ETV Bharat / bharat

ಕೋವಿಡ್​ ನಿಯಂತ್ರಣ, ಕೇಂದ್ರದ ಯೋಜನೆಗಳ ಜಾರಿಯಲ್ಲಿ ದಿಟ್ಟ ನಡೆ.. ಮೋದಿ ನಾಯಕತ್ವ ಬಣ್ಣಿಸಿದ ನಡ್ಡಾ

author img

By

Published : Nov 7, 2021, 1:54 PM IST

ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೆ ಪಿ ನಡ್ಡಾ, ಪಿಎಂ ನರೇಂದ್ರ ಮೋದಿ ಆಡಳಿತ ಕುರಿತು ಹಾಡಿಹೊಗಳಿದ್ದಾರೆ.

Nadda hails PM Modi for 'bold decisions
ಕೋವಿಡ್​ ನಿಯಂತ್ರಣ, ಕೇಂದ್ರದ ಯೋಜನೆಗಳ ಜಾರಿಯಲ್ಲಿ ದಿಟ್ಟ ನಡೆ.. ಮೋದಿ ನಾಯಕತ್ವ ಬಣ್ಣಿಸಿದ ನಡ್ಡಾ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಲಾಕ್‌ಡೌನ್‌ನಂತಹ "ದಿಟ್ಟ ನಿರ್ಧಾರ" ಕೈಗೊಂಡಿದ್ದಕ್ಕಾಗಿ ಮತ್ತು ನಂತರದ ಆರ್ಥಿಕ ಸವಾಲುಗಳನ್ನು ನಿಭಾಯಿಸಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿ ಕುರಿತು ಹಾಡಿಹೊಗಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ ನಂತರ ಮೊದಲ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಉದ್ಘಾಟನಾ ಭಾಷಣವನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ, “ಲಾಕ್‌ಡೌನ್ ಹೇರುವ ನಿರ್ಧಾರವನ್ನು ಪ್ರಧಾನಿ ಮೋದಿ ತೆಗೆದುಕೊಂಡಿದ್ದರು ಮತ್ತು ಲಾಕ್‌ಡೌನ್ ನಂತರ ಮೂರು ತಿಂಗಳೊಳಗೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಜನರಿಗೆ ಲಭ್ಯವಾಗುವಂತೆ ಮಾಡಲಾಗಿತ್ತು. ಕೋವಿಡ್ ವಿರುದ್ಧ ಹೋರಾಡಲು ಈ ವಿಧಾನವು ಮೂರು 'T'ಗಳನ್ನು ಹೊಂದಿದೆ- ಟ್ರ್ಯಾಕ್, ಟೆಸ್ಟ್ ಮತ್ತು ಟ್ರೀಟ್." ಎಂದು ಅವರು ಹೇಳಿದ್ರು.

ಕೋವಿಡ್​ ನಿಯಂತ್ರಣಕ್ಕಾಗಿ WHO ನಿಂದ ಮೆಚ್ಚುಗೆ..

ಪಿಎಂ ಮೋದಿಯನ್ನು ಶ್ಲಾಘಿಸಿದ ಬಿಜೆಪಿ ಮುಖ್ಯಸ್ಥರು, ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಪ್ರಧಾನಿ ಮೋದಿ ದಿಟ್ಟ ನಿರ್ಧಾರದೊಂದಿಗೆ ದೇಶವನ್ನು ಮುನ್ನಡೆಸಿ ಎಂದು ಗಮನ ಸೆಳೆದರು.

"ಕೋವಿಡ್ ಸವಾಲುಗಳನ್ನು ಎದುರಿಸುವುದು ಮಾತ್ರವಲ್ಲದೆ ಉದ್ಭವಿಸಿದ ಆರ್ಥಿಕ ಸವಾಲುಗಳನ್ನು ಹೇಗೆ ಎದುರಿಸುವುದು ಎಂಬುದನ್ನು ಜಗತ್ತಿಗೆ ತೋರಿಸುವ ಮೂಲಕ ಈ ಪ್ರಕ್ರಿಯೆಯಲ್ಲಿ ವಹಿಸಿದ ಸಮರ್ಥ ನಾಯಕತ್ವಕ್ಕಾಗಿ WHO ಪ್ರಧಾನಿ ಮೋದಿಯನ್ನು ಶ್ಲಾಘಿಸಿದೆ" ಎಂದು ನಡ್ಡಾ ಹೇಳಿದ್ದಾರೆ.

