ಕರ್ನಾಟಕ

karnataka

ಉತ್ತರ ಪ್ರದೇಶದಲ್ಲಿ ಯಾವ ಪಾರ್ಟಿ ಎಷ್ಟೆಷ್ಟು ಠೇವಣಿ ಕಳೆದುಕೊಂಡಿವೆ: ಇಲ್ಲಿದೆ ಮಾಹಿತಿ

By

Published : Mar 13, 2022, 5:56 PM IST

ಉತ್ತರ ಪ್ರದೇಶ ವಿಧಾನಸಭೆಯ 399 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇದರಲ್ಲಿ 387 ಅಭ್ಯರ್ಥಿಗಳು (97%) ಠೇವಣಿ ಕಳೆದುಕೊಂಡಿದ್ದಾರೆ. ಬಿಎಸ್​ಪಿ ವಿಚಾರಕ್ಕೆ ಬಂದರೆ, ಕೇವಲ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಒಟ್ಟು ಅಭ್ಯರ್ಥಿಗಳಲ್ಲಿ 72% ರಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಯಾವ ಪಾರ್ಟಿ ಎಷ್ಟೆಷ್ಟು ಠೇವಣಿ ಕಳೆದುಕೊಂಡಿವೆ: ಇಲ್ಲಿದೆ ಮಾಹಿತಿ!
ಉತ್ತರ ಪ್ರದೇಶದಲ್ಲಿ ಯಾವ ಪಾರ್ಟಿ ಎಷ್ಟೆಷ್ಟು ಠೇವಣಿ ಕಳೆದುಕೊಂಡಿವೆ: ಇಲ್ಲಿದೆ ಮಾಹಿತಿ!

ಲಖನೌ: 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಪಡೆದಿರುವ ಭಾರಿ ಬಹುಮತವು ಕಾಂಗ್ರೆಸ್ ಹಾಗೂ ಬಿಎಸ್​ಪಿಯನ್ನು ಮೂಲೆಗುಂಪು ಮಾಡಿದೆ. ಕಾಂಗ್ರೆಸ್ ಮತ್ತು ಬಿಎಸ್‌ಪಿ ಅಭ್ಯರ್ಥಿಗಳ ದಾಖಲೆಯ ಠೇವಣಿಗಳು ಅಭ್ಯರ್ಥಿಗಳನ್ನೇ ಮುಜುಗರಕ್ಕೀಡು ಮಾಡಿವೆ.

ಉತ್ತರ ಪ್ರದೇಶ ವಿಧಾನಸಭೆಯ 399 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇದರಲ್ಲಿ 387 ಅಭ್ಯರ್ಥಿಗಳು (97%) ಠೇವಣಿ ಕಳೆದುಕೊಂಡಿದ್ದಾರೆ. ಇದರ ನಡುವೆ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಒಟ್ಟು ಮತಗಳ 2.4% ಅನ್ನು ಮಾತ್ರ ಪಡೆದಿದೆ. ಆದರೆ, ಯಾವುದೇ ಸ್ಥಾನದಲ್ಲಿ ಠೇವಣಿ ಉಳಿಸಿಕೊಳ್ಳಲು ಅಭ್ಯರ್ಥಿಯು ಒಟ್ಟು ಮತಗಳ 16.66% ಗಳಿಸಬೇಕಾಗಿದೆ.

ಇದನ್ನೂ ಓದಿ:ಪಂಜಾಬ್​ನಲ್ಲಿ 'ಆಪ್'​ ಭರ್ಜರಿ ರೋಡ್​ ಶೋ.. 'ಸಿಎಂ' ಮಾನ್​ ಅಧಿಕಾರ ಸ್ವೀಕಾರಕ್ಕೆ ಮುಹೂರ್ತ

ರಾಜ್ಯದಲ್ಲಿ ಕಾಂಗ್ರೆಸ್‌ನ ಸಾಧನೆ ಕೇವಲ ಎರಡು ಸ್ಥಾನಕ್ಕೆ ಕುಸಿದಿದ್ದರಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಈವರೆಗೆ ಇಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿರಲಿಲ್ಲ. ಇನ್ನು ಬಿಎಸ್​ಪಿ ವಿಚಾರಕ್ಕೆ ಬಂದರೆ, ಕೇವಲ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಒಟ್ಟು ಅಭ್ಯರ್ಥಿಗಳಲ್ಲಿ 72% ರಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಪಕ್ಷವು ಎಲ್ಲಾ 403 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಬಿಜೆಪಿ ವಿಷಯಕ್ಕೆ ಬಂದರೆ ಪಕ್ಷವು 376 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅದರಲ್ಲಿ ಕೇವಲ ಮೂವರು ಅಭ್ಯರ್ಥಿಗಳು ತಮ್ಮ ಠೇವಣಿಗಳನ್ನು ಕಳೆದುಕೊಂಡಿದ್ದಾರೆ. ಸಮಾಜವಾದಿ ಪಕ್ಷವು ಚುನಾವಣೆಯಲ್ಲಿ 347 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅವರಲ್ಲಿ ಆರು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಎಸ್‌ಪಿಯ ಮಿತ್ರ ಪಕ್ಷವಾದ ಸುಹಲ್‌ದೇವ್ ಭಾರತೀಯ ಸಮಾಜ ಪಕ್ಷ (ಸಬ್‌ಎಸ್‌ಪಿ) ಮತ್ತು ಅಪ್ನಾ ದಳ (ಕಾಮೆರವಾಡಿ) ಒಟ್ಟು 25 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅವರಲ್ಲಿ 8 ಮಂದಿ ಠೇವಣಿ ಕಳೆದುಕೊಂಡಿದ್ದಾರೆ.

ABOUT THE AUTHOR

...view details