ಕರ್ನಾಟಕ

karnataka

ರಾಜ್ಯಗಳ ಬಳಿ ಇನ್ನೂ 15 ಕೋಟಿ ಕೋವಿಡ್ ಲಸಿಕೆ ಬಳಕೆಯಾಗದೆ ಉಳಿದಿದೆ: ಕೇಂದ್ರ

By

Published : Nov 7, 2021, 3:27 PM IST

Updated : Nov 7, 2021, 3:38 PM IST

ರಾಷ್ಟ್ರಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಪೂರೈಸಿದ ಸುಮಾರು 15 ಕೋಟಿ ಕೋವಿಡ್ ಲಸಿಕೆಯನ್ನು ಇನ್ನೂ ಬಳಸಲಾಗಿಲ್ಲ ಎಂದು ಕೇಂದ್ರ ಮಾಹಿತಿ ನೀಡಿದೆ.

Over 15.77 crore balance, unutilised vaccine doses still available with states:Centre
ರಾಜ್ಯಗಳ ಬಳಿ ಇನ್ನೂ 15 ಕೋಟಿ ಕೋವಿಡ್ ವ್ಯಾಕ್ಸಿನ್ ಉಳಿಕೆ : ಕೇಂದ್ರ ಸರ್ಕಾರ

ನವದೆಹಲಿ:ದೇಶದಲ್ಲಿ ಕೋವಿಡ್ ಲಸಿಕೆ ಪೂರೈಕೆಯಲ್ಲಿ ಕೊರತೆಯಿಲ್ಲ. ಪ್ರಸ್ತುತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಸುಮಾರು 15.77 ಕೋಟಿ ಲಸಿಕೆಗಳಿದ್ದು, ಬಳಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ, ಈವರೆಗೆ ಸುಮಾರು 116.58 ಕೋಟಿ ಲಸಿಕೆಗಳನ್ನು ಪೂರೈಸಲಾಗಿದೆ. ಇವುಗಳಲ್ಲಿನ್ನೂ 15 ಕೋಟಿ ಲಸಿಕೆಗಳು ಬಳಕೆಯಾಗಿಲ್ಲ. ಇವುಗಳ ಬಳಕೆ ಹೆಚ್ಚಿಸಲು ಕೋವಿಡ್ ಲಸಿಕಾ ಅಭಿಯಾನಯನ್ನು ಹೆಚ್ಚಿಸಲಾಗಿದೆ ಎಂದಿದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಎಷ್ಟೆಷ್ಟು ಲಸಿಕೆ ಇದೆ ಎಂಬುದು ಗೊತ್ತಾಗುವುದರಿಂದ ಯಾವ ಯಾವ ರಾಜ್ಯಗಳಿಗೆ ಎಷ್ಟು ಕೋವಿಡ್ ಲಸಿಕೆ ಪೂರೈಕೆ ಮಾಡಬೇಕು ಎಂಬುದನ್ನು ಯೋಜಿಸಲು ಸಾಧ್ಯವಾಗುತ್ತದೆ ಎಂದು ಇಲಾಖೆ ಹೇಳಿದೆ.

ಇತ್ತೀಚಿನ ಮಾಹಿತಿ ಪ್ರಕಾರ, ರಾಷ್ಟ್ರಾದ್ಯಂತ ಸುಮಾರು 108.21 ಕೋಟಿ ಕೋವಿಡ್ ಲಸಿಕೆಗಳನ್ನು ಜನರಿಗೆ ನೀಡಲಾಗಿದೆ. ಒಂದು ಡೋಸ್ ಪಡೆದವರು 73.92 ಕೋಟಿ ಮಂದಿ ಇದ್ದರೆ, ಎರಡು ಡೋಸ್ ಪಡೆದವರು 34.24 ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಕೋವಿಡ್​ ನಿಯಂತ್ರಣ, ಕೇಂದ್ರದ ಯೋಜನೆಗಳ ಜಾರಿಯಲ್ಲಿ ದಿಟ್ಟ ನಡೆ.. ಮೋದಿ ನಾಯಕತ್ವ ಬಣ್ಣಿಸಿದ ನಡ್ಡಾ

Last Updated : Nov 7, 2021, 3:38 PM IST

ABOUT THE AUTHOR

...view details