ಕರ್ನಾಟಕ

karnataka

2047ರ ವೇಳೆಗೆ ದೇಶವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸಲು ಪಿಎಫ್​ಐ ಸಂಚು: ಎಟಿಎಸ್ ಚಾರ್ಜ್ ಶೀಟ್ ಮಾಹಿತಿ ಬಹಿರಂಗ

By

Published : Feb 9, 2023, 2:04 PM IST

ಪಿಎಫ್​ಐ ಕಾರ್ಯಕರ್ತರನ್ನು ಬಂಧಿಸುವ ಕುರಿತು ಬಾಂಬೆ ಹೈಕೋರ್ಟ್‌ಗೆ ಎಟಿಎಸ್ ಚಾರ್ಜ್ ಶೀಟ್ ಸಲ್ಲಿಸಿದೆ.

Bombay High Court
ಬಾಂಬೆ ಹೈಕೋರ್ಟ್‌

ಮುಂಬೈ (ಮಹಾರಾಷ್ಟ್ರ) :ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರನ್ನು ಬಂಧಿಸಿದ ನಂತರ ಈ ಸಂಬಂಧವಾಗಿ ಬಾಂಬೆ ಹೈಕೋರ್ಟ್‌ಗೆ ಎಟಿಎಸ್(ಭಯೋತ್ಪಾದನಾ ನಿಗ್ರಹ ದಳ) ಚಾರ್ಜ್ ಶೀಟ್ ಸಲ್ಲಿಸಿದೆ. ಪಿಎಫ್ ಐ ಸಂಘಟನೆಯು ದೇಶದಲ್ಲಿ ನಡೆಸಿರುವ ಕೃತ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ 600 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಸಲ್ಲಿಸಿರುವ ಚಾರ್ಜ್​ ಶೀಟ್​ನಲ್ಲಿ ತನಿಖೆ ವೇಳೆ ಹಲವಾರು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.

ಇಸ್ಲಾಮಿಕ್ ರಾಷ್ಟ್ರ ಮಾಡಲು ಪಿತೂರಿ :2047 ರ ಹೊತ್ತಿಗೆ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳು ಪೂರ್ಣಗೊಳ್ಳುತ್ತದೆ. ಈ ವರ್ಷದೊಳಗೆ ಇಡೀ ಅಖಂಡ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಪಿಎಫ್‌ಐ ಸಂಘಟನೆ ಮುಂದಾಗಿತ್ತು. ಹಾಗೂ ಇದಕ್ಕೆ ತಯಾರಿ ಕೂಡ ನಡೆಸಿತ್ತು ಎಂದು ಎಟಿಎಸ್​ ಆರೋಪ ಪಟ್ಟಿಯಲ್ಲಿ ಗಂಭೀರ ಆರೋಪ ಮಾಡಲಾಗಿದೆ.

2047ರ ನಂತರ ಭಾರತವನ್ನು ಇಸ್ಲಾಮಿಕ್​ ರಾಷ್ಟ್ರವಾಗಿ ಶರಿಯಾ ಕಾನೂನಿನ ಮೂಲಕ ಆಡಳಿತ ನಡೆಸಬೇಕು. ಇದಕ್ಕಾಗಿ ಪಿಎಫ್ ಐ ಸಂಘಟನೆಯಿಂದ ಯೋಜನೆ ರೂಪಿಸಲಾಗಿತ್ತು.(ಶರಿಯಾ ಕಾನೂನು ಎಂದರೆ, ಇಸ್ಲಾಂ ಧರ್ಮದ ಒಂದು ಕಾನೂನು ವ್ಯವಸ್ಥೆಯಾಗಿದ್ದು, ಕುರಾನ್ ಹಾಗೂ ಇಸ್ಲಾಂ ಧರ್ಮದ ಕೇಂದ್ರ ಪಠ್ಯವಾದ ಫತ್ವಾಗಳಿಂದ ವಿಭಾಗಿಸಲಾಗಿದೆ. ಹಾಗೂ ಇಸ್ಲಾಂ ಮೌಲ್ವಿಗಳ ನೀಡುವ ತೀರ್ಪುಗಳನ್ನು ಈ ಕಾನೂನು ಒಳಗೊಂಡಿದೆ) ಮೊದಲು ಪೇಪರ್ ಸಂಸ್ಥೆಯಿಂದ ಮುಸ್ಲಿಂ ಯುವಕರಿಗೆ ತರಬೇತಿ ನೀಡುವ ಕೆಲಸ ನಡೆಯುತ್ತಿದೆ ಎಂದು ಎಟಿಎಸ್ ತನ್ನ ಚಾರ್ಜ್ ಶೀಟ್​​ನಲ್ಲಿ ಹೇಳಿದೆ.

