ಕರ್ನಾಟಕ

karnataka

ಪಿಎಫ್‌ಐ ಸಂಚು ಪ್ರಕರಣ:3ನೇ ಚಾರ್ಜ್ ಶೀಟ್ ಸಲ್ಲಿಕೆ, ಮೊಹಮ್ಮದ್ ಯೂನಸ್ ಪಾತ್ರ ಬಹಿರಂಗಪಡಿಸಿದ ಎನ್‌ಐಎ

By ETV Bharat Karnataka Team

Published : Dec 8, 2023, 11:00 AM IST

Updated : Dec 8, 2023, 11:09 AM IST

NIA
ಎನ್‌ಐಎ

3rd charge sheet in the PFI conspiracy case: ನಿಜಾಮಾಬಾದ್ ಪಿಎಫ್‌ಐ ಕ್ರಿಮಿನಲ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ 17 ನೇ ಆರೋಪಿ ಮೊಹಮ್ಮದ್ ಯೂನಸ್ ವಿರುದ್ಧ NIA ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

ಹೈದರಾಬಾದ್ :ನಿಜಾಮಾಬಾದ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಿ ಮೊಹಮ್ಮದ್ ಯೂನಸ್ ವಿರುದ್ಧ ಮೂರನೇ ಚಾರ್ಜ್ ಶೀಟ್ ಸಲ್ಲಿಸಿದೆ. ನಿಷೇಧಿತ ಸಂಘಟನೆಯು ಭಯೋತ್ಪಾದನೆ ಮತ್ತು ಹಿಂಸಾಚಾರ ನಡೆಸಲು ಯುವಕರನ್ನು ನೇಮಿಸಿಕೊಳ್ಳುವುದು, ಅವರನ್ನು ತೀವ್ರಗಾಮಿಗಳನ್ನಾಗಿಸಲು ಮತ್ತು ತರಬೇತಿ ನೀಡಲು ಕ್ರಿಮಿನಲ್ ಸಂಚು ರೂಪಿಸಿತ್ತು ಎಂದು ಎನ್‌ಐಎ ಆರೋಪಿಸಿದೆ.

ಹೈದರಾಬಾದ್‌ನ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಗುರುವಾರ ನೋಸಮ್ ಮೊಹಮ್ಮದ್ ಯೂನಸ್ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಪ್ರಕರಣದಲ್ಲಿ ಆರೋಪಿಗಳ ಒಟ್ಟು ಸಂಖ್ಯೆ 17 ರಷ್ಟಿದೆ ಎಂದು ಏಜೆನ್ಸಿಯು ಅಧಿಕೃತ ಪ್ರಕಟಣೆ ತಿಳಿಸಿದೆ.

ಎನ್ಐಎ ಚಾರ್ಜ್ ಶೀಟ್ ಪ್ರಕಾರ, ಒಂದು ಗುಂಪಿನ ಯುವಕರನ್ನು ಪಿಎಫ್‌ಐಗೆ ಸೇರಿಸುವ ಮೂಲಕ ಮತ್ತು ಇನ್ನೊಂದು ಗುಂಪಿನ ಮೇಲೆ ದಾಳಿ ಮಾಡಲು ಅವರಿಗೆ ಸಶಸ್ತ್ರ ತರಬೇತಿ ನೀಡುವ ಜೊತೆಗೆ ದೇಶದಲ್ಲಿ ನರಮೇಧವನ್ನು ಸೃಷ್ಟಿಸುವ ಸಂಚಿನಲ್ಲಿ ಯೂನಸ್ ಪ್ರಮುಖ ಪಾತ್ರ ವಹಿಸಿದ್ದಾನೆ. 2047ರ ವೇಳೆಗೆ ದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಪಿಎಫ್‌ಐ ಸಂಚು ರೂಪಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

"ಮೊಹಮ್ಮದ್ ಯೂನಸ್ ವಿರುದ್ಧ IPC ಯ ಸಂಬಂಧಿತ ಸೆಕ್ಷನ್‌ಗಳು ಮತ್ತು 1967 ರ UA (P) ಕಾಯಿದೆಯಡಿ ಚಾರ್ಜ್‌ಶೀಟ್ ದಾಖಲಿಸಲಾಗಿದೆ. ಎನ್‌ಐಎ ತನಿಖೆಗಳ ಪ್ರಕಾರ, ಯೂನಸ್ ತರಬೇತಿ ಪಡೆದ PFI ಕಾರ್ಯಕರ್ತನಾಗಿದ್ದು, ಪ್ರಭಾವಶಾಲಿ ಯುವಕರನ್ನು ಪ್ರೇರೇಪಿಸುವ ಮತ್ತು ಆಮೂಲಾಗ್ರಗೊಳಿಸುವ ಉದ್ದೇಶದಿಂದ ತೊಡಗಿಸಿಕೊಂಡಿದ್ದಾನೆ ಎಂದು ಕಂಡುಬಂದಿದೆ ತನಿಖಾ ಸಂಸ್ಥೆ ಆರೋಪಿಸಿದೆ. ಹಿಂಸಾತ್ಮಕ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು, 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಪಿತೂರಿ ಮುಂದುವರಿಸಿದ್ದ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮೊದಲ ನಿಜಾಮಾಬಾದ್ ನಾಲ್ಕನೇ ಟೌನ್ ಪೊಲೀಸರು ಕಳೆದ ವರ್ಷದ ಜೂನ್‌ನಲ್ಲಿ ಈ ಪ್ರಕರಣ ದಾಖಲಿಸಿದ್ದಾರೆ. ಅದೇ ಸಮಯದಲ್ಲಿ, ದೇಶಾದ್ಯಂತ ಪಿಎಫ್‌ಐ ಚಟುವಟಿಕೆಗಳ ಕುರಿತು ಪ್ರಮುಖ ಮಾಹಿತಿಯನ್ನು ಸಂಗ್ರಹಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಹಲವಾರು ರಾಜ್ಯಗಳಲ್ಲಿ ಸುಮಾರು ನೂರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿತ್ತು.

ಇದನ್ನೂ ಓದಿ :ನಿಷೇಧಿತ ಪಿಎಫ್‌ಐ ಪ್ರಕರಣ: ತಮಿಳುನಾಡು ಸೇರಿದಂತೆ ದೇಶದ ಹಲವೆಡೆ ಎನ್‌ಐಎ ಶೋಧ

ದೇಶದಲ್ಲಿ ನರಮೇಧ ಸೃಷ್ಟಿಸಲು ಪಿಎಫ್‌ಐ ಸಂಚು ನಡೆಸುತ್ತಿದೆ ಎಂಬುದಕ್ಕೆ ಪುರಾವೆ ದೊರೆತ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಂಘಟನೆಯನ್ನು ನಿಷೇಧಿಸಿತ್ತು. ಮತ್ತೊಂದೆಡೆ, ಎನ್‌ಐಎ ಕಳೆದ ವರ್ಷ ಡಿಸೆಂಬರ್‌ನಲ್ಲಿ 11 ಜನರ ವಿರುದ್ಧ ಮೊದಲ ಚಾರ್ಜ್‌ಶೀಟ್ ಮತ್ತು ಕಳೆದ ವರ್ಷ ಮಾರ್ಚ್‌ನಲ್ಲಿ ಐವರ ವಿರುದ್ಧ ಎರಡನೇ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದೆ.

Last Updated :Dec 8, 2023, 11:09 AM IST

ABOUT THE AUTHOR

...view details