ಕರ್ನಾಟಕ

karnataka

ಆರೋಗ್ಯ ಕೇಂದ್ರದಲ್ಲಿ ನರ್ಸ್ ಕೈಕಾಲು ಕಟ್ಟಿಹಾಕಿ ದುರುಳರಿಂದ ಸಾಮೂಹಿಕ ಅತ್ಯಾಚಾರ!

By

Published : Oct 23, 2022, 1:16 PM IST

Updated : Oct 23, 2022, 1:26 PM IST

ಆರೋಗ್ಯ ಕೇಂದ್ರವೊಂದರಲ್ಲಿ ನರ್ಸ್ ಒಬ್ಬರ ಕೈಕಾಲುಗಳನ್ನು ಕಟ್ಟಿಹಾಕಿ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ.

ಸಾಮೂಹಿಕ ಅತ್ಯಾಚಾರ
gang rape

ಛತ್ತೀಸ್‌ಗಢ: ಆರೋಗ್ಯ ಕೇಂದ್ರವೊಂದರಲ್ಲಿ ನರ್ಸ್ ಒಬ್ಬರನ್ನು ಕಟ್ಟಿ ಹಾಕಿ ನಾಲ್ವರು ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ನಾಲ್ವರು ದುಷ್ಕರ್ಮಿಗಳ ಪೈಕಿ ಓರ್ವ ಅಪ್ರಾಪ್ತ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ನಾಲ್ಕನೇ ಆರೋಪಿ ಪರಾರಿಯಾಗಿದ್ದಾನೆ. ಅತ್ಯಾಚಾರ ಎಸಗಿದ ಆರೋಪಿಗಳು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ನರ್ಸ್ ತಿಳಿಸಿದ್ದಾರೆ.

ಮಹೇಂದ್ರಗಢ ಜಿಲ್ಲೆಯ ಚಿಪ್ಚಿಪಿ ಗ್ರಾಮದಲ್ಲಿ ಘಟನೆ ನಡೆದಿದೆ. ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರೋಗ್ಯ ಕೇಂದ್ರದಲ್ಲಿ ಒಬ್ಬಂಟಿಯಾಗಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆಯನ್ನು ಗಮನಿಸಿದ ಕಾಮುಕರು, ಆರೋಗ್ಯ ಕೇಂದ್ರದೊಳಗೆ ಪ್ರವೇಶಿಸಿ, ಅಕೆಯ ಕೈ ಕಾಲು ಕಟ್ಟಿಹಾಕಿ, ಬಾಯಿಯನ್ನು ಬಟ್ಟೆಯಿಂದ ಬಿಗಿದು ಅತ್ಯಾಚಾರ ಎಸಗಿದ್ದಾರೆ.

ಇದನ್ನೂ ಓದಿ:ಬಾಲಕಿ ಮೇಲೆ ಗ್ಯಾಂಗ್​ ರೇಪ್​: ಹಣದಾಸೆಗಾಗಿ ಬ್ಲ್ಯಾಕ್​ ಮೇಲ್... ಸಂತ್ರಸ್ತೆಯ ವಿಡಿಯೋ ಹರಿಬಿಟ್ಟ ಕಾಮುಕರು

ಬಳಿಕ ನರ್ಸ್ ಈ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಠಾಣೆಗೆ​ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿಮೇಶ್ ಬರಯ್ಯ ತಿಳಿಸಿದ್ದಾರೆ.

ಘಟನೆಗೆ ರಾಜ್ಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಭೂಪೇಶ್ ಭಾಗೇಲ್ ನೇತೃತ್ವದಲ್ಲಿ ಛತ್ತೀಸ್‌ಗಢ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ 'ನಮಗೆ ರಕ್ಷಣೆ ಬೇಕು. ಅತ್ಯಾಚಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾವು ಕೆಲಸ ಮಾಡುವುದಿಲ್ಲ' ಎಂದು ಜಿಲ್ಲಾ ಆರೋಗ್ಯ ಕೇಂದ್ರದ ಮುಖ್ಯ ಆರೋಗ್ಯ ಅಧಿಕಾರಿ ಪ್ರತಿಮಾ ಸಿಂಗ್ ಹೇಳಿದ್ದಾರೆ.

Last Updated : Oct 23, 2022, 1:26 PM IST

ABOUT THE AUTHOR

...view details