ಕರ್ನಾಟಕ

karnataka

ಬಿಜೆಪಿಯೇತರ ರಾಜ್ಯಗಳು ಪೆಟ್ರೋಲ್​ - ಡೀಸೆಲ್​ ಮೇಲೆ​ ವ್ಯಾಟ್​ ಕಡಿಮೆ ಮಾಡಿ: ಪೆಟ್ರೋಲಿಯಂ ಸಚಿವರ ಮನವಿ​

By

Published : Dec 15, 2022, 7:16 PM IST

ಪ್ರತಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳು ಪೆಟ್ರೋಲ್​, ಡೀಸೆಲ್​ ಮೇಲೆ ವ್ಯಾಟ್​(ಮೌಲ್ಯ ವರ್ಧಿತ ತೆರಿಗೆ) ಕಡಿಮೆ ಮಾಡಬೇಕು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ಧಿಪ್​ ಸಿಂಗ್​ ಪುರಿ ಹೇಳಿದ್ಧಾರೆ.

parliament-winter-session-2022-six-non-bjp-ruled-states-have-not-reduced-vat-in-petroleum-products-says-govt
ಬಿಜೆಪಿಯೇತರ ರಾಜ್ಯಗಳು ತೈಲಗಳ ಮೇಲೆ ವ್ಯಾಟ್​ ಕಡಿಮೆ ಮಾಡಿ: ಕೇಂದ್ರ ಪೆಟ್ರೋಲಿಯಂ ಸಚಿವ​

ನವದೆಹಲಿ: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಜಾಗತಿಕ ಮಟ್ಟಕ್ಕಿಂತ ಕಡಿಮೆಯಿದ್ದು, ಪ್ರತಿಪಕ್ಷಗಳು ಆಳುವ ರಾಜ್ಯಗಳಲ್ಲಿ ವ್ಯಾಟ್(ಮೌಲ್ಯ ವರ್ಧಿತ ತೆರಿಗೆ) ಕಡಿಮೆ ಮಾಡಬೇಕು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್​ ಪುರಿ ಲೋಕಸಭೆಯಲ್ಲಿ ಗುರುವಾರ ಹೇಳಿದ್ದಾರೆ.

ಸದನದ ಪ್ರಶ್ನೋತ್ತರ ವೇಳೆಯಲ್ಲಿ, ಪಶ್ಚಿಮ ಬಂಗಾಳ ಸೇರಿದಂತೆ ಆರು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಕಡಿಮೆ ಮಾಡಿಲ್ಲ, ಆದರೆ, ಬಿಜೆಪಿ ಆಡಳಿತದ ಹಲವು ರಾಜ್ಯಗಳು ತೆರಿಗೆ ಕಡಿತಗೊಳಿಸಿವೆ ಎಂದು ಪ್ರತಿಪಕ್ಷಗಳ ಸದಸ್ಯರ ಚರ್ಚೆಯ ನಡುವೆ ಹರ್ದೀಪ್​ ಸಿಂಗ್​ ಪುರಿ ಹೇಳಿದರು.

‘ಕಳೆದ ಎಂಟು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅತ್ಯಲ್ಪ ಮಟ್ಟದಲ್ಲಿ ಏರಿಕೆಯಾಗಿದ್ದು, ಇದು 1974 ರಿಂದ ಕನಿಷ್ಠ ಏರಿಕೆಯಾಗಿದೆ. ಉತ್ಪಾದನಾ ವೆಚ್ಚ, ಸಾರಿಗೆ ವೆಚ್ಚ ವಿಮೆ ಶುಲ್ಕ ಮತ್ತು ಕರೆನ್ಸಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿರ್ಧರಿಸಲಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಕೆ. ಮುರಳೀಧರನ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಇದಾದ ನಂತರ ಡೀಲರ್ ಪಾಲಿನ ಲಾಭ, ಕೇಂದ್ರ ಅಬಕಾರಿ ಸುಂಕ, ರಾಜ್ಯ ವ್ಯಾಟ್ ಕೂಡ ವಿಧಿಸಲಾಗುತ್ತದೆ, ಹಲವು ರಾಜ್ಯಗಳು ವ್ಯಾಟ್ ಕಡಿತಗೊಳಿಸಿವೆ. ಕೆಲವು ರಾಜ್ಯಗಳು ಪ್ರತಿ ಲೀಟರ್​ ಪೆಟ್ರೋಲ್‌ಗೆ 17 ರೂ. ವ್ಯಾಟ್ ವಿಧಿಸಿದರೆ ಕೆಲವು ರಾಜ್ಯಗಳು 32 ರೂ. ತೆರಿಗೆ ವಿಧಿಸಿದೆ ಎಂದರು.

ಪಶ್ಚಿಮ ಬಂಗಾಳ, ಜಾರ್ಖಂಡ್, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳು ಈ ರಾಜ್ಯಗಳು ವ್ಯಾಟ್ ಕಡಿತಗೊಳಿಸಿಲ್ಲ, ಕಡಿಮೆ ಮಾಡುವಂತೆ ಕೇಳಿಕೊಂಡಿದ್ದೇನೆ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ ಬೆಲೆ ಶೇ.40ರಷ್ಟು ಹೆಚ್ಚಿದ್ದರೆ, ಭಾರತದಲ್ಲಿ ಶೇ.2ರಷ್ಟು ಮಾತ್ರ ಏರಿಕೆಯಾಗಿದೆ. ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅದನ್ನು ಕೈಗೆಟುಕುವಂತೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್​ ಸಿಂಗ್​ ಪುರಿ​ ಹೇಳಿದರು.

ಇದನ್ನೂ ಓದಿ :ಬಸ್​ ನಿಲ್ದಾಣದ ಬಳಿ ನಿಲ್ಲಿಸಿದ್ದ ಪೊಲೀಸರ​ ಇನ್ನೋವಾ ಕಾರನ್ನೇ ಕದ್ದ ಖದೀಮರು

ABOUT THE AUTHOR

...view details