ಕರ್ನಾಟಕ

karnataka

ಮಿಜೋರಾಂನಲ್ಲಿ ನಾವು ಸ್ಥಿರ ಸರ್ಕಾರ ರಚಿಸುವ ವಿಶ್ವಾಸವಿದೆ: ಝಡ್‌ಪಿಎಂ ಪಕ್ಷದ ಅಧ್ಯಕ್ಷ ಲಾಲ್ದುಹೋಮ

By ANI

Published : Dec 4, 2023, 8:55 AM IST

Updated : Dec 4, 2023, 10:48 AM IST

Mizoram assembly elections results today: ಈಶಾನ್ಯ ಭಾರತದ ಪುಟ್ಟ ರಾಜ್ಯ ಮಿಜೋರಾಂ ವಿಧಾನಸಭೆಗೆ ನಡೆದ ಚುನಾವಣೆಯ ಮತಎಣಿಕೆ ಪ್ರಾರಂಭವಾಗಿದ್ದು ಇಂದು ರಾಜ್ಯದ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಇಲ್ಲಿನ ಪ್ರಮುಖ ಪಕ್ಷವಾದ ಝಡ್‌ಪಿಎಂ ಅಧ್ಯಕ್ಷ ಲಾಲ್ದುಹೋಮ ಪ್ರತಿಕ್ರಿಯಿಸಿದ್ದು, ತಮ್ಮ ಪಕ್ಷದ ಗೆಲುವಿನ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

ZPM President Lalduhoma
ಜೆಡ್​ಪಿಎಂ ಅಧ್ಯಕ್ಷ ಲಾಲ್ದುಹೋಮ

ಐಜ್ವಾಲ್‌(ಮಿಜೋರಾಂ):ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆಗೂ ಮುನ್ನ ಜೋರಾಮ್ ಪೀಪಲ್ಸ್​​ ಮೂವ್ಮೆಂಟ್​ನ (ಝಡ್‌ಪಿಎಂ) ಅಧ್ಯಕ್ಷ ಮತ್ತು ಸೆರ್ಚಿಪ್ ಕ್ಷೇತ್ರದ ಅಭ್ಯರ್ಥಿ ಲಾಲ್ದುಹೋಮ ಅವರು ರಾಜ್ಯದಲ್ಲಿ ಸ್ಥಿರ ಸರ್ಕಾರ ರಚಿಸುವ ಕುರಿತು ಮಾತನಾಡಿದ್ದಾರೆ.

"ನಾವು ಸರ್ಕಾರ ರಚಿಸುವ ವಿಶ್ವಾಸ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಎಕ್ಸಿಟ್​ ಪೋಲ್ ಕೂಡಾ​ ವಿಶ್ವಾಸಾರ್ಹವಾಗಿವೆ. ಎಲ್ಲಾ ಎಕ್ಸಿಟ್ ಪೋಲ್ ಫಲಿತಾಂಶಗಳು ನಮ್ಮತ್ತ ಬೊಟ್ಟು ಮಾಡಿವೆ" ಎಂದರು.

"ಸರ್ಕಾರ ರಚಿಸಲು ನಮಗೆ ಬೇರೆ ಯಾವುದೇ ರಾಜಕೀಯ ಪಕ್ಷಗಳ ಸಹಾಯ ಬೇಕಿಲ್ಲ. ಮೊದಲಿನಿಂದಲೂ ನಾವು ಬಹುಮತ ಪಡೆಯುತ್ತೇವೆ ಎಂದು ಹೇಳುತ್ತಲೇ ಬಂದಿದ್ದೇವೆ. ನಾವು ಸ್ಥಿರ ಸರ್ಕಾರ ರಚಿಸಲಿದ್ದೇವೆ. ಜೆಡ್​ಪಿಎಂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ನಂಬಿಕೆ ಇದೆ. ಕೋಳಿ ಮೊಟ್ಟೆಯೊಡೆಯವ ಮುನ್ನವೇ ನೀವು ಅವುಗಳನ್ನು ಎಣಿಸುವ ಕೆಲಸ ಮಾಡಬೇಡಿ" ಎಂದರು.

ಇದಕ್ಕೂ ಮುನ್ನ ಲಾಲ್ದುಹೋಮ ಮಿಜೋರಾಂ ರಾಜಧಾನಿಯ ಪ್ರೆಸ್ಬಿಟೇರಿಯನ್ ಚರ್ಚ್‌ನಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಸಮೀಕ್ಷೆಗಳ ಪ್ರಕಾರ, ಎರಡು ಪ್ರಾದೇಶಿಕ ಪಕ್ಷಗಳಾದ ಎಂಎನ್‌ಎಫ್‌ ಮತ್ತು ಜೆಡ್‌ಪಿಎಂ ಮಿಜೋರಾಂನಲ್ಲಿ ಸರ್ಕಾರ ರಚಿಸಲು ರೇಸ್‌ನಲ್ಲಿವೆ. 40 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 7ರಂದು ಚುನಾವಣೆ ನಡೆದಿತ್ತು. ಮಿಜೋ ನ್ಯಾಷನಲ್ ಫ್ರಂಟ್ (ಎಂಎಎನ್‌ಎಫ್‌), ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ಜೆಡ್‌ಪಿಎಂ), ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮಧ್ಯೆ ಪೈಪೋಟಿ​​ ಏರ್ಪಟ್ಟಿದೆ.

ನಿನ್ನೆ (ಭಾನುವಾರ) ಕ್ರೈಸ್ತರಿಗೆ ಚರ್ಚ್​ನಲ್ಲಿ ಪ್ರಾರ್ಥನಾ ದಿನವಾಗಿದ್ದರಿಂದ ಮತ ಎಣಿಕೆಯನ್ನು ಭಾರತ ಚುನಾವಣಾ ಆಯೋಗ ಇಂದಿಗೆ ಮುಂದೂಡಿತ್ತು.

ಇದನ್ನೂ ಓದಿ:ವಿಧಾನಸಭಾ ಚುನಾವಣೆ: ಮಿಜೋರಾಂನಲ್ಲಿ ಮತ ಎಣಿಕೆ ಮುಂದೂಡಿಕೆ

Last Updated : Dec 4, 2023, 10:48 AM IST

ABOUT THE AUTHOR

...view details