ಕರ್ನಾಟಕ

karnataka

ಶಿಮ್ಲಾ ಶಿವ ದೇವಾಲಯದ ಬಳಿ ಭೂಕುಸಿತ: ಮುಂದುವರಿದ ರಕ್ಷಣಾ ಕಾರ್ಯಾಚರಣೆ, ಇದುವರೆಗೆ 12 ಮೃತ ದೇಹಗಳು ಪತ್ತೆ

By

Published : Aug 16, 2023, 12:18 PM IST

Updated : Aug 16, 2023, 1:16 PM IST

ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಪದೇ ಪದೇ ಭೂಕುಸಿತ ಸಂಭವಿಸುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಮ್ಮರ್‌ಹಿಲ್‌ನ ಶಿವ ದೇವಸ್ಥಾನದ ಬಳಿ ಸಂಭವಿಸಿದ ಭೂಕುಸಿತದ ಅವಶೇಷಗಳಡಿ ಅನೇಕರು ಸಿಲುಕಿದ್ದು, ಮೂರನೇ ದಿನವಾದ ಇಂದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

Shimla Shiv Temple
ಶಿಮ್ಲಾದ ಶಿವ ದೇವಾಲಯದಲ್ಲಿ ಭೂಕುಸಿತ

ಶಿಮ್ಲಾ (ಹಿಮಾಚಲ ಪ್ರದೇಶ) : ರಾಜ್ಯದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ಧಾರಾಕಾರ ಮಳೆಯಿಂದಾಗಿ ವಿವಿಧೆಡೆ ಭೂಕುಸಿತ ಸಂಭವಿಸಿದ್ದು, ದೊಡ್ಡ ಪ್ರಮಾಣದಲ್ಲಿ ಹಾನಿಯುಂಟುಮಾಡಿದೆ. ವಿಶೇಷವಾಗಿ ರಾಜಧಾನಿ ಶಿಮ್ಲಾದಲ್ಲಿರುವ ಶಿವ ದೇವಾಲಯದ ಬಳಿ ಸಂಭವಿಸಿದ ಭೂಕುಸಿತದಲ್ಲಿ ಅನೇಕರು ಅವಶೇಷಗಳ ಅಡಿಯಲ್ಲಿ ಹೂತು ಹೋಗಿದ್ದಾರೆ. ಲಾಲ್ ಕೋಠಿ ಮತ್ತು ಕೃಷ್ಣನಗರದಲ್ಲಿ ಸಹ ಭೂಕುಸಿತವಾಗಿದ್ದು, ಇಂದು ರಾಜ್ಯಾದ್ಯಂತ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮೂರನೇ ದಿನವೂ ಮುಂದುವರಿದ ಕಾರ್ಯಾಚರಣೆ : ಶಿಮ್ಲಾದ ಸಮ್ಮರ್‌ಹಿಲ್‌ನ ಶಿವ ದೇವಾಲಯದಲ್ಲಿ ನಾಪತ್ತೆಯಾಗಿರುವವರ ಪತ್ತೆಗಾಗಿ ಮೂರನೇ ದಿನವಾದ ಇಂದು ಬೆಳಗ್ಗೆಯಿಂದಲೇ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಮಾಹಿತಿ ಪ್ರಕಾರ, ಇಲ್ಲಿಯವರೆಗೆ ಯಾವುದೇ ಮೃತದೇಹ ಪತ್ತೆಯಾಗಿಲ್ಲ. ಇಂದು ನಡೆಯುತ್ತಿರುವ ರಕ್ಷಣಾ ಕಾರ್ಯದಲ್ಲಿ ಸಣ್ಣ ಸೇನಾ ಯಂತ್ರಗಳ ಸಹಾಯವನ್ನು ಪಡೆಯಲಾಗುತ್ತಿದೆ. ಬೆಳಗ್ಗೆ 7.30 ರಿಂದ ಶೋಧ ಕಾರ್ಯ ಆರಂಭಿಸಲಾಗಿದ್ದು, ಇಲ್ಲಿಯವರೆಗೆ 12 ಜನರ ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಮಂಗಳವಾರ ತಡರಾತ್ರಿವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಬಳಿಕ ಸ್ಥಗಿತಗೊಳಿಸಲಾಗಿತ್ತು. ನಿನ್ನೆ 4 ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿತ್ತು. ಈ ಪೈಕಿ ಎಚ್‌ಪಿಯು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮಾನಸಿ ಅವರ ಮೃತದೇಹ ಪತ್ತೆಯಾಗಿದೆ. ಇದಲ್ಲದೇ, ಶೋಧ ಕಾರ್ಯದ ವೇಳೆ ತುಂಡಾದ ದೇಹವೊಂದು ಪತ್ತೆಯಾಗಿದ್ದು, ಇನ್ನೂ ಗುರುತು ಪತ್ತೆಯಾಗಿಲ್ಲ. ಮೂರನೇ ಮೃತದೇಹ ಎಚ್‌ಪಿಯು ಪ್ರೊಫೆಸರ್ ಪಿಎಲ್ ಶರ್ಮಾ ಅವರ ಪತ್ನಿ ಚಿತ್ರಲೇಖಾ ಹಾಗೂ ನಾಲ್ಕನೇ ಶವವನ್ನು ಸುಮನ್ ಕಿಶೋರ್ ಎಂದು ಗುರುತಿಸಲಾಗಿದೆ.