ಸಿಮಿ ಸಂಘಟನೆಗಳಂತೆ ಪಿಎಫ್‌ಐ ಕೃತ್ಯ: ಅಲ್ಲದೇ ಇದೇ ಕಾರಣಕ್ಕೆ ಕೆಲವು ವರ್ಷಗಳ ಹಿಂದೆ ಇಸ್ಲಾಮಿಕ್ ವಿದ್ಯಾರ್ಥಿ ಸಂಘಟನೆ ಎಂದು ಒಳಗೊಳಗೆ ಭಯೋತ್ಪಾದನೆ ಕೃತ್ಯಗಳನ್ನು ಸಿನಿ ಸಂಘಟನೆ ನಡೆಸಿತ್ತು. ಇದರ ಪ್ರಮುಖ ಉದ್ದೇಶ ಏನೆಂದರೆ ದೇಶದಲ್ಲಿ ಅಶಾಂತಿ ಉಂಟು ಮಾಡುವುದು. ತನ್ನ ಇಸ್ಲಾಂ ತತ್ವಗಳನ್ನು ಇಟ್ಟು ಭಾರತವನ್ನು ಇಸ್ಲಾಮಿಕ್​ ರಾಷ್ಟ್ರ ಮಾಡವುದಾಗಿತ್ತು. ಇದರಂತೆ ಅನೇಕ ಜಿಹಾದಿ ಕೃತ್ಯಗಳನ್ನು ನಡೆಸಿ ಈ ಮೂಲಕ 'ಸಿಮಿ ಸಂಘಟನೆ' ನಿಷೇಧಿಸಲ್ಪಟಿತ್ತು. ಈ ಸಿಮಿ ಸಂಘಟನೆಯಂತೆ ಪಿಎಫ್‌ಐ ಸಂಘಟನೆಯೂ ಕೆಲಸ ಮಾಡುತ್ತಿವೆ ಎಂದು ಎಟಿಎಸ್ ಆರೋಪಪಟ್ಟಿಯಲ್ಲಿ ಹೇಳಿದೆ.

8 ರಾಜ್ಯಗಳ ಪಿಎಫ್​ಐ ಕಚೇರಿಗಳ ಮೇಲೆ ದಾಳಿ:ಕಳೆದ ಅಕ್ಟೋಬರ್ 2022 ರಲ್ಲಿ, ಎಟಿಎಸ್ ಮಹಾರಾಷ್ಟ್ರದ ಪುಣೆ, ನಾಸಿಕ್‌ನಲ್ಲಿ ಪಿಎಫ್‌ಐ ಸಂಘಟನೆಯ ವಿರುದ್ಧ ಕ್ರಮ ಕೈಗೊಂಡಿತ್ತು. ಮತ್ತು ಪುಣೆ, ನಾಸಿಕ್‌ನಲ್ಲಿರುವ ಪಿಎಫ್‌ಐ ಸಂಘಟನೆಯ ಕಚೇರಿಯ ವಿರುದ್ಧ ಕ್ರಮ ಕೈಗೊಳ್ಳುವಾಗ ಎಟಿಎಸ್‌ನ ಕೆಲವು ಕಾರ್ಯಕರ್ತರನ್ನು ಕೂಡಾ ಬಂಧಿಸಿತ್ತು. ಹಾಗೂ ಮಹಾರಾಷ್ಟ್ರ,ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯಗಳಲ್ಲಿ ಪಿಎಫ್ ಐ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿ ಸಂಘಟನೆಯ ಕಚೇರಿಗಳಿಗೆ ಬೀಗ ಹಾಕಲಾಗಿತ್ತು.

ಬಹಳ ಮುಖ್ಯವಾದ ವಿಷಯ ಎಂದರೆ ಯುವಕರಿಗೆ ಪ್ರಚೋದನಕಾರಿ ಭಾಷಣಗಳು, ವಿಡಿಯೋಗಳು, ಫೋಟೋಗಳು ಮತ್ತು ಆಡಿಯೊ ಕ್ಲಿಪ್‌ಗಳನ್ನು ಪಿಎಫ್‌ಐ ಸಂಘಟನೆಯು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡುತ್ತಿತ್ತು. ಇದರಿಂದ ಅನೇಕ ಯುವಕರು ಪಿಎಫ್​​​ಐ ಸಂಘಟನೆಗೆ ಸೇರಿ ಕೊಂಡಿದ್ದರು. ಬಂಧಿತ ಪಿಎಫ್ಐ ಸಂಘಟನೆಯ ಶಂಕಿತ ಕಾರ್ಯಕರ್ತನ ಮೊಬೈಲ್ ನಿಂದ ಹಲವು ಅನುಮಾನಾಸ್ಪದ ಮತ್ತು ಮಹತ್ವದ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಚಾರ್ಜ್​ ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ :ಕಚೇರಿಗಳಿಗೆ ಹಾಕಿದ್ದ ಬೀಗಮುದ್ರೆ ತೆರವಿಗೆ ಆಗ್ರಹಿಸಿ ಎಸ್‍ಡಿಪಿಐ ಹೈಕೋರ್ಟ್​ ಮೊರೆ

ABOUT THE AUTHOR

...view details