮರಿಗೆ ನಡೆದುಕೊಳ್ಳುವುದರಿಂದ ನಮಗೆ ಒಳ್ಳೆಯದಾಗಿದೆ ಎಂತಿದ್ದಾರೆ ಭಕ್ತರು.

ಗದಗ ನಗರದ ಕಿಲ್ಲಾ ಕಾಲೋನಿಯ ರತಿ-ಕಾಮರ ದರ್ಶನಕ್ಕೆ ಬೇರೆ ಬೇರೆ ಜಿಲ್ಲೆಯಿಂದಲೂ ಭಕ್ತರು ಬರುತ್ತಾರೆ. ಸುಮಾರು 20 ಕೆಜಿಗೂ ಅಧಿಕ ಬಂಗಾರ ವಸ್ತುಗಳನ್ನ ಮೂರ್ತಿಗೆ ಹಾಕುತ್ತಾರೆ. ಜನರು ತಮ್ಮ ಬೇಡಿಕೆಗಳನ್ನ ಸರ್ಕಾರದ ಮುಂದಿಟ್ಟರೆ ಈಡೇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕೊರಳಲ್ಲಿ ಕೆಜಿ ಗಟ್ಟಲೆ ಚಿನ್ನದ ಸರ ಹಾಕ್ಕೊಂಡು ಮೆರೆಯುವ ಗದುಗಿನ ಸರ್ಕಾರಿ ರತಿಕಾಮರಿಗೆ ಬೇಡಿಕೊಂಡ್ರೆ ಈಡೆರುವುದಂತೂ ಗ್ಯಾರಂಟಿ.

sample description

ABOUT THE AUTHOR

...view details