ರಕ್ಷಣಾ ಕಾರ್ಯದಲ್ಲಿ ಸ್ಥಳೀಯರು ಭಾಗಿ : ಸದ್ಯಕ್ಕೆ ಮಳೆ ಸ್ವಲ್ಪಮಟ್ಟಿಗೆ ನಿಂತಿದ್ದು, ಶೀಘ್ರದಲ್ಲಿ ರಕ್ಷಣಾ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆದರೆ, ದೇವಾಲಯದ ಸುತ್ತಲೂ ಅವಶೇಷಗಳು ಹೇರಳವಾಗಿರುವ ಕಾರಣ ನಾಪತ್ತೆಯಾಗಿರುವವರನ್ನು ಹುಡುಕುವುದು ತುಂಬಾ ಕಷ್ಟಕರವಾಗುತ್ತಿದೆ. ಹೀಗಾಗಿ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಜಿಲ್ಲಾಡಳಿತಕ್ಕೆ ಸ್ಥಳೀಯ ಜನ ಸಹಾಯ ಮಾಡಲು ಜಮಾಯಿಸಿದ್ದಾರೆ.

ಇದನ್ನೂ ಓದಿ :ಹಿಮಾಚಲದ ಸೋಲನ್‌ನಲ್ಲಿ ಮೇಘಸ್ಫೋಟ : ಒಂದೇ ಕುಟುಂಬದ 7 ಮಂದಿ ಬಲಿ, ಮೂವರು ನಾಪತ್ತೆ !

ಕೃಷ್ಣನಗರದಲ್ಲಿ ಭೂಕುಸಿತ : ಶಿಮ್ಲಾದ ಕೃಷ್ಣನಗರದಲ್ಲಿ ಸಹ ಭೂಕುಸಿತ ಸಂಭವಿಸಿದ ಪ್ರಕರಣಗಳು ನಿನ್ನೆ ಮುನ್ನೆಲೆಗೆ ಬಂದಿವೆ. ಕಸಾಯಿಖಾನೆ ಸೇರಿದಂತೆ 5ಕ್ಕೂ ಹೆಚ್ಚು ಮನೆಗಳು ಭೂಕುಸಿತಕ್ಕೆ ಒಳಗಾಗಿದೆ. ಕಸಾಯಿಖಾನೆ ಮೇಲಿದ್ದ ದೊಡ್ಡ ಮರವೊಂದು ಉರುಳಿ ಬಿದ್ದ ಪರಿಣಾಮ ಅವಘಡ ಸಂಭವಿಸಿದೆ. ಈ ಕಸಾಯಿಖಾನೆಯು ಶಿಮ್ಲಾ ಮಹಾನಗರ ಪಾಲಿಕೆಗೆ ಸೇರಿದ್ದು, ರಾತ್ರಿ ನಡೆದ ರಕ್ಷಣಾ ಕಾರ್ಯಾಚರಣೆ ವೇಳೆ ಇಬ್ಬರ ಶವ ಪತ್ತೆಯಾಗಿದೆ.

ಇದನ್ನೂ ಓದಿ :Cloud burst : ಮೇಘಸ್ಫೋಟಕ್ಕೆ ತತ್ತರಿಸಿದ ಹಿಮಾಚಲ ಪ್ರದೇಶ.. ಚರಂಡಿಯಲ್ಲಿ ಸಿಲುಕಿದ ವಾಹನಗಳು

Last Updated : Aug 16, 2023, 1:16 PM IST

ABOUT THE AUTHOR

...view details