ಕರ್ನಾಟಕ

karnataka

ಭೀಮಾಶಂಕರ ಕೋಟೆ ಏರಿದ ಮೂರು ವರ್ಷದ ಕಂದಮ್ಮ

By

Published : Aug 5, 2022, 1:19 PM IST

The child Kesavi Ram

ಬೆಳಗ್ಗೆ ಗಡ್ ಪ್ರೇಮಿ ಚಾರಣಿಗರ ಗುಂಪಿನೊಂದಿಗೆ ಖಾಂದಾಸ್ ಗ್ರಾಮದಿಂದ ಭೀಮಾಶಂಕರ ಆರೋಹಣವನ್ನು ಪ್ರಾರಂಭಿಸಿದ್ದ ಕೇಸವಿ ಸಂಜೆ ವೇಳೆಗೆ ಚಾರಣ ಯಶಸ್ವಿಯಾಗಿ ಮುಗಿಸಿ ಗಮನ ಸೆಳೆದಿದ್ದಾಳೆ.

ಪಾಲ್ಘರ್-ದಹಾನು(ಮಹಾರಾಷ್ಟ್ರ):ಚಾರಣಕ್ಕೆ ಪ್ರಸಿದ್ಧವಾದ ಮಹಾರಾಷ್ಟ್ರದಭೀಮಾಶಂಕರ ಕೋಟೆಯ ಹದಿನೇಳು ಕಿ.ಮೀ ದಾರಿಯನ್ನು ದಹಾನುವಿನ ಎರಡು ವರ್ಷ ಹತ್ತು ತಿಂಗಳ ಮಗು ಕೇಸವಿ ರಾಮ್ ಮಚ್ಚಿ ಕೇವಲ ಹನ್ನೊಂದು ಗಂಟೆಗಳಲ್ಲಿ ಏರಿ ಇಳಿದಿದ್ದು, ಅನುಭವಿ ಚಾರಣಿಗರಿಗೂ ಅಚ್ಚರಿ ಮೂಡಿಸಿದ್ದಾಳೆ.

ದಹಾನುವಿನಿಂದ ಗಡ್​ಪ್ರೇಮಿ ಟ್ರೆಕ್ಕರ್ಸ್ ಗುಂಪು ಜುಲೈ 31 ರಂದು ಭೀಮಾಶಂಕರ ಜ್ಯೋತಿರ್ಲಿಂಗ ಕೋಟೆಗೆ ಟ್ರೆಕ್ಕಿಂಗ್ ಆಯೋಜಿಸಿತ್ತು. ವಡ್ಕುನ್ ಖೇಟಿಪದವಿನ ಆನಂದ್ ಮಚ್ಚಿ, ಅವರ ಪತ್ನಿ ಮತ್ತು ಸಹೋದರಿ ಕೂಡ ಈ ಗುಂಪಿನೊಂದಿಗೆ ತೆರಳಿದ್ದರು. ಜೊತೆಗೆ ತಾನೂ ಬರುತ್ತೇನೆ ಎಂದು ಹಠ ಹಿಡಿದ ಕಾರಣ ಕೇಸವಿಯನ್ನು ಕರೆದುಕೊಂಡು ಹೋಗಿದ್ದರು.

