ಕರ್ನಾಟಕ

karnataka

'ಆ ಮಧ್ಯರಾತ್ರಿ ಇಮ್ರಾನ್ ಖಾನ್ ಫೋನ್‌ ಕರೆಯನ್ನು ಪ್ರಧಾನಿ ಮೋದಿ ನಿರಾಕರಿಸಿದ್ದರು'

By ETV Bharat Karnataka Team

Published : Jan 8, 2024, 2:24 PM IST

2019ರ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವ ರೀತಿಯ ಉದ್ವಿಗ್ನತೆ ಸಂಭವಿಸಿತ್ತು?, ಭಾರತದ ರಾಜತಾಂತ್ರಿಕ ನೀತಿಗಳಿಗೆ ಪಾಕಿಸ್ತಾನ ಹೇಗೆ ಹೆದರುತ್ತಿದೆ?, ಭಯೋತ್ಪಾದನೆಯ ಕುರಿತಾದ ತಮ್ಮ ನೀತಿಗಳನ್ನು ಅವರು ಹೇಗೆ ಬದಲಾಯಿಸಬೇಕಾಯಿತು? ಎಂಬುದರ ಕುರಿತು ಭಾರತದ ಮಾಜಿ ಹೈಕಮಿಷನರ್ ತಮ್ಮ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.

pm modi declined  imran khan post  pulwama incident  ಪ್ರಧಾನಿ ಮೋದಿ  ಇಮ್ರಾನ್ ಖಾನ್  ಪುಲ್ವಾಮಾ ಭಯೋತ್ಪಾದಕ ದಾಳಿ
ಇಮ್ರಾನ್ ಖಾನ್ ಅವರ ಕರೆಯನ್ನು ಪ್ರಧಾನಿ ಮೋದಿ

ನವದೆಹಲಿ:2019ರಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಸೆರೆಹಿಡಿದು ಚಿತ್ರಹಿಂಸೆಗೆ ಒಳಪಡಿಸಿರುವ ವಿಷಯ ಎಲ್ಲಿರಿಗೂ ಗೊತ್ತಿದೆ. ಈ ಬೆಳವಣಿಗೆ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಈ ಕ್ರಮದಲ್ಲಿ ಅಂದಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಪ್ರಯತ್ನಿಸಿದ್ದರು. ಆದರೆ ಅದಕ್ಕೆ ಮೋದಿ ನಿರಾಸಕ್ತಿ ವ್ಯಕ್ತಪಡಿಸಿದ್ದರು. ಪಾಕಿಸ್ತಾನದಲ್ಲಿರುವ ಭಾರತದ ಮಾಜಿ ಹೈಕಮಿಷನರ್ ಅಜಯ್ ಬಿಸಾರಿಯಾ ಅವರು ತಮ್ಮ ಪುಸ್ತಕದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧಗಳ ಕುರಿತು ಅವರ ಪುಸ್ತಕ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಪುಲ್ವಾಮಾ ದಾಳಿಯ ನಂತರ ಉಭಯ ದೇಶಗಳ ನಡುವೆ ಯಾವ ರೀತಿಯ ಉದ್ವಿಗ್ನತೆ ಉಂಟಾಗಿದೆ?, ಭಾರತದ ರಾಜತಾಂತ್ರಿಕ ನೀತಿಗಳಿಗೆ ಪಾಕಿಸ್ತಾನ ಹೇಗೆ ಹೆದರುತ್ತಿದೆ?, ಭಯೋತ್ಪಾದನೆಯ ಕುರಿತಾದ ತಮ್ಮ ನೀತಿಗಳನ್ನು ಅವರು ಹೇಗೆ ಬದಲಾಯಿಸಬೇಕಾಯಿತು? ಎಂಬುದೂ ಸೇರಿದಂತೆ ಮುಂತಾದ ವಿಷಯಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಕೆಲವನ್ನು ರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದು ಬಹಿರಂಗಪಡಿಸಿದೆ.