ಮತ ಗಳಿಕೆ ಪ್ರಮಾಣ ಹೆಚ್ಚಿದೆ..

ಇತ್ತೀಚಿನ ಚುನಾವಣೆಯಲ್ಲಿ ಪಕ್ಷವು ಮತಗಳಿಕೆಯನ್ನು ಹೆಚ್ಚಿಸಿದೆ ಎಂದು ಬಿಜೆಪಿ ಮುಖ್ಯಸ್ಥರು ಶ್ಲಾಘಿಸಿದರು.

" ಪಂಚಾಯತ್ ಚುನಾವಣೆಯಿಂದ ಸಂಸತ್​ ಚುನಾವಣಗಳವರೆಗೆ, ಬಿಜೆಪಿಯ ಮತಗಳ ಪ್ರಮಾಣ ಹೆಚ್ಚಾಗಿದೆ. ವಾಸ್ತವವಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ, ಬಿಜೆಪಿಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ " ಎಂದು ನಡ್ಡಾ ಪಕ್ಷದ ಬೆಳವಣಿಗೆ ಕುರಿತು ಮಾತನಾಡಿದರು.

ಕೇಂದ್ರದ ಯೋಜನೆಗಳ ಬಗ್ಗೆ ಬಣ್ಣನೆ..

ಭಾರತದಲ್ಲಿ ರೈತರ ಉನ್ನತಿಗಾಗಿ ಪ್ರಗತಿಪರ ನೀತಿಗಳು ಮತ್ತು ಕಾನೂನುಗಳನ್ನು ಪರಿಚಯಿಸುವ ಮೂಲಕ ದೇಶದ ರೈತರ ಏಳಿಗೆಯನ್ನು ಖಾತ್ರಿಪಡಿಸಿದ ಏಕೈಕ ನಾಯಕ ಪ್ರಧಾನಿ ಮೋದಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬಣ್ಣಿಸಿದರು. ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ಕೇಂದ್ರವು ಜಾರಿಗೆ ತಂದ ನೀತಿಗಳನ್ನು ಅವರು ವಿವರಿಸಿದರು.

"COVID-19 ಗೆ ಭಾರತವು ತನ್ನದೇ ಆದ ಲಸಿಕೆಯೊಂದಿಗೆ ಹೊರಬರುತ್ತದೆ ಎಂದು ಜಗತ್ತು ಅಥವಾ ದೇಶವು ಊಹಿಸಿರಲಿಲ್ಲ" ಎಂದರು. ಭಾರತವು ಅತ್ಯಂತ ಕಡಿಮೆ ಸಮಯದಲ್ಲಿ ಕೋವಿಡ್ ಲಸಿಕೆಗಳನ್ನು ತಯಾರಿಸಿದೆ ಮತ್ತು 100 ಕೋಟಿಗೂ ಅಧಿಕ ಲಸಿಕೆ ಹಂಚಿಕೆಯಲ್ಲಿ ಯಶಸ್ವಿಯಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ: ಪಂಚರಾಜ್ಯ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಕುರಿತು ಚರ್ಚೆ

ಜನರು ತಮ್ಮ ಎರಡನೇ COVID-19 ಲಸಿಕೆ ಡೋಸ್‌ಗಳನ್ನು ಸ್ವೀಕರಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಆರ್ಟಿಕಲ್ 370 ರದ್ದತಿ ಮತ್ತು ಅಸ್ಸೋಂ ಮತ್ತು ತ್ರಿಪುರಾದಲ್ಲಿ ವಿವಿಧ ಶಾಂತಿ ಒಪ್ಪಂದಗಳಿಂದ ಕೇಂದ್ರ ಸರ್ಕಾರದ ವಿವಿಧ ನೀತಿ ಉಪಕ್ರಮಗಳನ್ನು ನಡ್ಡಾ ಶ್ಲಾಘಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.