ಬಾಲಕಿ ಮೇಲೆ ಗ್ಯಾಂಗ್​ ರೇಪ್​: ಹಣದಾಸೆಗಾಗಿ ಬ್ಲ್ಯಾಕ್​ ಮೇಲ್... ಸಂತ್ರಸ್ತೆಯ ವಿಡಿಯೋ ಹರಿಬಿಟ್ಟ ಕಾಮುಕರು

author img

By

Published : Sep 30, 2022, 5:03 PM IST

alwar-minor-gang-raped-case-against-8-filed-girl-was-blackmailed-for-money

ರಾಜಸ್ಥಾನದ ಅಲ್ವಾರ್‌ನಲ್ಲಿ ಬಾಲಕಿ ಮೇಲೆ ಗ್ಯಾಂಗ್​ ರೇಪ್​ ಎಸಗಿ, ಹಣದಾಸೆಗಾಗಿ ಬ್ಲ್ಯಾಕ್​ ಮೇಲ್ ಮಾಡಿ, ಬಲತ್ಕಾರದ ವಿಡಿಯೋ ಕ್ಲಿಪ್‌ಗಳನ್ನು ಕಾಮುಕರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಮಾಡಿರುವ ಘಟನೆ ನಡೆದಿದೆ.

ಅಲ್ವಾರ್‌ (ರಾಜಸ್ಥಾನ): ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ದುಷ್ಕೃತ್ಯದ ಚಿತ್ರೀಕರಣದ ಮಾಡಿ ಕಳೆದ ಒಂದು ವರ್ಷದಿಂದಲೂ ಬ್ಲ್ಯಾಕ್​ ಮೇಲ್​ ಮಾಡುತ್ತಿದ್ದ ಪ್ರಕರಣ ರಾಜಸ್ಥಾನದ ಅಲ್ವಾರ್‌ನಲ್ಲಿ ಬೆಳಕಿಗೆ ಬಂದಿದೆ. ಅಲ್ಲದೇ, ಬ್ಲ್ಯಾಕ್​ ಮೇಲ್ ಮಾಡುತ್ತಲೇ ಸಾವಿರಾರು ರೂಪಾಯಿ ಹಣವನ್ನೂ ಬಾಲಕಿಯಿಂದ ಕಾಮುಕರು ಸುಲಿಗೆ ಮಾಡಿದ್ದಾರೆ. ಈ ಸಂಬಂಧ 8 ಜನರ ವಿರುದ್ಧ ಪೊಲೀಸ್​ ಕೇಸ್​ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

2021ರ ಡಿಸೆಂಬರ್ 31ರಂದು ಕಾಮುಕರು ಪುಸಲಾಯಿಸಿ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಜೊತೆಗೆ ಇಡೀ ದುಷ್ಕೃತ್ಯದ ವಿಡಿಯೋ ಮಾಡಿದ್ದಾರೆ. ನಂತರ ಗಂಟೆಗಟ್ಟಲೆ ಪ್ರಜ್ಞಾಹೀನಳಾಗಿದ್ದ ನಾನು ಹೇಗೋ ಮನೆ ಬಂದು ತಲುಪಿದೆ. ಆದರೆ, ಇದಾದ ನಂತರ ಅತ್ಯಾಚಾರಿಗಳು ವಿಡಿಯೋ ಇಟ್ಟುಕೊಂಡು ನನಗೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಇದನ್ನೂ ಓದಿ: ಕೋಣೆಯಲ್ಲಿ ಕೂಡಿ ಹಾಕಿ ಬಾಲಕಿ ಮೇಲೆ ಗ್ಯಾಂಗ್​ರೇಪ್​: ಮೂವರು ಆರೋಪಿಗಳು ಅಂದರ್

ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ: ನನ್ನ ವಿಡಿಯೋ ಇಟ್ಟುಕೊಂಡಿದ್ದ ಆರೋಪಿಗಳು ನನಗೆ ಬೆದರಿಕೆ ಹಾಕುತ್ತಿದ್ದರು. ಈ ಘಟನೆಯನ್ನು ಯಾರೊಂದಿಗಾದರೂ ಹಂಚಿಕೊಂಡರೆ ವಿಡಿಯೋ ಕ್ಲಿಪ್‌ಗಳನ್ನು ವೈರಲ್ ಆಗುತ್ತವೆ ಎಂದು ಹೆದರಿಸುತ್ತಿದ್ದರು. ಬಳಿಕ ಈ ವಿಡಿಯೋಗಳ ಹೆಸರು ಹೇಳಿ ನನ್ನಿಂದ ಹಣ ವಸೂಲಿ ಮಾಡಲು ಶುರು ಮಾಡಿದರು. ಇದುವರೆಗೆ ಸುಮಾರು 50 ಸಾವಿರ ರೂಪಾಯಿ ಸುಲಿಗೆ ಮಾಡಿದ್ದಾರೆ. ಇಷ್ಟೇ ಅಲ್ಲ, 2022ರ ಜನವರಿ 3 ರಂದು ಮತ್ತು ನಂತರ ಏಪ್ರಿಲ್ 6ರಂದು ಕೂಡ ನನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಬಾಲಕಿ ಆರೋಪಿಸಿದ್ದಾರೆ.

ವಿಡಿಯೋ ಕ್ಲಿಪ್‌ಗಳು ವೈರಲ್: ನನ್ನಿಂದ ಸಾವಿರಾರು ರೂಪಾಯಿ ಸುಲಿಗೆ ಮಾಡಿದರೂ ಕಿಡಿಗೇಡಿಗಳು ಸುಧಾರಿಸಿರಲಿಲ್ಲ. ಮತ್ತಷ್ಟು ದುರಾಸೆ ಹೆಚ್ಚಾಗಿ ಸುಮಾರು 2.5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಅಷ್ಟು ದೊಡ್ಡ ಮೊತ್ತವನ್ನು ನೀಡಲು ನನಗೆ ಸಾಧ್ಯವಿರಲಿಲ್ಲ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಇದರ ನಡುವೆ ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಯ ವಿಡಿಯೋ ಕ್ಲಿಪ್‌ಗಳನ್ನು ಶೇರ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಾಲಕಿಯರಿಗೆ ಪೋರ್ನ್ ತೋರಿಸಿದ ಶಿಕ್ಷಕ: ಮಸಿ ಬಳಿದು ಚಪ್ಪಲಿಹಾರ ಹಾಕಿದ ಗ್ರಾಮಸ್ಥರು

ಈ ವಿಷಯ ಬಾಲಕಿಯ ಪೋಷಕರಿಗೂ ಗೊತ್ತಾಗಿದೆ. ಆಗ ಪೋಷಕರು ವಿಚಾರಿಸಿದಾಗ ಬಾಲಕಿ ತನ್ನ ಅಸಹಾಯಕತೆಯ ಸಂಪೂರ್ಣ ಕಥೆಯನ್ನು ವಿವರಿಸಿದ್ದಾರೆ. ಇದರ ನಂತರ ಸಂತ್ರಸ್ತೆಯೊಂದಿಗೆ ಪೊಷಕರು ಕಿಶನ್‌ಗಢಬಾಸ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಎಂಟು ಯುವಕರ ವಿರುದ್ಧ ಪೋಕ್ಸೊ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪೊಲೀಸರು ಬಾಲಕಿಯ ದೂರಿನ ಹೆಚ್ಚಿನ ತನಿಖೆ ಕೈಗೊಂಡಿದ್ದು, ಆರೋಪಿಗಳ ಮನೆಗಳ ಮೇಲೂ ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ವಿದ್ಯಾರ್ಥಿನಿಯರು ಸ್ನಾನ ಮಾಡುವ ದೃಶ್ಯಗಳ ಚಿತ್ರೀಕರಣ: ಕೆಲಸಗಾರ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.