ಕರ್ನಾಟಕ

karnataka

15ರ ಬಾಲಕಿ ಮೇಲೆ ಗ್ಯಾಂಗ್​ರೇಪ್​, ಸಿಗರೇಟ್​ನಿಂದ ಎದೆ ಸುಟ್ಟು, ಕೊಲೆ ; ಮರಕ್ಕೆ ಮೃತದೇಹ ನೇಣು

By

Published : Sep 28, 2021, 5:10 PM IST

ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಬಾಲಕಿ ಮೃತದೇಹ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನ ಪೊಲೀಸರು ನೀಡಿದ್ದಾರೆ..

mp crime news
mp crime news

ಸಿಧಿ (ಮಧ್ಯಪ್ರದೇಶ) :15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ನಾಲ್ವರು ಕಾಮುಕರು, ಆಕೆಯ ಎದೆ ಭಾಗಕ್ಕೆ ಸಿಗರೇಟ್​ನಿಂದ ಸುಟ್ಟು, ತದ ನಂತರ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಸಿಧಿಯಲ್ಲಿ ನಡೆದಿದೆ.

ಸಿಧಿಯ ಬಹನಿ ಚೌಕಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಿರಿಯ ಸಹೋದರನನ್ನ ಶಾಲೆಗೆ ಬಿಡಲು ತೆರಳಿದ್ದ ಸಹೋದರಿ ಮನೆಗೆ ಹಿಂತಿರುಗದ ಕಾರಣ, ಪೋಷಕರು ಹುಡುಕಾಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಹತ್ತಿರದ ಕಾಡಿನಲ್ಲಿ ಆಕೆಯ ಮೃತದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನಾಲ್ವರು ಆರೋಪಿಗಳು ಸೇರಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ತದ ನಂತರ ಆಕೆಯ ಎದೆಯ ಭಾಗಕ್ಕೆ ಸಿಗರೇಟ್​ನಿಂದ ಸುಟ್ಟಿದ್ದಾರೆ. ಇದಾದ ಬಳಿಕ ಚಿತ್ರಹಿಂಸೆ ನೀಡಿ, ಕೊಲೆ ಮಾಡಿದ್ದು, ಮೃತದೇಹ ಮರಕ್ಕೆ ನೇತು ಹಾಕಿ ಪರಾರಿಯಾಗಿದ್ದಾರೆ.

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದ ಕಾಮುಕರು..

ಘಟನೆಯ ಸಂಪೂರ್ಣ ವಿವರ

15 ವರ್ಷದ ಬಾಲಕಿ, ತನ್ನ ಕಿರಿಯ ಸಹೋದರನನ್ನ ಶಾಲೆಗೆ ಬಿಡಲು ಬೆಳಗ್ಗೆ ತೆರಳಿದ್ದಳು. ಶಾಲೆಯಿಂದ ವಾಪಸ್​ ಹಿಂದಿರುಗುತ್ತಿದ್ದ ವೇಳೆ ಹಳ್ಳಿಯ ನಾಲ್ವರು ಆಕೆಗೆ ಕಿರುಕುಳ ನೀಡಲು ಶುರು ಮಾಡಿದ್ದಾರೆ.

ಈ ವೇಳೆ ಬಲವಂತವಾಗಿ ಬಾಲಕಿಯನ್ನ ಬೈಕ್​​ನಲ್ಲಿ ಕರೆದುಕೊಂಡು ಕಾಡಿಗೆ ತೆರಳಿ, ಅಲ್ಲಿ ಅತ್ಯಾಚಾರವೆಸಗಿದ್ದಾರೆ. ಇದರ ಬೆನ್ನಲ್ಲೇ ವಿಧ್ವಂಸಕ ಕೃತ್ಯವೆಸಗಿ, ಆಕೆಯ ಕೊಲೆ ಮಾಡಿದ್ದು, ಮೃತದೇಹವನ್ನ ಮರಕ್ಕೆ ನೇತು ಹಾಕಿದ್ದಾರೆ.

ಇದನ್ನೂ ಓದಿರಿ:ರಾಣಿ, ಮರಿಯಪ್ಪನ್ ಸೇರಿ 5 ಒಲಿಂಪಿಕ್ಸ್​ ಸ್ಟಾರ್​ಗಳಿಗೆ ಪ್ರಮೋಷನ್ ನೀಡಿದ SAI

ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಬಾಲಕಿ ಮೃತದೇಹ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನ ಪೊಲೀಸರು ನೀಡಿದ್ದಾರೆ.

ABOUT THE AUTHOR

...view details