ETV Bharat / bharat

ಪಂಜಾಬ್​ನಲ್ಲಿ 'ಆಪ್'​ ಭರ್ಜರಿ ರೋಡ್​ ಶೋ.. 'ಸಿಎಂ' ಮಾನ್​ ಅಧಿಕಾರ ಸ್ವೀಕಾರಕ್ಕೆ ಮುಹೂರ್ತ

author img

By

Published : Mar 13, 2022, 3:51 PM IST

ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್, ಪಂಜಾಬ್​ ನಿಯೋಜಿತ ಮುಖ್ಯಮಂತ್ರಿ ಭಗವಂತ್​ ಮಾನ್ ಭಾನುವಾರ ಗೋಲ್ಡನ್​ ಟೆಂಪಲ್​, ಜಲಿಯನ್​ ವಾಲಾಭಾಗ್​ಗೆ​ ಭೇಟಿ ನೀಡಿದ ಬಳಿಕ ಅಮೃತಸರ್​​ ನಲ್ಲಿ ಭರ್ಜರಿ ರೋಡ್​ ಶೋ ನಡೆಸಿದರು.

Mann
Mann

ಚಂಡೀಗಢ್​ (ಪಂಜಾಬ್​): ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆಮ್​ ಆದ್ಮಿ ಪಕ್ಷದಿಂದ ಭಗವಂತ್ ಮಾನ್​​ ಬುಧವಾರ (ಮಾ.16) ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮಾನ್​ ಸಚಿವ ಸಂಪುಟದಲ್ಲಿ 16 ಜನರಿಗೆ ಸ್ಥಾನ ಸಿಗಲಿದ್ದು, ಸಚಿವರು ಮುಂದಿನ ದಿನಗಳಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಪಂಜಾಬ್​ ವಿಧಾನಸಭೆಯ 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಆಪ್​ ಗೆದ್ದು ಅಧಿಕಾರಕ್ಕೆ ಬಂದಿದೆ. ಬುಧವಾರ ನಿಯೋಜಿತ ಮುಖ್ಯಮಂತ್ರಿ ಭಗವಂತ್​ ಮಾನ್​ ಏಕಾಂಗಿಯಾಗಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಭಗತ್​ ಸಿಂಗ್ ಅವರ ಹುಟ್ಟೂರಾದ ಖತ್ಕರ್​ಕಲನ್ ಗ್ರಾಮದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಸಚಿವ ಸಂಪುಟ ಸಹ ರಚನೆಯಾಗಲಿದ್ದು, 16 ಮಂದಿ ಶಾಸಕರು ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ. ತಮ್ಮ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭಕ್ಕೆ ಆಪ್​ನ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರಿಗೆ ಖುದ್ದು ಭಗವಂತ್ ಮಾನ್​​ ಆಹ್ವಾನ ನೀಡಲಿದ್ದಾರೆ. ಸಚಿವ ಸಂಪುಟದ ಆಯ್ಕೆ ಬಗ್ಗೆ ಮಾನ್​ ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ.

ಭರ್ಜರಿ ರೋಡ್​ ಶೋ: ಪಂಜಾಬ್​ನಲ್ಲಿ ಪ್ರಚಂಡ ಬಹುಮತ ಬಂದ ಹಿನ್ನೆಲೆಯಲ್ಲಿ ರವಿವಾರ ಆಪ್​ ನಾಯಕರು ವಿಜಯೋತ್ಸವದ ರೋಡ್​​ ಶೋ ನಡೆಸಿದರು. ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಹಾಗೂ ಪಂಜಾಬ್​ನ ನಿಯೋಜಿತ ಮುಖ್ಯಮಂತ್ರಿ ಭಗವಂತ್​ ಮನ್ ಭರ್ಜರಿ ರೋಡ್​ ಶೋನಲ್ಲಿ ಭಾಗವಹಿಸಿದ್ದರು.

ಇದಕ್ಕೂ ಮುನ್ನ ಅಮೃತಸರ್​ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅರವಿಂದ್​ ಕೇಜ್ರಿವಾಲ್ ಮತ್ತು ಮನೀಶ್​ ಸಿಸೋಡಿಯಾ ಅವರನ್ನು ಭಗವಂತ್​ ಮನ್ ಬರಮಾಡಿಕೊಂಡರು. ಬಳಿಕ ಆಪ್​ ನಾಯಕರು ಪ್ರಸಿದ್ಧ ಗೋಲ್ಡನ್​ ಟೆಂಪಲ್​ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ನಂತರ ಜಲಿಯನ್​ ವಾಲಾಭಾಗ್​ ಸ್ಮಾರಕ ಸ್ಥಳಕ್ಕೆ ತೆರಳಿ ಅಲ್ಲಿ ಗೌರವ ಸಮರ್ಪಿಸಿದರು. ಅಲ್ಲದೇ, ದುರ್ಗಿಯಾನಾ ದೇವಸ್ಥಾನಕ್ಕೂ ಆಪ್​ ನಾಯಕರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಅಮೃತಸರ್​ದಲ್ಲಿ ತೆರೆದ ವಾಹನದಲ್ಲಿ ಕೇಜ್ರಿವಾಲ್, ಭಗವಂತ್​ ಮಾನ್ ರೋಡ್​ ಶೋ ನಡೆಸಿ, ಪಂಜಾಬ್​ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ: ಭಗತ್​ ಸಿಂಗ್​ ಹುಟ್ಟೂರಿನಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸುವೆ: ಆಪ್‌ನ ಭಗವಂತ್​ ಮನ್ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.