ಕರ್ನಾಟಕ

karnataka

ಮ್ಯಾನ್ಮಾರ್​ನಿಂದ ಸ್ಮಗ್ಲಿಂಗ್: 100 ದಿನಗಳಲ್ಲಿ ₹31 ಕೋಟಿ ಮೌಲ್ಯದ ಅಡಕೆ ವಶ

By

Published : Apr 16, 2023, 5:47 PM IST

ಇತ್ತೀಚಿನ ದಿನಗಳಲ್ಲಿ ಮ್ಯಾನ್ಮಾರ್​ನಿಂದ ಅಕ್ರಮವಾಗಿ ಭಾರತದೊಳಗೆ ಅಡಕೆ ಕಳ್ಳಸಾಗಣೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ.

Smuggled from Myanmar, areca nut valued at Rs 31.73 cr seized in 100 days in NE
Smuggled from Myanmar, areca nut valued at Rs 31.73 cr seized in 100 days in NE

ಐಜ್ವಾಲ್/ಅಗರ್ತಲಾ : ಕಳೆದ 100 ದಿನಗಳಲ್ಲಿ ಮ್ಯಾನ್ಮಾರ್​ನಿಂದ ದೇಶದೊಳಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 31.73 ಕೋಟಿ ರೂಪಾಯಿ ಮೌಲ್ಯದ 5.44 ಲಕ್ಷ ಕೆಜಿ ಅಡಕೆಯನ್ನು ಮಿಜೋರಾಂ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್ ಯೋಧರು ವಶಪಡಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರದ ನಿರ್ದೇಶನಗಳ ಪ್ರಕಾರ ಒಣ ಅಡಕೆಯ ಅಕ್ರಮ ಸಾಗಣೆ ತಡೆಗಟ್ಟಲು ಪೊಲೀಸರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಮಿಜೋರಾಂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಕಳೆದ 100 ದಿನಗಳಲ್ಲಿ (ಜನವರಿ 1 ರಿಂದ ಏಪ್ರಿಲ್ 10 ರವರೆಗೆ) ಗಮನಾರ್ಹ ಪ್ರಮಾಣದ ಅಡಕೆಯನ್ನು ವಶಪಡಿಸಿಕೊಳ್ಳಲಾಗಿದೆ.

ಅಡಕೆ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 19 ಎಫ್‌ಐಆರ್‌ಗಳನ್ನು ದಾಖಲಿಸಿ 61 ಜನರನ್ನು ಬಂಧಿಸಿದ್ದಾರೆ. ಮ್ಯಾನ್ಮಾರ್​ನಿಂದ ನಡೆಯುತ್ತಿರುವ ದೊಡ್ಡ ಪ್ರಮಾಣದ ಅಡಕೆ ಕಳ್ಳಸಾಗಣೆ ಮತ್ತು ಅಸ್ಸಾಂ ಸರ್ಕಾರದ ಸಾಗಾಟ ನಿರ್ಬಂಧಗಳಿಂದ ಈಶಾನ್ಯ ರಾಜ್ಯಗಳ ಅಡಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಬೇಕೆಂದು ಮಿಜೋರಾಂ ಮತ್ತು ತ್ರಿಪುರಾ ರೈತರು ಆಗ್ರಹಿಸಿದ್ದಾರೆ.

