ಕರ್ನಾಟಕ

karnataka

ಗಂಡನ ಮುಂದೆ ಹೆಂಡ್ತಿ ಮೇಲೆ ಗ್ಯಾಂಗ್​​ರೇಪ್​; ಚಿನ್ನಾಭರಣ, ನಗದು ದೋಚಿ ಪರಾರಿ!

By

Published : Mar 30, 2021, 9:35 PM IST

ತವರು ಮನೆಗೆ ತೆರಳುತ್ತಿದ್ದ ಮಹಿಳೆಯೋರ್ವಳ ಮೇಲೆ ದುಷ್ಕರ್ಮಿಗಳ ಗುಂಪು ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

women gang-raped
women gang-raped

ಆಗ್ರಾ(ಉತ್ತರ ಪ್ರದೇಶ):ಗಂಡನೊಂದಿಗೆ ತವರು ಮನೆಗೆ ತೆರಳುತ್ತಿದ್ದ ಮಹಿಳೆಯೋರ್ವಳ ಮೇಲೆ ದುಷ್ಕರ್ಮಿಗಳ ಗುಂಪು ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಅತ್ಯಾಚಾರ ಪ್ರಕರಣ ದಾಖಲು

ಮೋಟಾರು ಸೈಕಲ್ ಮೇಲೆ ತೆರಳುತ್ತಿದ್ದ ಮೂವರು ಯುವಕರು ಬಲವಂತವಾಗಿ ಈ ಕೃತ್ಯವೆಸಗಿದ್ದು, ತದನಂತರ ಆಕೆಯ ಕೊರಳಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣ ದೋಚಿದ್ದಾರೆ. ಹೋಳಿ ಹಬ್ಬದ ಪ್ರಯುಕ್ತ ಸಂಜೆ ವೇಳೆ ಗಂಡನ ಜೊತೆಗೆ ತಾಯಿ ಮನೆಗೆ ತೆರಳುತ್ತಿದ್ದ ವೇಳೆ ಎಟ್ಮಾಡ್ಪುರ ಪ್ರದೇಶದ ಜಲಪಾತದ ಬಳಿ ಅವರನ್ನು ತಡೆದು ಅರಣ್ಯ ಪ್ರದೇಶಕ್ಕೆ ಕರೆದ್ಯೊಯಲಾಗಿದೆ. ಈ ವೇಳೆ ಇಬ್ಬರ ಬಟ್ಟೆ ತೆಗೆದು ಹಾಕಿದ್ದು, ಪರಸ್ಪರ ದೈಹಿಕ ಸಂಪರ್ಕ ನಡೆಸುವಂತೆ ಚಿತ್ರಹಿಂಸೆ ನೀಡಿದ್ದಾರೆ. ಇದಕ್ಕೆ ಗಂಡ ನಿರಾಕರಿಸುತ್ತಿದ್ದಂತೆ ಇಬ್ಬರ ಮೇಲೆ ಅಮಾನವೀಯ ರೀತಿಯಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

ದೂರು ದಾಖಲು ಮಾಡಿದ ದಂಪತಿ

ಇದರ ವಿಡಿಯೋ ಸೆರೆ ಹಿಡಿದಿರುವ ದುಷ್ಕರ್ಮಿಗಳು, ತದನಂತರ ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಜತೆಗೆ ಮಹಿಳೆಯ ಪರ್ಸ್​​ನಲ್ಲಿದ್ದ 10 ಸಾವಿರ ರೂ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಂಪತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಸೆಕ್ಷನ್​ 376ಡಿ, 506 ಮತ್ತು 394ರ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ.

ABOUT THE AUTHOR

...view details