ಕರ್ನಾಟಕ

karnataka

ಚಲಿಸುತ್ತಿರುವ ಆಟೋದಲ್ಲಿ ಅತ್ಯಾಚಾರ ಯತ್ನ; ವಾಹನದಿಂದ ಜಿಗಿದ ಮಹಿಳಾ ನರ್ಸ್‌

By

Published : Dec 15, 2022, 5:16 PM IST

ಮೊಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಯುವತಿಯ ಮೇಲೆ ಅತ್ಯಾಚಾರ ಯತ್ನ ನಡೆದಿದೆ.

Mohali
ಮೊಹಾಲಿ

ಮೊಹಾಲಿ(ಪಂಜಾಬ್​):ಚಲಿಸುತ್ತಿದ್ದ ಆಟೋದಲ್ಲಿಯೇ ಯುವತಿಯ ಮೇಲೆ ಚಾಲಕ ಹಾಗು ಆತನ ಸಹಚರ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮೊಹಾಲಿಯ ಖಾರಾರ್ ರಸ್ತೆಯಲ್ಲಿ ನಡೆದಿದೆ. ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 13 ಮತ್ತು 14 ರ ರಾತ್ರಿ ಮೊಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಯುವತಿ ಕೆಲಸ ಮುಗಿಸಿ ಮನೆಗೆ ಹಿಂತಿರುಗಲು ಆಟೋ ಹತ್ತಿದ್ದಳು. ಸ್ವಲ್ಪ ಸಮಯದ ನಂತರ ಚಾಲಕ ಮತ್ತು ಆತನ ಸಹಚರ ಆಕೆಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಯುವತಿ ಆಟೋದಲ್ಲೇ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಅದು ಸಾಧ್ಯವಾಗದೇ ಇದ್ದಾಗ ಅಸಹಾಯಕಳಾಗಿ ರಾಯತ್ ಬಹರಾ ವಿಶ್ವವಿದ್ಯಾಲಯದ ಸಮೀಪ ವಾಹನದಿಂದ ಜಿಗಿದಿದ್ದಾಳೆ.

ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಯುವತಿಯ ಹೇಳಿಕೆಯ ಮೇರೆಗೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376, 394, 394B, 342, 324 ಮತ್ತು 323, 504 506 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಷ್ಟೇ ಅಲ್ಲ, ಮುಂದಿನ 12 ಗಂಟೆಗಳಲ್ಲಿ ಆರೋಪಿಗಳಿಬ್ಬರನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಬಂಧಿತರನ್ನು ಮೊಹಾಲಿ ಜಿಲ್ಲೆಯ ರೇಡಿಯಾಲ ಗ್ರಾಮದ ನಿವಾಸಿ 24 ವರ್ಷದ ಮಲ್ಕಿತ್ ಸಿಂಗ್ ಬಂಟಿ ಮತ್ತು ಮೊಹಾಲಿ ಗ್ರಾಮದ ನಿವಾಸಿ 29 ವರ್ಷದ ಮನಮೋಹನ್ ಸಿಂಗ್ ಮಣಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಶ್ರದ್ಧಾ ವಾಲ್ಕರ್ ಮೂಳೆಗಳ ಡಿಎನ್​ಎ ಟೆಸ್ಟ್‌: ತಂದೆಯ ಮಾದರಿಗಳೊಂದಿಗೆ ಹೋಲಿಕೆ

ABOUT THE AUTHOR

...view details