ಕರ್ನಾಟಕ

karnataka

'ಸ್ತ್ರೀಯರ ಒಳ ಉಡುಪಿನ ಮೇಲೆ ಗುಪ್ತಾಂಗ ಸ್ಪರ್ಶಿಸುವುದೂ ಸಹ ಅತ್ಯಾಚಾರಕ್ಕೆ ಸಮ'

By

Published : Mar 17, 2022, 8:19 PM IST

Updated : Mar 17, 2022, 8:48 PM IST

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಯೊಬ್ಬನ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮೇಘಾಲಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸ್ತ್ರೀಯರ ಒಳ ಉಡುಪಿನ ಮೇಲೆ ಪುರುಷರು ಗುಪ್ತಾಂಗ ಸ್ಪರ್ಶಿಸುವುದೂ ಸಹ ಅತ್ಯಾಚಾರಕ್ಕೆ ಸಮ ಎಂದು ತೀರ್ಪು ನೀಡಿದೆ.

Sexual assault without undergarment removal will still amount to rape: Meghalaya HC
'ಸ್ತ್ರೀಯರ ಒಳ ಉಡುಪಿನ ಮೇಲೆ ಪುರುಷರು ಜನನಾಂಗವನ್ನು ಸ್ಪರ್ಶಿಸುವುದೂ ಅತ್ಯಾಚಾರಕ್ಕೆ ಸಮ'

ಶಿಲ್ಲಾಂಗ್(ಮೇಘಾಲಯ): ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮೇಘಾಲಯ ಹೈಕೋರ್ಟ್ ಹೊಸ ವ್ಯಾಖ್ಯಾನವನ್ನು ನೀಡಿದೆ. ಮಹಿಳೆಯರು ಧರಿಸಿರುವ ಒಳ ಉಡುಪಿನ ಮೇಲೆ ಪುರುಷರು ತಮ್ಮ ಜನನಾಂಗವನ್ನು ಸ್ಪರ್ಶಿಸುವುದೂ ಕೂಡಾ ಅತ್ಯಾಚಾರಕ್ಕೆ ಸಮ ಎಂದು ತೀರ್ಪು ನೀಡಿದೆ. ಅಂತಹ ವ್ಯಕ್ತಿಗೆ ಸಾಮಾನ್ಯ ಅತ್ಯಾಚಾರದ ಅಡಿಯಲ್ಲಿ ಬರುವ ಸೆಕ್ಷನ್​ಗಳ ಆಧಾರದಲ್ಲೇ ಶಿಕ್ಷೆ ನೀಡಲಾಗುತ್ತದೆ ಎಂದು ಗುರುವಾರ ಹೈಕೋರ್ಟ್ ಹೇಳಿದೆ.

ದಂಡ ಸಂಹಿತೆಯ ಸೆಕ್ಷನ್ 375(ಬಿ) ಮಹಿಳೆಯರ ಖಾಸಗಿ ಭಾಗದಲ್ಲಿ ಯಾವುದೇ ವಸ್ತುವನ್ನು ಸೇರಿಸುವುದು ಅತ್ಯಾಚಾರಕ್ಕೆ ಸಮಾನವಾಗಿರುತ್ತದೆ ಎಂದು ಉಲ್ಲೇಖಿಸುತ್ತದೆ. ಸಂತ್ರಸ್ತೆ ಧರಿಸಿದ ಒಳ ಉಡುಪುಗಳ ಮೇಲೆ ಜನನಾಂಗವನ್ನು ಸ್ಪರ್ಶಿಸುವುದೂ ಕೂಡಾ ಅತ್ಯಾಚಾರಕ್ಕೆ ಸಮ ಎಂದು 375 (ಬಿ) ಸೆಕ್ಷನ್ ಹೇಳುತ್ತದೆ ಎಂದು ಮೇಘಾಲಯ ಹೈಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ನೇತೃತ್ವದ ಪೀಠ ಉಲ್ಲೇಖಿಸಿದೆ.

