ETV Bharat / bharat

ನಟ ದಿಲೀಪ್​​​​ ಮೇಲಿನ ಕೊಲೆ ಸಂಚು ಪ್ರಕರಣದ ತನಿಖೆಗೆ ತಡೆ ನೀಡಲು ಕೇರಳ ಹೈಕೋರ್ಟ್​ ನಕಾರ

author img

By

Published : Mar 17, 2022, 2:16 PM IST

2017 ರ ನಟಿಯ ಮೇಲಿನ ಹಲ್ಲೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಕೊಲೆ ಮತ್ತು ಬೆದರಿಕೆ ಹಾಕಲು ಸಂಚು ರೂಪಿಸಿದ ಆರೋಪದ ಪ್ರಕರಣದಲ್ಲಿ ನಟ ದಿಲೀಪ್ ಮತ್ತು ಇತರರ ವಿರುದ್ಧದ ಅಪರಾಧ ವಿಭಾಗದ ತನಿಖೆಗೆ ತಡೆ ನೀಡುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

actor Dileep case  Kerala High Court on Dileep  Will not stay probe in murder conspiracy case says Kerala court  Crime Branch probe against actor Dileep  ಕೊಲೆ ಸಂಚು ಪ್ರಕರಣದ ತನಿಖೆಗೆ ತಡೆ ನೀಡುವುದಿಲ್ಲ ಎಂದ ಕೇರಳ ಹೈಕೋರ್ಟ್​ ದಿಲೀಪ್‌ಗೆ ಕೇರಳ ಹೈಕೋರ್ಟ್ ಉತ್ತರ  ನಟ ದಿಲೀಪ್​ ಪ್ರಕರಣ  ಕ್ರೈಂ ಬ್ರ್ಯಾಂಚ್​ ತನಿಖೆ ವಿರುದ್ಧ ನಟ ದಿಲೀಪ್​ ಅರ್ಜಿ
ದಿಲೀಪ್‌ಗೆ ಕೇರಳ ಹೈಕೋರ್ಟ್ ಉತ್ತರ

ಕೊಚ್ಚಿ: 2017ರಲ್ಲಿ ನಡದ ನಟಿಯ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ತಡೆ ನೀಡುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ನಟ ದಿಲೀಪ್​ ಹಾಗೂ ಇತರರ ಮೇಲೆ ಕೊಲೆ ಆರೋಪ ಹೊರೆಸಲಾಗಿತ್ತು. ಈ ಸಂಬಂದ ನಡೆಯುತ್ತಿರುವ ತನಿಖೆಗೆ ತಡೆ ನೀಡುವಂತೆ ನಟ ದಿಲೀಪ್​​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್​, ನಟ ದಿಲೀಪ್ ಮತ್ತು ಇತರರ ವಿರುದ್ಧದ ಅಪರಾಧ ವಿಭಾಗದ ತನಿಖೆಗೆ ತಡೆ ನೀಡುವುದಿಲ್ಲ ಎಂದು ಹೇಳಿದೆ.

ನಟ ಮತ್ತು ಇತರ ಆರೋಪಿಗಳ ಪರ ಹಾಜರಾದ ವಕೀಲರು ಪ್ರಕರಣವನ್ನು ರದ್ದುಪಡಿಸಲು ಅಥವಾ ಸಿಬಿಐಗೆ ವರ್ಗಾಯಿಸಲು ಮನವಿ ಮಾಡಿದರು. ಆದ್ರೆ ‘ತನಿಖೆಗೆ ತಡೆ ನೀಡಲಾಗುವುದಿಲ್ಲ’ ಎಂದು ನ್ಯಾಯಮೂರ್ತಿ ಕೆ. ಹರಿಪಾಲ್ ಹೇಳಿದರು.

ಓದಿ: ಪಂಜಾಬ್ ಇತಿಹಾಸದಲ್ಲೇ ಯಾರೂ ತೆಗೆದುಕೊಂಡಿರದ ನಿರ್ಧಾರ ತೆಗೆದುಕೊಳ್ಳುತ್ತೇನೆ: ಪಂಜಾಬ್ ಸಿಎಂ ಟ್ವೀಟ್

ಹಿರಿಯ ವಕೀಲ ಬಿ ರಾಮನ್ ಪಿಳ್ಳೈ ಮತ್ತು ವಕೀಲರಾದ ಫಿಲಿಪ್ ಟಿ ವರ್ಗೀಸ್ ಮತ್ತು ಥಾಮಸ್ ಟಿ ವರ್ಗೀಸ್, ನಟ ಮತ್ತು ಇತರ ಆರೋಪಿಗಳ ಪರವಾಗಿ ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುದೀರ್ಘ ವಿಚಾರಣೆ ಅಗತ್ಯವಿದೆ. ಆದ್ದರಿಂದ ಈ ಪ್ರಕರಣವನ್ನು ನಂತರ ತೆಗೆದುಕೊಳ್ಳಬಹುದು ಎಂದು ನ್ಯಾಯಾಲಯವು ಹೇಳಿತು. ಈ ಸಂದರ್ಭದಲ್ಲಿ ವಕೀಲರು ಪ್ರಕರಣದ ತನಿಖೆಗೆ ತಡೆ ನೀಡುವಂತೆ ನ್ಯಾಯಾಲಯವನ್ನು ಕೋರಿದರು.

ನ್ಯಾಯಾಲಯವು ತನಿಖೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಲು ನಿರಾಕರಿಸಿದ್ದರಿಂದ, ವಿಚಾರಣೆ ದಿನಾಂಕ ನಿಗದಿ ಮಾಡುವಂತೆ ಕೋರ್ಟ್​​ಗೆ ಮನವಿ ಮಾಡಿದರು. ನಟ ದಿಲೀಪ್​ ಪರ ವಕೀಲರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಅಂತಿಮ ವಾದಗಳಿಗೆ ಮಾರ್ಚ್ 28 ರಂದು ದಿನಾಂಕ ನೀಗದಿ ಮಾಡಿ ಆದೇಶಿಸಿತು.

ಓದಿ: ಎಂ.ಎಂ.ಕಲಬುರ್ಗಿ ಹತ್ಯೆ ಕೇಸ್​: ಐವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

ಫೆಬ್ರವರಿ 17, 2017 ರ ರಾತ್ರಿ ಚಿತ್ರೀಕರಣ ಮುಗಿಸಿ ಮನೆಗೆ ತೆರಳುತ್ತಿದ್ದ ನಟಿ ಮೇಲೆ ನಟ ದಿಲೀಪ್​ ಅವರ ಗ್ಯಾಂಗ್​ ಅಪಹರಿಸಿ ಕಾರಿನೊಳಗೆ ಎರಡು ಗಂಟೆಗಳ ಲೈಂಗಿಕ ಕಿರುಕುಳ ನೀಡಿತ್ತು. ಅಷ್ಟೇ ಅಲ್ಲ, ಕೃತ್ಯದ ದೃಶ್ಯ ಚಿತ್ರೀಕರಿಸಿ ಬ್ಲಾಕ್‌ ಮೇಲ್‌ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ದಿಲೀಪ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು. 2017ರ ಪ್ರಕರಣದಲ್ಲಿ 10 ಆರೋಪಿಗಳಿದ್ದು, ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ನಂತರ ದಿಲೀಪ್ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.