ಕರ್ನಾಟಕ

karnataka

ನೀತಿ ಸಂಹಿತೆ ಉಲ್ಲಂಘನೆ: ಮನೇಕಾ ಗಾಂಧಿ, ಅಜಮ್​ ಖಾನ್​​ಗೆ ಬಿಸಿ ಮುಟ್ಟಿಸಿದ ಆಯೋಗ

By

Published : Apr 15, 2019, 11:15 PM IST

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಬಳಿಕ ಮತ್ತಿಬ್ಬರು ರಾಜಕೀಯ ನಾಯಕರಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ.

ಮನೇಕಾ ಗಾಂಧಿ, ಅಜಮ್​ ಖಾನ್

ನವದೆಹಲಿ:ಚುನಾವಣಾ ಪ್ರಚಾರದ ವೇಳೆ ದ್ವೇಷಮಯ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಬಳಿಕ ಇನ್ನಿಬ್ಬರು ಪ್ರಮುಖ ನಾಯಕರಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿದೆ.

ಸುಲ್ತಾನ್​ಪುರದಲ್ಲಿ ನಡೆದ ಪ್ರಚಾರದ ವೇಳೆ ಬಿಜೆಪಿ ನಾಯಕಿ ಹಾಗೂ ಪಿಲಿಭಿಟ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿ ನೀತಿ ಸಂಹಿತೆ ಉಲ್ಲಂಘಿಸಿದ ಪರಿಣಾಮ 48 ಗಂಟೆಗಳ ಕಾಲ ಚುನಾವಣಾ ಪ್ರಚಾರವನ್ನು ಆಯೋಗ ನಿಷೇಧಿಸಿದೆ. ಈ ಆದೇಶ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಅನ್ವಯವಾಗಲಿದೆ.

ಸಂಬಂಧಿತ ಸುದ್ದಿ:

ದ್ವೇಷಪೂರಿತ ಭಾಷಣ: ಯೋಗಿ ಆದಿತ್ಯನಾಥ್​ ಹಾಗೂ ಮಾಯಾವತಿಗೆ ಶಾಕ್​ ನೀಡಿದ ಆಯೋಗ

ಯುಪಿಯ ರಾಮ್​ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಕಾರಣದಿಂದ ಸಮಾಜವಾದಿ ಪಾರ್ಟಿ ನಾಯಕ ಅಜಮ್​ ಖಾನ್​​ಗೂ ಆಯೋಗ ಚುನಾವಣಾ ಪ್ರಚಾರಕ್ಕೆ ನಿಷೇಧ ಹೇರಿದೆ. ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಮುಂದಿನ 72 ಗಂಟೆಗಳ ಕಾಲ ಅಜಮ್​ ಖಾನ್​ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬಾರದು ಎಂದು ಆಯೋಗ ಆದೇಶಿಸಿದೆ.

Intro:Body:

ನೀತಿ ಸಂಹಿತೆ ಉಲ್ಲಂಘನೆ: ಮನೇಕಾ ಗಾಂಧಿ, ಅಜಮ್​ ಖಾನ್​​ಗೆ ಬಿಸಿ ಮುಟ್ಟಿಸಿದ ಆಯೋಗ



ನವದೆಹಲಿ: ಚುನಾವಣಾ ಪ್ರಚಾರದ ವೇಳೆ ದ್ವೇಷಪೂರಿತ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಬಳಿಕ ಇನ್ನಿಬ್ಬರು ಪ್ರಮುಖ ನಾಯಕರಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿದೆ.



ಸುಲ್ತಾನ್​ಪುರದಲ್ಲಿ ನಡೆದ ಪ್ರಚಾರದ ವೇಳೆ ಬಿಜೆಪಿ ನಾಯಕಿ ಹಾಗೂ ಫಿಲಿಭಿಟ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪರಿಣಾಮ 48 ಗಂಟೆಗಳ ಕಾಲ ಚುನಾವಣಾ ಪ್ರಚಾರವನ್ನು ಆಯೋಗ ನಿಷೇಧಿಸಿದೆ. ಈ ಆದೇಶ ನಾಳೆ ಬೆಳಗ್ಗೆ 10 ಗಂಟೆಯಿಂದ ಅನ್ವಯವಾಗಲಿದೆ.



ಯುಪಿಯ ರಾಮ್​ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಕಾರಣದಿಂದ ಸಮಾಜವಾದಿ ಪಾರ್ಟಿ ನಾಯಕ ಅಜಮ್​ ಖಾನ್​​ಗೂ ಆಯೋಗ ಚುನಾವಣಾ ಪ್ರಚಾರಕ್ಕೆ ನಿಷೇಧ ಹೇರಿದೆ. ನಾಳೆ ಬೆಳಗ್ಗೆ ಹತ್ತು ಗಂಟೆಯಿಂದ ಮುಂದಿನ 72 ಗಂಟೆಗಳ ಕಾಲ ಅಜಮ್​ ಖಾನ್​ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬಾರದು ಎಂದು ಆಯೋಗ ಆದೇಶಿಸಿದೆ.


Conclusion:

ABOUT THE AUTHOR

...view details