ಕರ್ನಾಟಕ

karnataka

ಎವರೆಸ್ಟ್​ ಶಿಖರವೇರಿದ ಟೆನ್ಸಿಂಗ್ ನಾರ್ಗೆ ಪ್ರಶಸ್ತಿ ವಿಜೇತೆ ನೈನಾಸಿಂಗ್ ಸಾಹಸ ಗಾಥೆ

By

Published : Dec 2, 2022, 5:40 PM IST

ಎವರೆಸ್ಟ್​ ಶಿಖರವೇರಿದ ಟೆನ್ಸಿಂಗ್ ನಾರ್ಗೆ ಪ್ರಶಸ್ತಿ ವಿಜೇತೆ ನೈನಾಸಿಂಗ್ ಸಾಹಸ ಗಾಥೆ
Tensing Norge Award winner Nainasingh is an epic saga of Everest summiteer ()

ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಪರ್ವತಗಳನ್ನು ಏರುತ್ತಿದ್ದೆ ಎಂದು ಹೇಳುವ ನೈನಾ ಸಿಂಗ್, ಕಳೆದ ವರ್ಷ ಜೂನ್‌ನಲ್ಲಿ ಎವರೆಸ್ಟ್ ಏರಿದ್ದರು. ಎರಡು ವರ್ಷಗಳ ಹಿಂದೆ ಎವರೆಸ್ಟ್ ಏರುವ ಪ್ರಯತ್ನ ಆರ್ಥಿಕ ಸಂಕಷ್ಟದಿಂದ ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಜೂನ್ ನಲ್ಲಿ ನೈನಾ ಅವರ ಗುರಿ ಈಡೇರಿತ್ತು. ಆದರೆ ಆ ಸಾಹಸ ಆಕೆಯ ಪ್ರಾಣಕ್ಕೇ ಕುತ್ತು ತಂದಿತ್ತು. ಈ ಸಾಹಸಿ ಮಹಿಳೆ ನೈನಾ ಸಿಂಗ್ ಬಗ್ಗೆ ಒಂದಿಷ್ಟು ತಿಳಿಯೋಣ.. ಬನ್ನಿ..

ಹೈದರಾಬಾದ್​: ಜೀವನದಲ್ಲಿ ಒಮ್ಮೆಯಾದರೂ ಮೌಂಟ್ ಎವರೆಸ್ಟ್ ಶಿಖರ ಹತ್ತಬೇಕೆನ್ನುವುದು ಸಾಹಸಿಗಳ ಕನಸಾಗಿರುತ್ತದೆ. ಬಡತನವಿದ್ದರೂ ಎದೆಗುಂದದೆ ಎಲ್ಲ ಕಷ್ಟಗಳನ್ನು ದಾಟಿ ಮೌಂಟ್ ಎವರೆಸ್ಟ್ ಏರಿದ ಮಹಿಳೆ ನೈನಾ ಸಿಂಗ್ ಧಾಕಡ್. ಇವರ ಸಾಹಸಕ್ಕಾಗಿ ಇವರಿಗೆ ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ನೈನಾ ಸಿಂಗ್ ಅವರ ಬಾಲ್ಯವು ಅತ್ಯಂತ ಬಡತನದಲ್ಲಿ ಕಳೆದಿತ್ತು. ತಾಯಿಯ ಪಿಂಚಣಿ ಹೊರತುಪಡಿಸಿದರೆ ಜೀವನಕ್ಕೆ ಬೇರಾವುದೇ ಆಸರೆ ಇರಲಿಲ್ಲ. ಆದರೂ ನೈನಾಳ ಕನಸುಗಳು ಮಾತ್ರ ಶಿಖರಗಳ ಅಂಚಿನಲ್ಲಿ ವಿಹರಿಸುತ್ತಿದ್ದವು. ಆ ಕನಸುಗಳೇ ಆಕೆಯ ಸಾಧನೆಗೆ ಪ್ರೇರಣೆಯಾದವು.

ನೈನಾ ಸಿಂಗ್ ಧಾಕಡ್ ತನ್ನ ಬಾಲ್ಯದ ಬಗ್ಗೆ ಹೇಳಿದ್ದು ಹೀಗೆ:ನಮ್ಮದು ಛತ್ತೀಸ್‌ಗಢದ ಬಸ್ತಾರ್ ಸಮೀಪದ ಏಕಗುಡ ಗ್ರಾಮ. ನಾನು ಐದು ವರ್ಷದವಳಿದ್ದಾಗ ತಂದೆ ನಿಧನರಾದರು. ನನಗೆ ಇಬ್ಬರು ಸಹೋದರರಿದ್ದಾರೆ. ತಾಯಿ ಒಂಟಿಯಾಗಿ ನಮ್ಮ ಮೂವರನ್ನೂ ಬೆಳೆಸಿದರು. ನನ್ನ ತಾಯಿ ತನಗೆ ಬರುತ್ತಿದ್ದ ಸಣ್ಣ ಪಿಂಚಣಿಯಿಂದ ಮನೆಯ ಎಲ್ಲ ಅಗತ್ಯಗಳನ್ನು ಪೂರೈಸುತ್ತಿದ್ದಳು. ಆ ಕಷ್ಟದ ಪರಿಸ್ಥಿತಿಗಳಲ್ಲಿಯೂ ಅತ್ಯುನ್ನತ ಶಿಖರಗಳನ್ನು ಏರುವ ಕನಸು ನನ್ನನ್ನು ಕಾಡುತ್ತಿತ್ತು.

ಶಾಲೆಯಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಮೊಟ್ಟಮೊದಲ ಬಾರಿಗೆ ಪರ್ವತಾರೋಹಣದಲ್ಲಿ ತರಬೇತಿ ಪಡೆದೆ. ನಂತರ ಎವರೆಸ್ಟ್ ಏರಿದ ಮೊದಲ ಮಹಿಳೆ ಬಚೇಂದ್ರೀಪಾಲ್ ಅವರೊಂದಿಗೆ ಭೂತಾನ್‌ನಲ್ಲಿ ಸ್ನೋ ಮ್ಯಾನ್ ಟ್ರ್ಯಾಕ್‌ನಲ್ಲಿ ಭಾಗವಹಿಸಿದೆ. ನಮ್ಮ ಜಿಲ್ಲಾಧಿಕಾರಿ ನನ್ನ ಆಸಕ್ತಿಯನ್ನು ಗಮನಿಸಿ ಪ್ರೋತ್ಸಾಹಿಸಿದರು.

ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಪರ್ವತಗಳನ್ನು ಏರುತ್ತಿದ್ದೆ ಎಂದು ಹೇಳುವ ನೈನಾ ಸಿಂಗ್, ಕಳೆದ ವರ್ಷ ಜೂನ್‌ನಲ್ಲಿ ಎವರೆಸ್ಟ್ ಏರಿದ್ದರು. ಎರಡು ವರ್ಷಗಳ ಹಿಂದೆ ಎವರೆಸ್ಟ್ ಏರುವ ಪ್ರಯತ್ನ ಆರ್ಥಿಕ ಸಂಕಷ್ಟದಿಂದ ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಜೂನ್ ನಲ್ಲಿ ನೈನಾ ಅವರ ಗುರಿ ಈಡೇರಿತ್ತು. ಆದರೆ ಆ ಸಾಹಸ ಆಕೆಯ ಪ್ರಾಣಕ್ಕೇ ಕುತ್ತು ತಂದಿತ್ತು.

ಎವರೆಸ್ಟ್ ಹತ್ತಿದ ಬಗ್ಗೆ ನೈನಾ ಸಿಂಗ್ ಹೇಳಿದ್ದು: 'ಗುರಿ ತಲುಪಿದ ನಂತರ ತುಂಬಾ ಸುಸ್ತಾಗಿದ್ದೆ. ಒಂದೇ ಒಂದು ಹೆಜ್ಜೆ ಇಡಲು ಸಾಧ್ಯವಾಗದೇ ಅಲ್ಲಿಯೇ ಕುಸಿದು ಬಿದ್ದೆ. ಆಮೇಲೆ ಏನಾಯಿತೋ ಗೊತ್ತಿಲ್ಲ. ಜಗದಲ್‌ಪುರ ಕಲೆಕ್ಟರ್ ರಜತ್ ಬನ್ಸಾಲ್ ನೀಡಿದ ಮಾಹಿತಿಯಿಂದ ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ರಕ್ಷಣಾ ಕಾರ್ಯಗಳನ್ನು ಆರಂಭಿಸಲಾಗಿತ್ತು. ಹವಾಮಾನವನ್ನು ಚೆನ್ನಾಗಿ ಬಲ್ಲ ಶೆರ್ಪಾಗಳ ಸೂಚನೆಯಿಂದ ನಾನು ಸಂಜೆ ಶಿಬಿರವನ್ನು ತಲುಪಲು ಸಾಧ್ಯವಾಯಿತು. ಆಗ ನನ್ನ ಅಮ್ಮನಿಗೆ ತುಂಬಾ ಆತಂಕವಾಗಿತ್ತು. ಆದರೆ ‘ಬಸ್ತರ್‌ನ ಮುದ್ದು ಮಗು ನೀನು ನಮ್ಮ ಛತ್ತೀಸ್‌ಗಢದ ಹೆಮ್ಮೆ’ ಎಂದು ಮುಖ್ಯಮಂತ್ರಿಗಳು ನನ್ನನ್ನು ಹೊಗಳಿದಾಗ ತುಂಬಾ ಸಂತೋಷವಾಗಿತ್ತು.

32ರ ಹರೆಯದ ನೈನಾಸಿಂಗ್ ಅವರು ಈ ವರ್ಷ 'ಟೆನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ' ಮತ್ತು ರೂ.15 ಲಕ್ಷ ನಗದು ಬಹುಮಾನ ಪಡೆದಿದ್ದಾರೆ.

ಇದನ್ನೂ ಓದಿ: ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ 7 ವರ್ಷದ ಬಾಲಕಿ

ABOUT THE AUTHOR

...view details