cಆರಣವೇರುತ್ತಿರುವ ಕೇಸವಿ ರಾಮ್​

ಕೇಸವಿ ಮಗುವಾದ ಕಾರಣ ಅವಳು ಭೀಮಾಶಂಕರ ಕೋಟೆಯನ್ನು ಏರುತ್ತಾಳೆಯೇ ಎನ್ನುವ ಬಗ್ಗೆ ಎಲ್ಲರಲ್ಲೂ ಅನುಮಾನವಿತ್ತು. ಬೆಳಗ್ಗೆ ಹತ್ತೂವರೆಗೆ ಕೇಸವಿ ಗಡ್ ಪ್ರೇಮಿ ಚಾರಣಿಗರ ಗುಂಪಿನೊಂದಿಗೆ ಖಾಂದಾಸ್ ಗ್ರಾಮದಿಂದ ಭೀಮಾಶಂಕರ ಆರೋಹಣ ಪ್ರಾರಂಭಿಸಿದ್ದರು. ಈ ಕೋಟೆಯನ್ನು ಹತ್ತಲು ಯಾವುದೇ ಮೆಟ್ಟಿಲುಗಳಿಲ್ಲದ ಕಾರಣ, ಅವಳು ತನ್ನ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಕೆಲವೊಮ್ಮೆ ಅತ್ತೆ ಮತ್ತು ಸಹೋದರಿಯ ಕೈಗಳನ್ನು ಹಿಡಿದು ನಡೆಯಲು ಪ್ರಾರಂಭಿಸಿದ್ದಳು.

ಶ್ರಾವಣ ಮಾಸವಾದ ಕಾರಣ ಭೀಮಾಶಂಕರ ಜ್ಯೋತಿರ್ಲಿಂಗ ದರ್ಶನಕ್ಕೆ ಭಕ್ತರ ದಂಡೇ ಸೇರಿತ್ತು. ಪುಟ್ಟ ಕೇಸವಿಯ ಧೈರ್ಯ ಮತ್ತು ಉತ್ಸಾಹ ನೋಡಿ ಅಲ್ಲಿರುವವರೂ ಪ್ರಶಂಸಿದ್ದರು. ಕೇಸವಿ 12 ಗಂಟೆ ಸುಮಾರಿಗೆ ಗಣೇಶ್ ಘಾಟ್ ದಾರಿಯಲ್ಲಿ 8.70 ಕಿ.ಮೀ ದೂರವನ್ನು ಯಾರದೇ ಸಹಾಯ, ಮತ್ತು ಏನೂ ತಕರಾರು ಎತ್ತದೇ ಕ್ರಮಿಸಿದ್ದಳು. ಕೋಟೆಯ ಬುಡ ತಲುಪುವಷ್ಟರಲ್ಲಿ ಸುಸ್ತಾಗಿ ಹೋಗಿದ್ದ ಹುಡುಗಿ, ಗಡ್​ಪ್ರೇಮಿ ಬಳಗದ ಪ್ರೋತ್ಸಾಹದಿಂದ 6.30ರ ಸುಮಾರಿಗೆ ಚಾರಣವನ್ನು ಯಶಸ್ವಿಯಾಗಿ ಮುಗಿಸಿದ್ದಳು

ಕೋಟೆಯನ್ನು ಹತ್ತಲು ಕೇಸವಿ 6 ಗಂಟೆ ತೆಗೆದುಕೊಂಡು ಹಾಗೂ ಇಳಿಯಲು 5.30 ಗಂಟೆ ತೆಗೆದುಕೊಂಡಿದ್ದಳು. ಸುಮಾರು 17 ಕಿ.ಮೀ. ಚಾರಣವನ್ನು ಪೂರ್ಣಗೊಳಿಸಲು ಕೇಸವಿ ಹನ್ನೊಂದು ಗಂಟೆ ಮೂವತ್ತು ನಿಮಿಷಗಳನ್ನು ತೆಗೆದುಕೊಂಡಿದ್ದಳು. ಚಾರಣದಲ್ಲಿ 62 ಮಂದಿ ಭಾಗವಹಿಸಿದ್ದರು. ಪುಟ್ಟ ಬಾಲಕಿಯ ಈ ಸಾಹಸಕ್ಕೆ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ :ಉತ್ತರಾಖಂಡ: ಸೈಕಲ್‌ನಲ್ಲಿ ಕಚೇರಿಗೆ ಆಗಮಿಸ್ತಾರೆ ಹಿರಿಯ ಐಎಎಸ್ ಅಧಿಕಾರಿ ಪುರುಷೋತ್ತಮ್

ABOUT THE AUTHOR

...view details