ಫೆಬ್ರವರಿ 27ರಂದು ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ವಶಪಡಿಸಿಕೊಂಡ ನಂತರ ಭಾರತವು ತೀವ್ರವಾಗಿ ಪ್ರತಿಕ್ರಿಯಿಸಿತು. ವೈರಿ ದೇಶದ ಮೇಲೆ 9 ಕ್ಷಿಪಣಿಗಳನ್ನು ಹಾರಿಸಲು ಭಾರತ ಸಿದ್ಧಗೊಂಡಿತು. ಈ ವಿಷಯ ತಿಳಿದ ಪಾಕ್ ತುಂಬಾ ಹೆದರಿತ್ತು. ಆ ಸಮಯದಲ್ಲಿ ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಸೊಹೈಲ್ ಮೊಹಮ್ಮದ್ ಇಸ್ಲಾಮಾಬಾದ್‌ನಲ್ಲಿದ್ದರು. ಅವರು ಫೆಬ್ರವರಿ 27 ರ ಮಧ್ಯರಾತ್ರಿ ನನ್ನನ್ನು ಸಂಪರ್ಕಿಸಿದರು. ಇಮ್ರಾನ್ ಖಾನ್ ಅವರು ಮೋದಿ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಲು ಬಯಸುತ್ತಿದ್ದಾರೆ ಎಂದು ಹೇಳಿದರು. ಕೂಡಲೇ ದೆಹಲಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಆಗ ಖಾನ್ ಅವರೊಂದಿಗೆ ಮಾತನಾಡಲು ಪ್ರಧಾನಿ ಮೋದಿ ಲಭ್ಯವಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಪಾಕಿಸ್ತಾನಕ್ಕೆ ಯಾವುದೇ ತುರ್ತು ಪರಿಸ್ಥಿತಿ ಇದ್ದರೆ ಹೈಕಮಿಷನರ್ (ನನ್ನ) ಜೊತೆ ಮಾತನಾಡಲು ಸೂಚಿಸಲಾಗಿತ್ತು. ಅದರ ನಂತರ ಪಾಕಿಸ್ತಾನದ ಅಧಿಕಾರಿಗಳು ಮತ್ತೆ ನನ್ನನ್ನು ಸಂಪರ್ಕಿಸಲಿಲ್ಲ ಎಂದು ಅಜಯ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಈ ಬೆಳವಣಿಗೆಗಳ ನಂತರ ಕೆಲವು ದಿನಗಳ ನಂತರ ಇಮ್ರಾನ್ ಖಾನ್ ಅವರ ಹತ್ತಿರದ ಸ್ನೇಹಿತರೊಬ್ಬರು ನನ್ನನ್ನು ಸಂಪರ್ಕಿಸಿದರು. ಆ ವರ್ಷ ಕಿರ್ಗಿಸ್ತಾನ್‌ನಲ್ಲಿ ನಡೆದ ಎಸ್‌ಸಿಒ ಸಮ್ಮೇಳನದಲ್ಲಿ ಅವರು ಪ್ರಧಾನಿ ಮೋದಿ ಮತ್ತು ಇಮ್ರಾನ್ ಖಾನ್ ನಡುವೆ ಸಭೆಯನ್ನು ಏರ್ಪಡಿಸುವಂತೆ ಕೇಳಿಕೊಂಡರು. ಭಯೋತ್ಪಾದನೆ ಕುರಿತ ತಮ್ಮ ನೀತಿಯನ್ನು ಮೋದಿಗೆ ವಿವರಿಸಿ ಸರಿಪಡಿಸುತ್ತೇವೆ ಎಂದು ಖಾನ್ ಹೇಳಿದ್ದರು. ಆದರೆ ಪ್ರಧಾನಿ ಆ ಸಭೆಗೆ ಹಾಜರಾಗಲಿಲ್ಲ ಎಂದು ಅಜಯ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಅಭಿನಂದನ್ ವರ್ಧಮಾನ್ ಅವರನ್ನು ಮುಕ್ತಗೊಳಿಸಲು ಪಾಕಿಸ್ತಾನದ ಕಡೆಗೆ ಕ್ಷಿಪಣಿಗಳನ್ನು ಹಾರಿಸಿರುವುದಾಗಿ ಭಾರತ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ, ಅದರಿಂದಾಗಿ ಆಗಿನ ಖಾನ್ ಸರ್ಕಾರ ಹೆದರಿತ್ತು ಎಂದು ಅಜಯ್ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ. 2019ರಲ್ಲಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ, "ಅಭಿನಂದನ್ ಬಿಟ್ಟು ಪಾಕ್ ಒಳ್ಳೆಯ ಕೆಲಸ ಮಾಡಿದೆ. ಇಲ್ಲದಿದ್ದರೆ ಅವರು ಭಯಾನಕ ರಾತ್ರಿಯನ್ನು ಅನುಭವಿಸಬೇಕಾಗುತ್ತಿತ್ತು" ಎಂದು ಹೇಳಿದ್ದರು.