ಅಡಕೆ ಅಕ್ರಮ ಸಾಗಾಟ ಹೆಚ್ಚಾಗುತ್ತಿರುವ ಮಧ್ಯೆ ಅಸ್ಸಾಂ ರೈಫಲ್ಸ್ ಸೇರಿದಂತೆ ಭದ್ರತಾ ಪಡೆಗಳ ಯೋಧರು ಆಗಾಗ ಸಾವಿರಾರು ಟನ್ ಅಡಕೆ ಉತ್ಪನ್ನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಅಡಕೆಯ ಜೊತೆಗೆ ಮ್ಯಾನ್ಮಾರ್​ನಿಂದ ಡ್ರಗ್ಸ್, ಅಪರೂಪದ ಪ್ರಾಣಿಗಳು ಮತ್ತು ಇನ್ನೂ ಅನೇಕ ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಅಡಕೆಯ ಅಕ್ರಮ ಸಾಗಾಟ ತಡೆಗಟ್ಟಲು ಅಡಕೆ ಸಾಗಾಟದ ಮೇಲೆ ಅಸ್ಸಾಂ ಸರ್ಕಾರವು ಕಳೆದ ವರ್ಷ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಇದರಿಂದ ಮಿಜೋರಾಂ ಮತ್ತು ತ್ರಿಪುರಾದ ರೈತರು ತಾವು ಬೆಳೆದ ಅಡಕೆಯನ್ನು ದೇಶದ ಇತರ ಭಾಗಕ್ಕೆ ಸಾಗಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಮಿಜೋರಾಂ ಚರ್ಚ್ ನಾಯಕರ ಸಮಿತಿಯ ಪ್ರತಿನಿಧಿಗಳು ಇತ್ತೀಚೆಗೆ ಐಜ್ವಾಲ್‌ನಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾನ್ ಬಾರ್ಲಾ ಅವರೊಂದಿಗೆ ಅಡಕೆ ಸಾಗಣೆ ಸಮಸ್ಯೆಯ ಬಗ್ಗೆ ಚರ್ಚಿಸಿದರು. ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಒಣ ಅಡಕೆ ಕಳ್ಳಸಾಗಣೆ ತಡೆಗೆ ಅಸ್ಸಾಂ ಸರ್ಕಾರ ವಿಧಿಸಿರುವ ನಿರ್ಬಂಧಗಳಿಂದ ಮಿಜೋರಾಂ ರೈತರಿಗೆ ಯಾವ ರೀತಿಯ ಸಮಸ್ಯೆಯಾಗುತ್ತಿದೆ ಎಂಬ ಬಗ್ಗೆ ಸಚಿವರಿಗೆ ಅವರು ವಿವರಿಸಿದರು. ಅಸ್ಸಾಂ ಸರ್ಕಾರವು ತನ್ನ ರಾಜ್ಯಕ್ಕೆ ವಿದೇಶದ ಅಡಕೆ ಪ್ರವೇಶವಾಗದಂತೆ ತಡೆಯಲು ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಆದರೆ ತ್ರಿಪುರಾ ಅಡಕೆ ಮತ್ತು ಮ್ಯಾನ್ಮಾರ್ ಅಡಕೆಯ ಮಧ್ಯೆ ವ್ಯತ್ಯಾಸ ತನಿಖಾಧಿಕಾರಿಗಳಿಗೆ ತಿಳಿಯದ ಕಾರಣದಿಂದ ಸ್ಥಳೀಯ ರೈತರಿಗೆ ತೀವ್ರ ಮಾರುಕಟ್ಟೆ ಸಮಸ್ಯೆ ಸೃಷ್ಟಿಸಿದೆ.

ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಈ ಹಿಂದೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಿದ್ದು, ಸಮಸ್ಯೆಯನ್ನು ಪರಿಹರಿಸುವಂತೆ ಕೋರಿ ಪತ್ರ ಕೂಡ ಬರೆದಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ತ್ರಿಪುರಾದೊಂದಿಗೆ ಅಂತರರಾಜ್ಯ ಗಡಿಯುದ್ದಕ್ಕೂ ನಿಯೋಜಿಸಲಾದ ಅಸ್ಸಾಂ ಪೊಲೀಸ್ ಸಿಬ್ಬಂದಿ ಯಾವುದೇ ಕಾರಣವಿಲ್ಲದೆ ಟ್ರಕ್‌ಗಳ ಮೂಲಕ ಸಾಗಿಸುವ ತ್ರಿಪುರದ ಅಡಿಕೆ ಸಾಗಾಟವನ್ನು ನಿರ್ಬಂಧಿಸುತ್ತಿದ್ದಾರೆ.

ಇದನ್ನೂ ಓದಿ : ಸುಡಾನ್​ನಲ್ಲಿ ಸೇನಾಪಡೆಗಳ ಘರ್ಷಣೆ: ಓರ್ವ ಭಾರತೀಯ ಸೇರಿ 56 ಸಾವು

ABOUT THE AUTHOR

...view details