2006ರ ಪ್ರಕರಣವೊಂದರ ವಿಚಾರಣೆ ನಡೆಸಿದ ಕೋರ್ಟ್ ಈ ರೀತಿಯಾಗಿ ತೀರ್ಪು ನೀಡಿದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ತಪ್ಪಿತಸ್ಥನೆಂದು ವಿಚಾರಣಾ ನ್ಯಾಯಾಲಯವು ತೀರ್ಪು ನೀಡಿತ್ತು. ಇದರ ಜೊತೆಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ರೂ. 25,000 ದಂಡವನ್ನು ವಿಧಿಸಲಾಗಿದೆ. ದಂಡವನ್ನು ಪಾವತಿಸಲು ಅಪರಾಧಿ ವಿಫಲವಾದರೆ ಹೆಚ್ಚುವರಿ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶ ಹೊರಡಿಸಿತ್ತು.

ಇದನ್ನೂ ಓದಿ:ನಟ ದಿಲೀಪ್​​​​ ಮೇಲಿನ ಕೊಲೆ ಸಂಚು ಪ್ರಕರಣದ ತನಿಖೆಗೆ ತಡೆ ನೀಡಲು ಕೇರಳ ಹೈಕೋರ್ಟ್​ ನಕಾರ

ಈ ಆದೇಶದ ವಿರುದ್ಧ ತಪ್ಪಿತಸ್ಥನು ಮೇಲ್ಮನವಿ ಸಲ್ಲಿಸಿದ್ದ. ಆತ ಅನಕ್ಷರಸ್ಥನಾಗಿದ್ದು, ಅವನ ಸರಾಸರಿ ಬುದ್ಧಿಶಕ್ತಿಯನ್ನು ಪರಿಗಣಿಸಿ, ತಪ್ಪೊಪ್ಪಿಗೆಯನ್ನು ಪರಿಗಣಿಸಬೇಕು ಎಂದು ಆತನ ಪರ ವಕೀಲರು ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದರು.

ಪ್ರಕರಣದ ವಿವರ ಹೀಗಿದೆ..:ಮೊದಲೇ ಹೇಳಿದಂತೆ 2006ರಲ್ಲಿ ನಡೆದ ಅತ್ಯಾಚಾರ ಪ್ರಕರಣ ಇದಾಗಿದ್ದು, ಪ್ರಕರಣದ ನಂತರ ಬಾಲಕಿ 'ನನ್ನನ್ನು ಎಳೆದೊಯ್ದ ಆರೋಪಿ ಪ್ಯಾಂಟ್​ ಬಿಚ್ಚಿ, ನನ್ನ ಒಳ ಉಡುಪುಗಳನ್ನು ಬಿಚ್ಚಿ ಅತ್ಯಾಚಾರ ಎಸಗಿದ' ಎಂದು ಹೇಳಿಕೆ ನೀಡಿದ್ದಳು. ಇದಾದ ಕೆಲವು ದಿನಗಳ ನಂತರ 'ಅತ್ಯಾಚಾರ ವೇಳೆ ಆರೋಪಿ ನನ್ನ ಒಳ ಉಡುಪುಗಳನ್ನು ಬಿಚ್ಚಿರಲಿಲ್ಲ' ಎಂದು ಹೇಳಿಕೆ ಬದಲಾಯಿಸಿದ್ದಳು.

ಆಕೆಯನ್ನು ಮತ್ತೆ ಪ್ರಶ್ನಿಸಿದಾಗ ಅತ್ಯಾಚಾರದ ವೇಳೆ ಯಾವುದೇ ಸೂಕ್ಷ್ಮ ಲೈಂಗಿಕತೆ ನಡೆದಿರಲಿಲ್ಲ. ಈ ವೇಳೆ ಸಂತ್ರಸ್ತೆ ತನ್ನ ಒಳ ಉಡುಪುಗಳನ್ನು ಧರಿಸಿದ್ದಳು ಮತ್ತು ಆರೋಪಿಯು ತನ್ನ ಜನನಾಂಗವನ್ನು ಸ್ಪರ್ಶಿಸಿದ್ದಾನೆ. ಇದು ಸಂತ್ರಸ್ತೆಗೆ ಗಂಭೀರ ತೊಂದರೆ ಮಾಡಲಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ಈ ಆದೇಶವನ್ನು ಈಗ ಮೇಘಾಲಯ ಹೈಕೋರ್ಟ್ ಎತ್ತಿಹಿಡಿದಿದ್ದು, ಅಪರಾಧಿಯ ಅರ್ಜಿಯನ್ನು ವಜಾಗೊಳಿಸಿದೆ.

Last Updated : Mar 17, 2022, 8:48 PM IST

ABOUT THE AUTHOR

...view details