ಫೆಬ್ರವರಿ 14, 2019ರಂದು ಪುಲ್ವಾಮಾದಲ್ಲಿ ಭಯೋತ್ಪಾದಕರು ಸೇನಾ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಿದ್ದರು ಎಂದು ತಿಳಿದಿದೆ. ಇದಕ್ಕೆ ಪ್ರತಿಯಾಗಿ ಭಾರತವು ಬಾಲಾಕೋಟ್‌ನಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಫೆಬ್ರವರಿ 27ರಂದು ಬಾಲಾಕೋಟ್ ಘಟನೆಯ ಮರುದಿನ ಪಾಕಿಸ್ತಾನದ ವಾಯುಪಡೆಯು ಎಫ್ -16 ವಿಮಾನದ ಮೂಲಕ ಭಾರತದ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ವಿಂಗ್ ಕಮಾಂಡರ್ ಅಭಿನಂದನ್ ಅದನ್ನು ಮಿಗ್ -21 ವಿಮಾನದೊಂದಿಗೆ ಬೆನ್ನಟ್ಟಿದ್ದರು. ಅದೇ ವೇಳೆಗೆ ಅವರ ವಿಮಾನವೂ ಪತನವಾಗಿದ್ದು, ಪ್ಯಾರಾಚೂಟ್ ಸಹಾಯದಿಂದ ಕೆಳಗೆ ಹಾರಿ ಪಾಕಿಸ್ತಾನದ ಭೂಪ್ರದೇಶದಲ್ಲಿ ಬಂದಿಳಿದ್ದರು. ಆತನನ್ನು ಪಾಕಿಸ್ತಾನಿ ಸೈನಿಕರು ಬಂಧಿಸಿ ಚಿತ್ರಹಿಂಸೆ ನೀಡಿದ್ದರು. ಅಭಿನಂದನ್ ಅವರನ್ನು ಹಸ್ತಾಂತರಿಸುವಂತೆ ಪಾಕಿಸ್ತಾನದ ಮೇಲೆ ಭಾರತ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಒತ್ತಡ ಹೆಚ್ಚಿತ್ತು. ನಂತರ ವಾಘಾ ಗಡಿಯಲ್ಲಿ ಪಾಕಿಸ್ತಾನ ಸೇನೆ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು.

ಇದನ್ನೂ ಓದಿ:ಮಾಲ್ಡೀವ್ಸ್ ವಿರುದ್ಧ ಕಠಿಣ ನಿಲುವು ತಳೆದ ಭಾರತ; ಮಾಲ್ಡೀವ್ಸ್‌ನ ಹೈಕಮಿಷನರ್‌ಗೆ ಸಮನ್ಸ್

ABOUT THE AUTHOR

...view details