ಕರ್ನಾಟಕ

karnataka

ವರದಕ್ಷಿಣೆ ನೀಡುವ 75 ಲಕ್ಷ ರೂ.ದಲ್ಲಿ 'Girl's Hostel'​ ಕಟ್ಟಿಸಿ... ವಧುವಿನ ಡಿಮ್ಯಾಂಡ್​ಗೊಂದು ಹ್ಯಾಟ್ಸಪ್​!

By

Published : Nov 25, 2021, 9:53 PM IST

Updated : Nov 27, 2021, 11:54 AM IST

Rajasthan Bride Asks Girls hostel instead of Dowry
Rajasthan Bride Asks Girls hostel instead of Dowry

ಮಗಳ ಮದುವೆ ಸಂದರ್ಭದಲ್ಲಿ ವರದಕ್ಷಿಣೆ ರೂಪದಲ್ಲಿ ಲಕ್ಷ ಲಕ್ಷ ಹಣ ನೀಡುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೋರ್ವ ವಧು ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜೈಪುರ(ರಾಜಸ್ಥಾನ):ಮದುವೆ ಮಾಡುವ ಸಂದರ್ಭದಲ್ಲಿ ವರನ ಕಡೆಯವರಿಗೆ ವಧುವಿನ ಕುಟುಂಬಸ್ಥರು ಲಕ್ಷಾಂತರ ರೂಪಾಯಿ ವರದಕ್ಷಿಣೆ ರೂಪದಲ್ಲಿ ನೀಡುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೋರ್ವ ವಧು ತನ್ನ ಗಂಡನಿಗೆ ನೀಡುವ ವರದಕ್ಷಿಣೆ ಹಣದಲ್ಲಿ ವಿದ್ಯಾರ್ಥಿನಿಗಳಿಗೋಸ್ಕರ ಹಾಸ್ಟೆಲ್​ ಕಟ್ಟಿಸುವಂತೆ ಕೇಳಿಕೊಂಡಿದ್ದಾಳೆಂದು ವರದಿಯಾಗಿದೆ.

ಅಂಜಲಿ ಕನ್ವರ್​​

ಬಾರ್ಮರ್​​ ನಗರದ ಕಿಶೋರ್​ ಸಿಂಗ್ ಕಾನೋಡ್​ ಅವರ ಪುತ್ರಿ ಅಂಜಲಿ ಕನ್ವರ್​​ ನವೆಂಬರ್​​ 21ರಂದು ಪ್ರವೀಣ್​ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವರದಿವೊಂದರ ಪ್ರಕಾರ, ಅಂಜಲಿ ಮದುವೆಯಲ್ಲಿ ವರದಕ್ಷಿಣೆಗಾಗಿ ಮೀಸಲಿಟ್ಟಿರುವ ಹಣದ ಬಗ್ಗೆ ತಂದೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಆ ಎಲ್ಲ ಹಣ ಬಾಲಕಿಯರ ಹಾಸ್ಟೆಲ್​ ನಿರ್ಮಾಣ ಮಾಡಲು ಬಳಸುವಂತೆ ತಿಳಿಸಿದ್ದಾರೆ. ಮಗಳ ಆಸೆಯಂತೆ ಅಂಜಲಿ ತಂದೆ ಕಿಶೋರ್​ ಸಿಂಗ್​ ಒಪ್ಪಿಗೆ ಸೂಚಿಸಿ, 75 ಲಕ್ಷ ರೂ. ಕಟ್ಟಡ ನಿರ್ಮಾಣಕ್ಕಾಗಿ ನೀಡಿದ್ದಾರೆ.

ಇದನ್ನೂ ಓದಿ:ವಧು-ವರನಿಗೋಸ್ಕರ ಬೆಳ್ಳಿ ಶೂ,ಬೆಲ್ಟ್​ & ಪರ್ಸ್: ಜೋಧಪುರ ವ್ಯಾಪಾರಿ ಆಭರಣಕ್ಕೆ ಇನ್ನಿಲ್ಲದ ಡಿಮ್ಯಾಂಡ್

ಅಂಜಲಿ ತೆಗೆದುಕೊಂಡಿರುವ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮದುವೆ ಸಮಾರಂಭದ ವೇಳೆ ಅಂಜಲಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಅತಿಥಿಗಳಿಗೂ ತಿಳಿಸಲಾಗಿದೆ. ಈ ನಿರ್ಧಾರಕ್ಕಾಗಿ ಶಹಬ್ಬಾಸ್​​ಗಿರಿ ನೀಡಿದ್ದಾರೆ.

ಕಿಶೋರ್​ ಸಿಂಗ್ ಕಾನೋಡ್

ಲಭ್ಯವಾಗಿರುವ ಮಾಹಿತಿ ಪ್ರಕಾರ, ರಾಜಸ್ಥಾನದ ಎನ್​ಎಚ್​​ 68ನಲ್ಲಿ ಹಾಸ್ಟೆಲ್​ ನಿರ್ಮಾಣಕ್ಕಾಗಿ ಕಾನೋಡ್​​ ಈಗಾಗಲೇ 1 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆಂದು ತಿಳಿದು ಬಂದಿದೆ. ಉಳಿದ ಕಾಮಗಾರಿ ಪೂರ್ಣಗೊಳಿಸಲು 50ರಿಂದ 75 ಲಕ್ಷ ರೂ. ಹೆಚ್ಚುವರಿ ಅಗತ್ಯವಿದ್ದು, ಇದೀಗ ಮಗಳು ಆ ಹಣ ನೀಡಿದ್ದಾರೆ.

Last Updated :Nov 27, 2021, 11:54 AM IST

ABOUT THE AUTHOR

...view details